ಸೋಮವಾರ, 15 ಜೂನ್ 2026
×
ADVERTISEMENT

ರಾಜಕೀಯ ಕಾರ್ಯಕರ್ತರು, ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್: ಜಟಾಪಟಿ

Published : 23 ಮೇ 2026, 0:15 IST
Last Updated : 23 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
‘ಪರಿಶೀಲನೆ ನಂತರ ನಿರ್ಧಾರ’
ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾಡಿದ್ದ ಮನವಿಯಂತೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಪ್ರತಿ ಪ್ರಕರಣವನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರ ಕೆಲ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಲಾಗಿದೆ.
ಜಿ.ಪರಮೇಶ್ವರ, ಗೃಹಸಚಿವ
‘ಸುಳ್ಳು ಪ್ರಕರಣ ಒಪ್ಪಲಾಗದು’
ಈ ಪ್ರಕರಣಗಳು ದಾಖಲಾದ ನಂತರ ಅಪರಾಧ ಎಸಗಿದವರ ನಡತೆಯಲ್ಲಿ ಸುಧಾರಣೆಯಾಗಿದೆ. ಮೂರು ವರ್ಷಗಳಲ್ಲಿ ಯಾವ ಕೋಮು ಗಲಭೆಯೂ ನಡೆದಿಲ್ಲ. 2014ರಿಂದಲೂ ಸಮಾಜದಲ್ಲಿ ಅಶಾಂತಿ ಇತ್ತು. ಆರ್‌ಎಸ್‌ಎಸ್‌ ಎನ್ನುವ ರಾಷ್ಟ್ರೀಯ ಸರೆಂಡರ್‌ ಸಂಘದಿಂದ ಕೋಮುಗಲಭೆ ಹೆಚ್ಚಾಗಿದೆ. ಅಶಾಂತಿಗೆ ಕಾರಣರಾದವರೇ ಮತ್ತೊಂದು ಸಮುದಾಯದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ.
ಬಿ.ಕೆ.ಹರಿಪ್ರಸಾದ್‌, ವಿಧಾನಪರಿಷತ್‌ ಸದಸ್ಯ
‘ಮತಬ್ಯಾಂಕ್‌ ರಾಜಕಾರಣ’
ತುಷ್ಟೀಕರಣದ ಎಲ್ಲ ಮಿತಿಗಳನ್ನೂ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ದಾಟಿದೆ. ಇದು ಮತಬ್ಯಾಂಕ್‌ನ ಕೀಳು ರಾಜಕೀಯ. ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿ. ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್‌ ದರ್ಗಾದಲ್ಲಿ ಪವಿತ್ರ ರಾಘವ ಚೈತನ್ಯ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ, ಕೇಂದ್ರ ಸಚಿವರು, ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಅಪರಾಧ ಪ್ರಕರಣ ಸೇರಿ ಕೋಮು ಗಲಭೆಯ 13 ಪ್ರಕರಣಗಳನ್ನು ವಾಪಸ್ ಪಡೆದಿರುವುದು ಖಂಡನೀಯ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
‘ಆರೋಪದಲ್ಲಿ ಹುರುಳಿಲ್ಲ’
ರಾಜ್ಯ ಸರ್ಕಾರ ಮುಸ್ಲಿಮರ ಮೇಲಿನ ಮೊಕದ್ದಮೆಗಳನ್ನು ಮಾತ್ರ ಹಿಂಪಡೆದಿದೆ. ಓಲೈಕೆ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ಆರೋಪ ದಲ್ಲಿ ಸತ್ಯವಿಲ್ಲ. ಮುಸ್ಲಿಮರ ಜತೆಗೆ ರೈತರು, ಕನ್ನಡ ಚಳವಳಿಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇಂತಹ ಪ್ರಕರಣಗಳನ್ನು ವಾಪಸ್ ಪಡೆಯುವುದರಲ್ಲಿ ತಪ್ಪೇನಿದೆ?
ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ
‘ಅಪರಾಧಿಗಳ ಪರ ಸರ್ಕಾರ’
ರಾಜ್ಯ ಸರ್ಕಾರ ಒಂದು ಕಡೆ ಹಿಂದೂ ಕಾರ್ಯಕರ್ತರನ್ನು ಗುರಿ ಮಾಡಿ ಸುಳ್ಳು ಪ್ರಕರಣ ದಾಖಲಿಸುವ ಜೊತೆಗೆ ರೌಡಿಶೀಟ್ ತೆರೆದು ಪೊಲೀಸ್ ಇಲಾಖೆಯ ಮೂಲಕ ಕಿರುಕುಳ ಕೊಡುತ್ತಿದೆ. ಮತ್ತೊಂದೆಡೆ ಮುಸ್ಲಿಮರ ವಿರುದ್ಧದ ಅಪರಾಧ ಪ್ರಕರಣ​​ ವಾಪಸ್​​ ಪಡೆಯುತ್ತಿದೆ. ಕೆಲವು ಬೆಂಕಿ ಹಚ್ಚಿದ ಪ್ರಕರಣ, ಆಸ್ತಿ ನಷ್ಟ ಮಾಡಿದ ಪ್ರಕರಣ ಸೇರಿ ಗಂಭೀರ ಪ್ರಕರಣಗಳನ್ನು ವಾಪಸ್ ಪಡೆದುಕೊಂಡು ನಾವು ಅಪರಾಧಿಗಳ ಪರ ಎಂಬ ಕೆಟ್ಟ ಸಂದೇಶ ಕೂಡಲು ಸರ್ಕಾರ ಹೊರಟಿದೆ.
ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT