ಪ್ರತಿ ದಿನ ಕೆಲಸ ಅರಸಿ ಹಳ್ಳಿಯಿಂದ ನಗರಕ್ಕೆ ಬರುವ ಬಡವರಿಗೆ ತೈಲ ಬೆಲೆ ಏರಿಕೆಯಿಂದ ಕಷ್ಟವಾಗುತ್ತಿದೆ. ದುಡಿಮೆಯ ಒಂದು ಭಾಗವನ್ನು ಪೆಟ್ರೋಲ್ಗಾಗಿ ವ್ಯಯಿಸಬೇಕಾಗುತ್ತದೆ. ಇದರಿಂದ ಕೂಲಿ ಕಾರ್ಮಿಕರು ಹೆಚ್ಚಿನ ಸಮಸ್ಯೆ ಅನುಭವಿಸುತ್ತಾರೆ. ಭಾನುವಾರ ₹109 ಇದ್ದ ಪೆಟ್ರೋಲ್ ಬೆಲೆ ಸೋಮವಾರ ಬೆಳಿಗ್ಗೆ ₹111 ಆಗಿದೆ. ಹೀಗಾದರೆ ಸಾಮಾನ್ಯ ಜನ ಜೀವನ ಸಾಗಿಸುವುದು ಹೇಗೆ?

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಇದರ ಮಧ್ಯೆ ಕಳೆದ ಒಂದು ವಾರದಿಂದ ತೈಲ ಬೆಲೆಯಲ್ಲಿ ಸುಮಾರು ₹8 ಏರಿಕೆ ಮಾಡಲಾಗಿದೆ. ಇದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆಟೊ, ಬಸ್ ದರ ಕೂಡ ಹೆಚ್ಚಾಗುತ್ತದೆ. ಎಲ್ಲ ವಸ್ತುಗಳು ಮತ್ತಷ್ಟು ದುಬಾರಿಯಾಗುತ್ತವೆ. ಇದೊಂದು ಅವೈಜ್ಞಾನಿಕ ನಿರ್ಧಾರ.

ಜನಪ್ರತಿನಿಧಿಗಳಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ. ಚುನಾವಣೆ ಪೂರ್ವದಲ್ಲಿ ಒಂದು ರೀತಿ, ಚುನಾವಣೆ ನಂತರ ಮತ್ತೊಂದು ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಜನರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಉನ್ನತ ಸ್ಥಾನದಲ್ಲಿ ಇರುವವರು ತೆಗೆದುಕೊಳ್ಳುವ ನಿರ್ಧಾರಗಳಿಂದ ಮಧ್ಯಮ ವರ್ಗದವರು ಸಂಕಷ್ಟ ಅನುಭವಿಸುತ್ತಾರೆ. ಜನಪ್ರತಿನಿಧಿಗಳು ರಸ್ತೆಗೆ ಬಂದು ಜನರ ತೊಂದರೆ ಏನು ಎಂಬುವುದನ್ನು ಕೇಳುವುದಿಲ್ಲ.

ಬೆಲೆ ಹೆಚ್ಚಾದ ನಂತರ ವಿದ್ಯುತ್ ಚಾಲಿತ ವಾಹನ ಬಳಕೆಗೆ ಎಲ್ಲರು ಆಸಕ್ತಿ ತೋರುತ್ತಾರೆ. ಆದರೆ ವಿದ್ಯುತ್ ಚಾಲಿತ ವಾಹನಗಳ ಸರ್ವೀಸ್ ಸ್ಟೇಷನ್ಗಳು ಎಲ್ಲೂ ಇಲ್ಲ. ಕೆಟ್ಟು ನಿಂತರೆ ದುರಸ್ತಿ ಮಾಡುವುದೇ ಸವಾಲು. ನಿರ್ವಹಣೆ ಕಷ್ಟ. ಜನಪ್ರತಿನಿಧಿಗಳು ಜನರ ತೆರಿಗೆಯಿಂದ ಜೀವನ ನಡೆಸುತ್ತಾರೆ. ಅವರ ಆದಾಯದ ಮೂಲವಾದ ಜನರ ಬಗ್ಗೆ ಕಾಳಜಿ ಇಲ್ಲ. ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ ಎನ್ನುವವರು ಚುನಾವಣೆ ರ್ಯಾಲಿಗಳಿಗೆ ನೂರಾರು ವಾಹನ ಬಳಸುತ್ತಾರೆ. ಅವರಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯವೇ?

ಪದೇ ಪದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುತ್ತಿರುವುದು ದೇಶವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ. ಯಾವುದೇ ರಾಷ್ಟ್ರ ಜನರ ಚಲನಶೀಲತೆಯಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಇದ್ದಕ್ಕಿದ್ದ ಹಾಗೆ ಇಂಧನ ಬೆಲೆಯನ್ನು ₹7 ಹೆಚ್ಚಿಸಿ ಜನರ ಓಡಾಟದ ಶಕ್ತಿಯನ್ನು ಬಲವಂತವಾಗಿ ಕುಂದುವಂತೆ ಮಾಡಿರುವುದು ದೇಶದ ಅಭಿವೃದ್ಧಿಗೆ ಕೊಳ್ಳಿ ಇಟ್ಟಂತಾಗಿದೆ.

– ಜೀವಿಕಾ ಮಂಜುನಾಥ್, ರಂಟವಳಲು, ಮಧುಗಿರಿ

ಮುಂಗಾರಿನ ಹಂಗಾಮಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರೈತರ ಕೃಷಿ ಉತ್ಪಾದನಾ ವೆಚ್ಚ ಅಧಿಕಗೊಳ್ಳುವಂತೆ ಮಾಡಿದೆ. ಮೊದಲು ಒಂದು ಗಂಟೆ ಟ್ರ್ಯಾಕ್ಟರ್ ಉಳುಮೆಗೆ ₹1,000 ಬಾಡಿಗೆಯಿತ್ತು. ಈಗ ಅನಿವಾರ್ಯವಾಗಿ ಬಾಡಿಗೆ ಹೆಚ್ಚಾಗಲಿದೆ. ಇಂಧನ ಬೆಲೆ ಏರಿಕೆ ರೈತರ ಮೇಲೆ ಅಧಿಕ ಹೊರೆ ಹೊರಿಸಿದೆ.

ಇಂಧನ ಬೆಲೆ ಜಾಸ್ತಿಯಾಗಬಾರದಿತ್ತು. ಯಾವುದೇ ಬೆಲೆ ಏರಿಸಿದಾಗ ಅದು ಜನರಿಗೆ ಹರೆಯಾಗುತ್ತದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾದಾಗ ನಮ್ಮ ದೇಶದಲ್ಲೂ ಬೆಲೆ ಏರುವುದು ಸಹಜ. ಸರ್ಕಾರಗಳು ಬೆಲೆ ಏರಿಸುವಂತಹ ಕೆಲಸಕ್ಕಿಂತ ಅದಕ್ಕೆ ಪರ್ಯಾಯ ಮಾರ್ಗ ಹುಡುಕಿದಾಗ ಸಮತೋಲನ ಕಾಪಾಡಬಹುದು.

– ಕೆ.ಎಸ್. ಕೃಷ್ಣಪ್ರಸಾದ್, ಕೊಡಿಗೇನಹಳ್ಳಿ

ಕೊಲ್ಲಿರಾಷ್ಟ್ರಗಳ ಯದ್ಧದಿಂದ ಪೆಟ್ರೋಲ್ ದರ ಹೆಚ್ಚಾಗಿದೆ. ಅಲ್ಲಿ ಯುದ್ದ ಕಡಿಮೆಯಾದರೆ ಪ್ರೆಟ್ರೋಲ್ ಬೆಲೆ ಯಥಾಸ್ಥಿತಿಗೆ ಬರಲಿದೆ. ಅದುವರೆಗೆ ಜನ ಸಾಮಾನ್ಯರು ಅನುಸರಿಸಿಕೊಳ್ಳಬೇಕು. ಆದರೆ ರಾಜ್ಯ ಸರ್ಕಾರ ಮದ್ಯದ ಬೆಲೆಯನ್ನು ದಿಢೀರ್ ಏರಿಕೆ ಮಾಡಿರುವುದು ಸಾಮಾನ್ಯರ ಮನೆಯಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ.

– ಎಂ.ಸಿ. ಮಲ್ಲಿಕಾರ್ಜುನ್, ಮಾಚೇನಹಳ್ಳಿ

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬದ ಮಾಸಿಕ ವೆಚ್ಚದ ಮೇಲೆ ಪರಿಣಾಮ ಬೀರಿದೆ. ದಿನನಿತ್ಯ ವಾಹನ ಬಳಕೆ ಮಾಡುವ ಉದ್ಯೋಗಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಇದು ಹೆಚ್ಚುವರಿ ಹೊರೆ ತಂದಿದೆ.

ಇಂಧನ ದರ ಏರಿಕೆಯಿಂದ ಕೇವಲ ವಾಹನ ವೆಚ್ಚವಲ್ಲ, ತರಕಾರಿ, ದಿನಸಿ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಸರ್ಕಾರ ಜನಸಾಮಾನ್ಯರ ಪರಿಸ್ಥಿತಿಯನ್ನು ಗಮನಿಸಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನಿರಂತರ ದರ ಏರಿಕೆಯಿಂದ ಎಲ್ಲ ರೀತಿಯ ನಿರ್ವಹಣೆ ಕಷ್ಟಕರವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-17-1045828815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.