ಬೆಂಗಳೂರು: ‘ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲ. ವಿದ್ಯಾರ್ಥಿಗಳು ಪಡೆದ ಅಂಕಗಳಿಗೆ ಅನುಗುಣವಾಗಿ ಕಾಲೇಜುಗಳು ಸಿಗುತ್ತವೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದರು.

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಗಳಾದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ ಉದ್ಘಾಟಿಸಿ ಅವರು ಮಾತನಾಡಿದರು.

ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶದ ವೇಳೆ ಕೆಲ ಮಧ್ಯವರ್ತಿಗಳು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ನಂಬಿಸಿ, ಸೀಟು ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದರು. ಸೀಟ್ ಬ್ಲಾಕಿಂಗ್ನಂತಹ ಕೃತ್ಯಗಳ ಮೂಲಕ ಖಾಸಗಿ ಕಾಲೇಜುಗಳಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಅಂತಹ ವಂಚನೆ ಪ್ರಕರಣಗಳ ವಿರುದ್ಧ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹಲವು ಸುಧಾರಣಾ ಕ್ರಮಗಳು, ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ಪರೀಕ್ಷೆ ಹಾಗೂ ಸೀಟು ಹಂಚಿಕೆ ಸಂಪೂರ್ಣ ಪಾರದರ್ಶಕವಾಗಿದೆ. ಅಡ್ಡ ದಾರಿಯಲ್ಲಿ ಹೋಗಿ ಯಾರೂ ಮೋಸ ಹೋಗಬಾರದು ಎಂದು ಕಿವಿಮಾತು ಹೇಳಿದರು.

ಮುಖಚರ್ಯೆ ಆಧಾರಿತ ತಪಾಸಣೆ ವ್ಯವಸ್ಥೆ ಅಳವಡಿಕೆಯಿಂದ ನಕಲಿ ವಿದ್ಯಾರ್ಥಿಗಳ ಹಾವಳಿಗೂ ಕಡಿವಾಣ ಬಿದ್ದಿದೆ. ಸಿಇಟಿ ನಡೆದ ದಿನವೇ ಎಲ್ಲ ವಿದ್ಯಾರ್ಥಿಗಳ ಒಎಂಆರ್ ಶೀಟ್ಗಳನ್ನು ಪ್ರಾಧಿಕಾರದ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗುತ್ತಿದೆ. ಕೀ ಉತ್ತರಗಳನ್ನು ಪ್ರಕಟಿಸಲಾಗುತ್ತಿದೆ. ಅರ್ಹತಾ ಪಟ್ಟಿಯಲ್ಲಿ ವ್ಯತ್ಯಾಸವಾಗಿದ್ದರೆ ಒಎಂಆರ್ ಶೀಟ್ಗಳನ್ನು ತಾಳೆ ಮಾಡಬಹುದು. ಸೀಟು ಹಂಚಿಕೆಯಲ್ಲೂ ಪರಿಶೀಲನೆಗೆ ಅವಕಾಶ ಇರುತ್ತದೆ ಎಂದು ಹೇಳಿದರು.

ಒಂದೇ ಪ್ರವೇಶ ಪರೀಕ್ಷೆಯ ಮೂಲಕ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರತ್ಯೇಕ ರ್ಯಾಂಕ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಪದ್ಧತಿ ದೇಶದ ಇತರೆ ರಾಜ್ಯಗಳಲ್ಲಿ ಇಲ್ಲ. ಪಿಯು ಪರೀಕ್ಷೆಯ ಶೇ 50 ಹಾಗೂ ಸಿಇಟಿಯ ಶೇ 50 ಅಂಕಗಳನ್ನು ಪರಿಗಣಿಸಲಾಗುತ್ತದೆ. ಒಂದು ವಿಷಯದಲ್ಲಿ ಕಡಿಮೆ ಅಂಕ ಬಂದರೂ ಆ ವಿಷಯ ಹೊರತುಪಡಿಸಿ ಸಿದ್ಧಪಡಿಸುವ ಇತರೆ ಕೋರ್ಸ್ಗಳ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು. ದ್ವಿತೀಯ ಪಿಯು ಎರಡು ಪರೀಕ್ಷೆಯನ್ನು ಬಳಸಿಕೊಳ್ಳಬಹುದು. ಹಾಗಾಗಿ, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದರು.

ದಿ ಪ್ರಿಂಟರ್ಸ್ (ಮೈಸೂರು) ಪ್ರೈ.ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ಕುಮಾರ್, ಸಿಎಒ ಕಿರಣ್ ಸುಂದರ್ರಾಜ್, ಡೆಕ್ಕನ್ ಹೆರಾಲ್ಡ್ ಕಾರ್ಯನಿರ್ವಾಹಕ ಸಂಪಾದಕ ಕೆ.ವಿ.ಸುಬ್ರಹ್ಮಣ್ಯ, ‘ಡಾ.ಬ್ರೋ’ ಖ್ಯಾತಿಯ ಗಗನ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಸ್ಪರ್ಧಾ ಪರೀಕ್ಷೆಗಳಿಗೆ ‘ಪ್ರಜಾವಾಣಿ’ಯೇ ಆಕರ

‘ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಕರ್ನಾಟಕದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವೃದ್ಧಿಗೆ ‘ಪ್ರಜಾವಾಣಿ’ಯೇ ಪ್ರಮುಖ ಆಕರ. ಸ್ಪರ್ಧಾ ಪರೀಕ್ಷೆಗಳಲ್ಲಿ ಯಶಸ್ಸು ಕಂಡ ಯಾರನ್ನೇ ಕೇಳಿದರೂ ಈ ಮಾತು ಹೇಳುತ್ತಾರೆ’ ಎಂದು ಪ್ರಸನ್ನ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ನಿತ್ಯವೂ ದಿನ ಪತ್ರಿಕೆ ಓದುವ ಅಭ್ಯಾಸ ಮಾಡಿಕೊಂಡರೆ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ. ಸ್ಪರ್ಧಾ ಪರೀಕ್ಷೆಗಳಲ್ಲಿ ಯಶಸ್ಸು ಖಂಡಿತಾ ಸಿಗುತ್ತದೆ’ ಎಂದರು.

‘ಪ್ರಜಾವಾಣಿಯಲ್ಲಿ ಬಂದರಷ್ಟೆ ಸುದ್ದಿ ಸತ್ಯ’

‘ಚಾಟ್ ಜಿಪಿಟಿ ಸೇರಿದಂತೆ ಎಐ ತಂತ್ರಜ್ಞಾನ ನೀಡುವ ಮಾಹಿತಿಯ ವಿಶ್ವಾಸಾರ್ಹತೆ ಇನ್ನೂ ಖಚಿತವಾಗಿಲ್ಲ. ಇಂತಹ ತಾಂತ್ರಿಕ ಭರಾಟೆಯಲ್ಲೂ ‘ಪ್ರಜಾವಾಣಿ’ಯಲ್ಲಿ ಬಂದ ನಂತರವೇ ಒಂದು ಸುದ್ದಿ ಸತ್ಯ ಎಂದು ಜನರು ನಂಬುತ್ತಾರೆ’ ಎಂದು ರೇವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆ.ಬಿ.ಸಿಂಹ ಹೇಳಿದರು. ‘ಶಿಕ್ಷಣ ಸಂಸ್ಥೆಗಳೂ ಇಂತಹ ವಿಶ್ವಾಸಾರ್ಹತೆ ಉಳಿಸಿಕೊಂಡಾಗ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಬಯಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.