ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಪರಿಷತ್ತು: ಇಬ್ಬರ ನಡುವೆ ಸ್ಪರ್ಧೆ

Last Updated 18 ಜೂನ್ 2022, 18:25 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಹಾಲಿ ಅಧ್ಯಕ್ಷ ಬಿ.ಎಲ್. ಶಂಕರ್ ಹಾಗೂ ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಅವರುಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪ್ರೊ.ಕೆ.ಎಸ್. ಅಪ್ಪಾಜಯ್ಯ, ಎಂ.ಎಸ್. ಉಮೇಶ್, ಟಿ. ಪ್ರಭಾಕರ್, ರಮಾಶರ್ಮ ಹಾಗೂ ಎ. ರಾಮಕೃಷ್ಣಪ್ಪ ಅವರು ಸ್ಪರ್ಧಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನ ಬಯಸಿ ಡಾ.ಜಿ. ಲಕ್ಷ್ಮೀಪತಿ ಹಾಗೂ ಎಸ್.ಎನ್. ಶಶಿಧರ್ ಕಣದಲ್ಲಿದ್ದಾರೆ.

ಟಿ. ಚಂದ್ರಶೇಖರ್ ಮತ್ತು ಬಿ.ಎಲ್. ಶ್ರೀನಿವಾಸ ಅವರು ಸಹಾಯಕ ಕಾರ್ಯದರ್ಶಿ ಸ್ಥಾನಕ್ಕೆ, ಎಸ್. ರಾಮಸುಬ್ರಮಣಿಯನ್,ಎನ್. ಲಕ್ಷ್ಮೀಪತಿ ಬಾಬು ಅವರು ಖಜಾಂಚಿ ಸ್ಥಾನಕ್ಕೆ, ಅಮೃತ ವಿಮಲನಾಥನ್,
ಸಿ.ಪಿ. ಉಷಾರಾಣಿ, ಟಿ.ವಿ. ತಾರಕೇಶ್ವರಿ, ಪಿ. ದಿನೇಶ್ ಮಗರ್, ಆರ್.ಜಿ. ಭಂಡಾರಿ,ಬಿ.ವೈ. ವಿನೋದಾ, ವೇಮಗಲ್ ಡಿ. ನಾರಾಯಣಸ್ವಾಮಿ, ಸುಬ್ರಮಣ್ಯ ಕುಕ್ಕೆ ಹಾಗೂ ಟಿ.ಡಿ. ಸುರೇಶ್ ಅವರು ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಇದೇ 26ರಂದು ಪರಿಷತ್ತಿನ ಆವರಣದಲ್ಲಿ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT