ಒಮ್ಮೆಲೆ ನೋಡಿದರೆ, ಇವು ಛಾಯಾಚಿತ್ರಗಳೇ ಇರಬೇಕು; ಎಷ್ಟು ಮೋಹಕವಾಗಿ ಸೆರೆಹಿಡಿದಿದ್ದಾರೆ ಅನ್ನಿಸಿಬಿಡುತ್ತದೆ. ಹತ್ತಿರ ತೆರಳಿ ಒಂದೊಂದೇ ಚಿತ್ರವನ್ನು ವೀಕ್ಷಿಸತೊಡಗಿದರೆ, ನಮ್ಮ ಮನಸಿನಲ್ಲಿ ವರ್ಣಚಿತ್ರದ ಕ್ಯಾನ್ವಾಸ್ ಅರಳುತ್ತಾ ಹೋಗುತ್ತದೆ.

ನಗರದ ಚಿತ್ರಕಲಾಪರಿಷತ್ತಿನಲ್ಲಿ ಆರಂಭಗೊಂಡಿರುವ ಐದು ದಿನಗಳ ‘ನಮ್ಮ ಪರಂಪರೆ; ಕರ್ನಾಟಕದ ಬೇರುಗಳು’ ಎನ್ನುವ ವರ್ಣಚಿತ್ರಗಳ ಗುಂಪು ಕಲಾಪ್ರದರ್ಶನ ಗಮನ ಸೆಳೆಯುತ್ತದೆ.

ಇಲ್ಲಿ ಕಲಾ ವಿದ್ಯಾರ್ಥಿಗಳ ಕಲಾಕೃತಿಗಳಿವೆ. ಹವ್ಯಾಸಿ ಕಲಾವಿದರು, ಹಿರಿಯರ ಚಿತ್ರಗಳೂ ಇವೆ. ಕರ್ನಾಟಕದ ಪರಂಪರೆಯು ವರ್ಣಚಿತ್ರಗಳಲ್ಲಿ ಅನಾವರಣಗೊಂಡಿದೆ. ಪ್ರಕೃತಿಯ ಸೊಬಗು ಬಣ್ಣದಲ್ಲಿ ವಿಭಿನ್ನವಾಗಿ ಅಂದಗೊಂಡಿದೆ. ಊರು– ಕೇರಿಗಳ ಸೊಬಗು ಸೆರೆಯಾಗಿದೆ. ಪ್ರಮುಖ ದೇಗುಲಗಳನ್ನು ಮರುಸೃಷ್ಟಿಗೊಳಿಸಲಾಗಿದೆ. ಹಿರಿ, ಕಿರಿಯ 22 ಕಲಾವಿದರು ಒಂದೆಡೆ ಕಲೆತು, ತಾವು ಕಂಡದ್ದಕ್ಕೆ ಅಭಿವ್ಯಕ್ತಿಯ ರೂಪ ನೀಡಿದ್ದಾರೆ.

ಕಲಾವಿದರಾದ ಎಸ್.ಸಿದ್ಧೇಶಗೌಡ, ಟಿ.ಎಚ್.ಪ್ರಶಾಂತ್ ಕುಮಾರ್, ಶಾಂತಕುಮಾರ್, ಆರ್.ಲೋಕೇಶ, ಸಿ.ಗಿರಿಜಾ, ಎಂ.ಎಸ್.ಮನೋಜ್, ಡಿ.ಆರ್.ಹೇಮಂತರಾಜು (ತುಮಕೂರು), ಎಸ್.ಜೆ.ಶಿವಕುಮಾರ್ (ಕಲಬುರಗಿ), ವೀಣಾ ಆರ್.ನಂದಿ, ಎಂ.ವಿನೋದ್ ಕುಮಾರ್( ಬೆಂಗಳೂರು), ಬಿ.ಎಂ.ಭೈರವ, ಎಚ್.ಎನ್.ಯೋಗೀಶ್, ಬಿ.ಎನ್.ಯೋಗೀಶ್ (ಮಂಡ್ಯ), ಎನ್.ಹರೀಶ್, ಚೇತನ್ ಚುಕ್ಕಿ (ಆನೇಕಲ್), ಎಂ.ಎಚ್.ವಿಶ್ವನಾಥ್ (ಯಾದಗಿರಿ), ಡಿ.ತೇಜಸ್ವಿನಿ (ಮೈಸೂರು), ಮಲ್ಲಿಕಾರ್ಜುನ ತರನಗಟ್ಟಿ (ಬೆಳಗಾವಿ) ಅವರ ವರ್ಣಚಿತ್ರಗಳು ಮುದ ನೀಡುತ್ತವೆ. ಅತಿಥಿ ಕಲಾವಿದರಾದ ಚಂದ್ರಶೇಖರ್, ಮಲ್ಲಪ್ಪ ಹಳ್ಳಿ (ತುಮಕೂರು), ಎನ್.ಕಾಂತರಾಜು (ಬೆಂಗಳೂರು) ಅವರ ಚಿತ್ರಗಳು ಅರ್ಥಪೂರ್ಣವಾಗಿ ಇವೆ.

ಯುವ ಕಲಾವಿದ ಎಂ.ಎಚ್.ವಿಶ್ವನಾಥ್ ಅವರು ಮೈಸೂರು ಅರಮನೆಯ ಮುಖ್ಯದ್ವಾರವನ್ನು ಬಣ್ಣಗಳಲ್ಲಿ ಅರಳಿಸಿದ್ದಾರೆ. ಅಲ್ಲದೆ, ಅರಮನೆ ಎದುರಿಗಿನ ಎರಡು ಪ್ರಮುಖ ತಾಣಗಳಿಗೆ ಚಿತ್ರರೂಪ ನೀಡಿದ್ದಾರೆ. ಹಂಪಿಯ ವಿರೂಪಾಕ್ಷ ದೇಗುಲಕ್ಕೆ ಸಮೀಪದ ಭೀಮ ದ್ವಾರವನ್ನೂ ಚಿತ್ರಿಸಿದ್ದಾರೆ.

ಶಾಂತಕುಮಾರ್ ಅವರ ಕಣ್ಣ ತುಂಬೆಲ್ಲಾ ಬಣ್ಣ ಬಣ್ಣದ ದೋಣಿಗಳೇ ತುಂಬಿವೆ. ಕಡಲ ತಡಿಯಲ್ಲಿ ಮೂರ್ನಾಲ್ಕು ದಿನ ಕಳೆದು, ಅಲ್ಲಿ ಕಂಡದ್ದನ್ನು ವಿಭಿನ್ನವಾಗಿಯೇ ಅಭಿವ್ಯಕ್ತಗೊಳಿಸಿದ್ದಾರೆ.

ಮಲ್ಲಿಕಾರ್ಜುನ ತರನಗಟ್ಟಿ ಮೈಸೂರಿನಲ್ಲಿ ಕಲಾವಿದ್ಯಾರ್ಥಿ. ಮೈಸೂರಿನ ಹೃದಯಭಾಗವಾದ ಕೃಷ್ಣರಾಜೇಂದ್ರ ವೃತ್ತ, ಶೃಂಗೇರಿಯ ಶಾರದಾಂಬೆ ದೇಗುಲ, ಐಹೊಳೆಯ ದುರ್ಗಾ ದೇಗುಲ, ಬಾದಾಮಿಯ ಭೂತನಾಥ ಮಂದಿರಗಳಿಗೆ ಅವರು ಬಣ್ಣದಲ್ಲಿ ಜೀವ ತುಂಬಿದ್ದಾರೆ.

ಹೇಮಂತರಾಜು ಅವರ ಚಿತ್ರ ಸ್ವರೂಪವು ಸಂಪೂರ್ಣ ಕಲೆಯದ್ದು. ಕರಾವಳಿ ಮಣ್ಣಿನ ಯಕ್ಷಗಾನದ ಸನ್ನಿವೇಶಗಳನ್ನು ಅವರು ಕುಂಚದಲ್ಲಿ ಸೆರೆಹಿಡಿದಿದ್ದಾರೆ.

ವಿನೋದ್ ಕುಮಾರ್ ಅವರಿಗೆ ಗಣೇಶನ ಮೇಲೆ ವಿಶೇಷ ಪ್ರೀತಿ. ಅದಕ್ಕಾಗಿ ಗಣೇಶ ಮಂದಿರ ಇರುವ ಪಾರಂಪರಿಕ ತಾಣಗಳಲ್ಲಿ ದಿನಗಳೆದು, ಅದಕ್ಕೆ ಚಿತ್ರ ರೂಪವನ್ನು ವಿಶಿಷ್ಟವಾಗಿಯೇ ನೀಡಿದ್ದಾರೆ. ಅದರಲ್ಲೂ ಹೊಯ್ಸಳ ಶೈಲಿಯ ಗಣೇಶ ಕಲಾಕೃತಿಗಳೇ ಹೆಚ್ಚಾಗಿವೆ.

ಸಿದ್ಧೇಶ್ ಗೌಡ ಅವರನ್ನು ಸೆಳೆದದ್ದು ಶಿರಸಿ ನಗರ. ಅಲ್ಲಿನ ಬೀದಿಗಳಲ್ಲಿ ಸುತ್ತಿ ಊರು, ರಸ್ತೆಗಳನ್ನು ವರ್ಣಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಕಲೆಯೊಂದಿಗೆ ಬೆರೆತಿರುವ ಪ್ರಶಾಂತ್ ಕುಮಾರ್ ಅವರು ಐಹೊಳೆ, ಪಟ್ಟದಕಲ್ಲಿನ ಚಿತ್ರಣವನ್ನು ಆಕರ್ಷಕವಾಗಿಯೇ ಮರು ಸೃಷ್ಟಿಸಿದ್ದಾರೆ.

ಎನ್.ಹರೀಶ್ ಅವರ ಹೆಚ್ಚಿನ ಚಿತ್ರಗಳಲ್ಲಿ ಬಣ್ಣದ ವೈಭವ ಎದ್ದು ಕಾಣುತ್ತದೆ. ಕೆಂದಾವರೆ, ಪ್ರಕೃತಿ, ಜೋಗ ಜಲಪಾತದ ವೈಭವ, ಹೆಣ್ಣುಮಕ್ಕಳ ಭಾವನೆಗಳಿಗೆ ಬಣ್ಣ ತುಂಬಿದ್ದಾರೆ.

ಪ್ರದರ್ಶನ ಆಯೋಜಕರಲ್ಲಿ ಒಬ್ಬರಾದ ಕಲಾವಿದ ಕಾಂತರಾಜು ಅವರು ಹಂಪಿಯನ್ನು ಚಿತ್ರಿಸಿರುವ ರೀತಿ ಮನಮೋಹಕವಾಗಿದೆ. ವಿದೇಶಗಳಲ್ಲೂ ಕಲಾ ಪ್ರದರ್ಶನ ನೀಡಿರುವ ಅವರು, ಹಲವಾರು ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಾ ಬಂದಿದ್ದಾರೆ.

ಕಾಂತರಾಜು ಅವರ ಪತ್ನಿ ವೀಣಾ ಆರ್. ನಂದಿ ಅವರಂತೂ ಶಿಲ್ಪಕಲಾಕೃತಿಗಳಿಗೆ ಚಿತ್ರದ ಮೂಲಕ ಜೀವ ನೀಡುವ ಪ್ರಯತ್ನ ಮಾಡಿದ್ದಾರೆ. ಗರುಡ, ಗಣೇಶನ ಚಿತ್ರಗಳು ವಿಶೇಷವಾಗಿವೆ.

‘ವರ್ಣಚಿತ್ರ ಕಲೆ ಈಗ ಕಡಿಮೆಯಾಗುತ್ತಿದೆ. ಯುವಕಲಾವಿದರಿಗೆ ತರಬೇತಿ ನೀಡಲೆಂದೇ ವಿಶೇಷ ಚಟುವಟಿಕೆಯನ್ನು ರೂಪಿಸಿ, ಅವರಿಗೆ ಇಷ್ಟವಾದ ಕ್ಷೇತ್ರಗಳಿಗೆ ಮೂರ್ನಾಲ್ಕು ದಿನದ ಪ್ರವಾಸ ಕಳುಹಿಸಲಾಗಿತ್ತು. ಅಲ್ಲಿ ಕಂಡದ್ದನ್ನು ವರ್ಣಚಿತ್ರದಲ್ಲಿ ಅವರು ಸೃಷ್ಟಿಸಿದ್ದಾರೆ. ಬಣ್ಣದ ಮಹತ್ವವನ್ನು ಅವರಿಗೆ ತಿಳಿಸಿಕೊಡಲಾಗಿದ್ದು, ಎಲ್ಲರ ಕೃತಿಗಳೂ ಚೆನ್ನಾಗಿ ಮೂಡಿಬಂದಿವೆ’ ಎಂದು ಅಂತರರಾಷ್ಟ್ರೀಯ ವರ್ಣಚಿತ್ರ ಸೊಸೈಟಿಯ ಕರ್ನಾಟಕ ಅಧ್ಯಕ್ಷರೂ ಆಗಿರುವ ಕಾಂತರಾಜು ಹೇಳುತ್ತಾರೆ.

150ಕ್ಕೂ ಹೆಚ್ಚು ಕಲಾಕೃತಿಗಳನ್ನು ಭಾನುವಾರದವರೆಗೂ ವೀಕ್ಷಿಸಲು ಅವಕಾಶವಿದೆ.

Cut-off box - ಗುರುವಿಗೆ ಗೌರವ ಈ ಪ್ರದರ್ಶನದಲ್ಲಿ ಗುರು ಒಬ್ಬರಿಗೆ ಗೌರವ ಸಲ್ಲಿಸಿ ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ವಿಶೇಷ. ಚಿತ್ರದುರ್ಗ ಮೂಲದವರಾದರೂ ಮಂಗಳೂರಿನಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಯುವ ಕಲಾವಿದರನ್ನು ತಯಾರು ಮಾಡಿದ್ದ ಸೈಯದ್ ಆಸಿಫ್ ಆಲಿ ಅವರು ತಾವು ರೂಪಿಸಿದ್ದ ಕಲಾಕೃತಿಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಬೇಕಿತ್ತು. ಕಳೆದ ತಿಂಗಳು ಅಕಾಲಿಕವಾಗಿ ನಿಧನರಾದರು. ಅವರ ನೆನಪಿನೊಂದಿಗೆ ಭಾವಚಿತ್ರದ ಜತೆಗೆ ಎರಡು ಕಲಾಕೃತಿ ಪ್ರದರ್ಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.