ವಲಯ 3ರ ಕೌಶಲರಹಿತ ಕಾರ್ಮಿಕರಿಗೆ ವೇತನ ₹ 19300 ಇರಲಿದೆ. ಹೆಚ್ಚು ಕೌಶಲಪೂರ್ಣ ಕಾರ್ಮಿಕರು ಇರುವ ವಲಯ 1ಕ್ಕೆ ₹ 31100 ರವರೆಗೆ ಏರಿಕೆ ಮಾಡಲಾಗಿದೆ. ಎರಡು ವರ್ಷಗಳ ₹ 1030 ಮೊತ್ತದ ವೇರಿಯಬಲ್ ಡಿಯರ್‌ನೆಸ್ ಭತ್ಯೆಯನ್ನು (ವಿಡಿಎ) ಕನಿಷ್ಠ ವೇತನದಲ್ಲಿ ಸೇರಿಸಲಾಗಿದೆ. ಕನಿಷ್ಠ ವೇತನ ಲೆಕ್ಕಾಚಾರ ಮಾಡಲು ರಾಜ್ಯವನ್ನು ಮೂರು ವಲಯಗಳಾಗಿ ವರ್ಗೀಕರಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರದೇಶವು ವಲಯ 1 ರ ಅಡಿಯಲ್ಲಿ ಬರಲಿದೆ. ವಲಯ 2 ರಲ್ಲಿ ಜಿಲ್ಲಾ ಕೇಂದ್ರಗಳು ಬರಲಿವೆ. ಉಳಿದ ಪ್ರದೇಶಗಳು ವಲಯ 3 ರ ಅಡಿಯಲ್ಲಿ ವರ್ಗೀಕರಿಸಲಾಗಿದೆ.