ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳ ಆದಾಯದಲ್ಲಿನ ಖೋತಾ ಸರಿದೂಗಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್ಗೆ 56 ಪೈಸೆ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ 15 ಪೈಸೆಯನ್ನು ಗ್ರಾಹಕರಿಂದ ಹೆಚ್ಚುವರಿಯಾಗಿ ವಸೂಲಿ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಅನುಮತಿ ನೀಡಿದೆ.

ಆದರೆ, ಮೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್ಗೆ 9 ಪೈಸೆ, ಹೆಸ್ಕಾಂ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ ಯೂನಿಟ್ಗೆ ತಲಾ 10 ಪೈಸೆ ಪ್ರಕಾರ ಗ್ರಾಹಕರಿಗೆ ಹಿಂತಿರುಗಿಸುವಂತೆ ಆದೇಶಿಸಲಾಗಿದೆ. ಮೂರು ಕಂಪನಿಗಳಲ್ಲಿನ ಗ್ರಾಹಕರು 2024–25ನೇ ಸಾಲಿನಲ್ಲಿ ಬಳಸಿದ್ದ ವಿದ್ಯುತ್ಗೆ ಇದು ಅನ್ವಯವಾಗಲಿದೆ.

ಕಳೆದ ವರ್ಷದ ಮಾರ್ಚ್ನಲ್ಲಿ ಆಯೋಗವು ಮೂರು ವರ್ಷಗಳ ಅವಧಿಗೆ ಬಹುವಾರ್ಷಿಕ ದರ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಈ ವರ್ಷದ ಏಪ್ರಿಲ್ ಒಂದರಿಂದಲೇ ದರ ಹೆಚ್ಚಳವಾಗಿದೆ. ಈಗ 2024–25ನೇ ಸಾಲಿನಲ್ಲಿ ಬಳಸಿದ ವಿದ್ಯುತ್ಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದರಿಂದ, ಮೇ ತಿಂಗಳ ಬಿಲ್ನ ಮೊತ್ತದಲ್ಲಿ ಬೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಭಾರಿ ಹೊರೆಬೀಳಲಿದೆ.

ಹೀಗಾಗಿ, ಗ್ರಾಹಕರಿಗೆ ಮೇ ತಿಂಗಳಲ್ಲಿ ಒಮ್ಮೆಗೆ ‘ಡಬಲ್ ಶಾಕ್’ ಆಗಲಿದೆ. ವಾರ್ಷಿಕ ಪರಿಷ್ಕರಣೆಯಿಂದ ಒಂದೆಡೆ ಬಿಲ್ ಹೆಚ್ಚಾಗಲಿದ್ದರೆ, ಮತ್ತೊಂದೆಡೆ 2024–25ನೇ ಸಾಲಿನ ಹೆಚ್ಚುವರಿ ಮೊತ್ತವನ್ನೂ ಪಾವತಿಸಬೇಕಾಗುತ್ತದೆ.

ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಸಲ್ಲಿಸಿದ್ದ 2024–25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯಲ್ಲಿ ಸುಮಾರು ₹4,900 ಕೋಟಿ ಆದಾಯ ಖೋತಾ ಆಗಿದೆ ಎಂದು ಪ್ರಸ್ತಾಪಿಸಲಾಗಿತ್ತು. ಅದನ್ನು ತುಂಬಿಸಿಕೊಡುವ ಉದ್ದೇಶದಿಂದ ಆಯೋಗವು ಹೆಚ್ಚುವರಿಯಾಗಿ ಗ್ರಾಹಕರಿಂದ ಹಣ ಸಂಗ್ರಹಿಸಲು ಎರಡು ಕಂಪನಿಗಳಿಗೆ ಅನುಮತಿ ನೀಡಿ ಶುಕ್ರವಾರ ಆದೇಶ ಹೊರಡಿಸಿದೆ.

ಈ ವರ್ಷದ ಮೇ ತಿಂಗಳಿನಿಂದ 2027ರ ಏಪ್ರಿಲ್ವರೆಗೆ, ಅಂದರೆ ಒಂದು ವರ್ಷದವರೆಗೆ ಈ ಹಣವನ್ನು ಗ್ರಾಹಕರಿಂದ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. 2024ರ ಏಪ್ರಿಲ್ನಿಂದ 2025ರ ಮಾರ್ಚ್ವರೆಗೆ ಬಳಸಿರುವ ವಿದ್ಯುತ್ಗೆ ಅನುಗುಣವಾಗಿ ಎಲ್ಲ ವರ್ಗದ ಗ್ರಾಹಕರು ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ.

ಮೇ ತಿಂಗಳ 1ನೇ ತಾರೀಖಿನಿಂದ ನೀಡುವ ಬಿಲ್ನಿಂದಲೇ ಇದು ಜಾರಿಯಾಗಲಿದೆ. ಹೆಚ್ಚುವರಿ ಹಣವನ್ನು ಬಿಲ್ನಲ್ಲಿ ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ. ಕಂಪನಿಗಳು ಸಹ ಇದನ್ನು ಪ್ರತ್ಯೇಕ ಆದಾಯ ಎಂಬುದಾಗಿ ಪರಿಗಣಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಕಳೆದ ವರ್ಷದ ಮಾರ್ಚ್ನಲ್ಲಿ ದರ ಪರಿಷ್ಕರಣೆ ಮಾಡಿದಾಗ ಕೆಇಆರ್ಸಿ ಅಂದಾಜು ಮಾಡಿದ್ದ ಲೆಕ್ಕಾಚಾರಕ್ಕಿಂತ ವೆಚ್ಚ ಹೆಚ್ಚಾಗಿದ್ದರೆ, ಆದಾಯದಲ್ಲಿ ಖೋತಾ ಆಗಿದೆ. ಇದರ ನಡುವೆ ಸಮತೋಲನ ಕಾಪಾಡಲು ದರ ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಎಸ್ಕಾಂಗಳು ಕೆಇಆರ್ಸಿಗೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಿದ್ದವು. ಖೋತಾ ಹಣದ ಲೆಕ್ಕಾಚಾರವನ್ನು ಆಯೋಗ ಪೂರ್ಣವಾಗಿ ಒಪ್ಪದೆ ಇದ್ದರೂ, ಬಹುತೇಕ ವಿಷಯಗಳಲ್ಲಿ ಸಮ್ಮತಿ ಸೂಚಿಸಿದೆ.

ಬಾಡಿಗೆದಾರರಿಗೆ ಕಿರಿಕಿರಿ

‘ಬೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ 2024–25ನೇ ಸಾಲಿನಲ್ಲಿ ಬಳಸಿರುವ ವಿದ್ಯುತ್ಗೆ, ಈಗ ಹೆಚ್ಚುವರಿ ಹಣ ವಸೂಲಿ ಮಾಡುವುದರಿಂದ ಬಾಡಿಗೆ ಮನೆಗಳಲ್ಲಿ ಇರುವ ಗ್ರಾಹಕರಿಗೆ ಕಿರಿಕಿರಿಯಾಗಲಿದೆ. ಆಗ ಬಾಡಿಗೆ ಮನೆಯಲ್ಲಿ ಇದ್ದವರು ಈಗ ಬದಲಾಗಿರುತ್ತಾರೆ. ಹೊಸದಾಗಿ ಬಾಡಿಗೆಗೆ ಬಂದಿರುವವರು ಈಗ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿರುವುದರಿಂದ ಸಮಸ್ಯೆ ಎದುರಾಗಲಿದೆ’ ಎಂದು ಗ್ರಾಹಕರೊಬ್ಬರು ತಿಳಿಸಿದರು.

‘ಸಾಮಾನ್ಯವಾಗಿ ಬಾಡಿಗೆದಾರರೇ ವಿದ್ಯುತ್ ಬಿಲ್ ಪಾವತಿಸುತ್ತಾರೆ. ಮನೆಯ ಮಾಲೀಕರು ಪಾವತಿಸುವುದಿಲ್ಲ. ಮೇ ತಿಂಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಲು ಮುಂದಾದಾಗ, ಬಾಡಿಗೆದಾರರು ಎರಡು ವರ್ಷಗಳ ಹಿಂದಿನ ಹಣವನ್ನು ನಾವು ಈಗ ಯಾಕೆ ನೀಡಬೇಕು ಎಂದು ತಕರಾರು ತೆಗೆಯುತ್ತಾರೆ. ಮಾಲೀಕರು ಮತ್ತು ಬಾಡಿಗೆದಾರರ ಮಧ್ಯೆ ಇದು ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ’ ಎಂದು ಅಭಿಪ್ರಾಯಪಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.