ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ನಟಿ ಉಮಾಶ್ರೀ, ನಾಟಕಕಾರರಾದ ಎಚ್.ಎಸ್. ಶಿವಪ್ರಕಾಶ್ ಹಾಗೂ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಅವರು ‘ಜೀವಮಾನ ಸಾಧನೆ ಪ್ರಶಸ್ತಿ’ಗೆ (ಗೌರವ ಪ್ರಶಸ್ತಿ) ಆಯ್ಕೆಯಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ 93 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.
‘ಜೀವಮಾನ ಸಾಧನೆ ಪ್ರಶಸ್ತಿ’ಯು ತಲಾ ₹ 50 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಗೆ 75 ಮಂದಿ ಭಾಜನರಾಗಿದ್ದು, ತಲಾ ₹ 25 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿವೆ.
75 ಮಂದಿಗೆ ವಾರ್ಷಿಕ ಪ್ರಶಸ್ತಿ 2022–23 ಸಾಲಿನ ವಾರ್ಷಿಕ ಪ್ರಶಸ್ತಿ: ಅಚ್ಯುತ್ ಕುಮಾರ್ ಲಕ್ಷ್ಮೀಪತಿ ಕೋಲಾರ ರಮೇಶ್ ಪಂಡಿತ್ ಆಶಾರಾಣಿ ಆಡುಗೋಡಿ ಶ್ರೀನಿವಾಸ್ ರಮೇಶ್ ಬೇಗಾರ್ ವೀರಭದ್ರಾಚಾರ್ ಪ್ರಕಾಶ್ ಆರ್. ಶಂಕರ ಹಲಗತ್ತಿ ಎಲ್.ಎಚ್. ರಂಗನಾಥ್ ಅನುಪಮ ಎಚ್. (ಅಂಬಿಕಾ) ಬಸವರಾಜ ಮುರುಗೋಡ ಬಿ.ಎಂ.ಎಸ್.ಪ್ರಭು ಬೇಲೂರು ರಘುನಂದನ್ ಮಂಜುನಾಥ ತಿಮ್ಮಣ್ಣ ಭಟ್ಟ ಕೆ.ಎಂ. ಕೃಷ್ಣಮೂರ್ತಿ ಅನಿಲ್ ಕುಮಾರ್ ಗ್ಯಾರಂಟಿ ರಾಮಣ್ಣ ನೂರ್ ಅಹಮ್ಮದ್ ಶೇಖ್ ಕೊಟ್ರಯ್ಯ ಹಿರೇಮಠ ಗಂಗಮ್ಮ ಅರೇರ ಎನ್.ಎಚ್. ಶಿವಕುಮಾರ್ ಎಸ್.ಎ.ಖಾನ್ ನಂದಿತಾ ಯಾದವ್ ಗುರಯ್ಯ ಸ್ವಾಮಿ 2023–24ನೇ ಸಾಲಿನ ವಾರ್ಷಿಕ ಪ್ರಶಸ್ತಿ: ಬಿ.ಸುರೇಶ್ ಜೆರ‍್ರಿ ಅನಂತರಾಮ್ ಮುರುಡಯ್ಯ ಮಯ ಬ್ರಹ್ಮಾಚಾರ್ ರಜನಿ ಗರುಡ ನೀಲಗುಂದ ಬಸವನಗೌಡ ಯ. ಮೃತ್ಯುಂಜಯ ಪವಿತ್ರಾ ಮಹಾದೇವ ವೆಂಕಪ್ಪ ಕಂಬಾಗಿ ಕೆ. ಹುಸೇನ್ ಸಾಬ್ ಪ್ರಸಾದ್ ಕುಂದೂರು ಕೆ.ಜಿ.ಮಹಾಬಲೇಶ್ವರ್ ದೇವರಾಜ್ ದೇವನಹಳ್ಳಿ ವೆಂಕಟೇಶ್ (ಹಾಪ್‌ಕಾಮ್) ಸುರೇಶ್ ರಾಮಚಂದ್ರ ಗ.ನ.ಅಶ್ವತ್ ನಾಗರಾಜ ಶಿವರುದ್ರಪ್ಪ ಕಮ್ಮಾರ ಚಿಕ್ಕ ಹನುಮಂತಯ್ಯ ಮಂಜುನಾಥ ಸಂಗನಾಳ ಜನಾರ್ದನ್ ಎಂ.ಎ. ಶೋಭಾ ರಾಘವೇಂದ್ರ ಆರ್.ಸಿ.ಉಮಾಶಂಕರ್ ಬಸವರಾಜ ಯಮನಪ್ಪ ಮಣ್ಣೂರ ರಾಜಗುರು ಹೊಸಕೋಟೆ 2024–25ನೇ ಸಾಲಿನ ವಾರ್ಷಿಕ ಪ್ರಶಸ್ತಿ: ಪ್ರಕಾಶ್ ರಾಜ್ ಸಂಚಯ ಗಣೇಶ್ ಆರ್.ಶ್ರೀನಾಥ್ ಎಚ್.ಎನ್.ದ್ಯಾಮೇಶ್ ತೋಟಪ್ಪ ಕಾಮನೂರು ಚಂದ್ರಶೇಖರ್ ಹೊನ್ನಾಳಿ ಕೆ.ಪಿ.ಅಶ್ವಥ್ ನಾರಾಯಣ ಅಬ್ರಾಹಿಂ ಡಿ. ಸಿಲ್ವಾ ಸಿದ್ದಪ್ಪ ರೊಟ್ಟಿ ರಾಯಪ್ಪ ಅನಂತಕಲ್ ವಸಂತ್ ಅಮೀನ್ ಚಂದ್ರಶೇಖರ ವಸ್ತ್ರದ ಎ. ಮುನಿನಾರಾಯಣ ಚಂದ್ರಶೇಖರ ಆಚಾರ್ ಸಿದ್ಧರಾಜು ಮಲ್ಲಿಕಾರ್ಜುನ ಜಿ. ಬಿ.ಎಸ್.ವಿದ್ಯಾರಣ್ಯ ಅಪ್ಪಣ್ಣ ರಾಮದುರ್ಗ ಶಶಿಧರ್ ಮಾಲರಾಣಿ ಬೆಳವಣಕಿ ರೇಣುಕಾ ಬಾವಳ್ಳಿ ರಂಗಸ್ವಾಮಿ ಗಿರಿಜಾ ಸಿದ್ಧಿ ಕೋಟೆ ಅನಂತು ಚಾಂದಿನಿ (ಲಿಂಗತ್ವ ಅಲ್ಪಸಂಖ್ಯಾತೆ)
15 ಮಂದಿಗೆ ದತ್ತಿನಿಧಿ ಪ್ರಶಸ್ತಿ ಅಕಾಡೆಮಿಯ ದತ್ತಿನಿಧಿ ಪ್ರಶಸ್ತಿಗೆ ಮೂರು ವರ್ಷಗಳಿಂದ 15 ಮಂದಿ ಆಯ್ಕೆಯಾಗಿದ್ದು ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಹೊಂದಿವೆ. ‘ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ಲಕ್ಷ್ಮಣ ಸುವರ್ಣ ವಿರೂಪಾಕ್ಷಯ್ಯ ಸ್ವಾಮಿ ಚನ್ನಬಸಪ್ಪ ಶಿವಪ್ಪ ಕಾಳೆ ‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ’ಕ್ಕೆ ಬಲರಾಮ ಹೇಮಾ ಮಾಲಿನಿ ನಂದರಾಣಿ ಕೋಲ್ಕತ್ತ ‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ’ಗೆ ಟಿ. ತಿಮ್ಮೇಶ್ ರೇವಣ್ಣ ಬಿ.ಎಸ್. ಲಕ್ಷ್ಮಯ್ಯ ‘ಕೆ. ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ’ಕ್ಕೆ ನರಸಿಂಹ ಪ್ರಸಾದ್ ಬಿ. ರುದ್ರೇಶ್ ಸಿದ್ಧಲಿಂಗಸ್ವಾಮಿ ಹಾಗೂ ‘ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರ’ಕ್ಕೆ ಶಂಕರ ಜಿ. ಹಿಪ್ಪರಗಿ ಫ್ಲೋರಾ ಅಚ್ಯುತ್ ಮತ್ತು ಎಚ್.ಬಿ. ಶಿವಲಿಂಗಮೂರ್ತಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.