ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಆರು ತಿಂಗಳಲ್ಲಿ 650 ಕೊಲೆ, 1,857 ಗಲಭೆಗಳು

Published 2 ಸೆಪ್ಟೆಂಬರ್ 2023, 4:27 IST
Last Updated 2 ಸೆಪ್ಟೆಂಬರ್ 2023, 4:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 2023ರ ಜನವರಿಯಿಂದ ಜೂನ್‌ವರೆಗೆ 650 ಕೊಲೆಗಳು ನಡೆದಿದ್ದು, 1,857 ಗಲಭೆ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಹೆಚ್ಚಾಗಿದೆ.

ರಾಜ್ಯ ಪೊಲೀಸ್ ಇಲಾಖೆ ಅಪರಾಧ ಕೃತ್ಯಗಳ ಅಂಕಿ– ಅಂಶ ಬಿಡುಗಡೆ ಮಾಡಿದೆ. 2022ಕ್ಕೆ ಹೋಲಿಸಿದರೆ 2023 ರಲ್ಲಿ ಅಪರಾಧಗಳು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿವೆ.

‘2022ರಲ್ಲಿ ಜನವರಿಯಿಂದ ಜೂನ್‌ವರೆಗೆ 715 ಕೊಲೆಗಳು ನಡೆದಿದ್ದವು. ಆದರೆ, ಈ ವರ್ಷ 650 ಕೊಲೆಗಳು ಆಗಿವೆ. ಆಸ್ತಿ, ಚಿನ್ನಾಭರಣ, ಶೀಲ ಶಂಕೆ, ವೈಯಕ್ತಿಕ ದ್ವೇಷ ಹಾಗೂ ಇತರೆ ಕಾರಣಗಳಿಗಾಗಿ ಕೊಲೆಗಳು ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಜನಸಂಖ್ಯೆ ಹೆಚ್ಚಿರುವ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಕೊಲೆಗಳು ನಡೆದಿವೆ’ ಎಂದರು.

ರಾಜ್ಯದಲ್ಲಿ ಆರು ತಿಂಗಳಲ್ಲಿ 650 ಕೊಲೆ, 1,857 ಗಲಭೆಗಳು

ಗಲಭೆಗಳಿಂದ ಶಾಂತಿಗೆ ಧಕ್ಕೆ

‘ಗಲಭೆ ಸೃಷ್ಟಿಸಿ ಸಾರ್ವಜನಿಕ ಶಾಂತಿಗೆ ಧಕ್ಕೆ ತಂದ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಡಿ 1,857 ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರತಿಭಟನೆ ಹಾಗೂ ಇತರೆ ಕಾರಣಕ್ಕಾಗಿ ಗುಂಪು ಸೇರಿದ್ದ ಜನ, ಗಲಭೆ ಸೃಷ್ಟಿಸಿದ್ದರು. ಗಲಭೆ ಪ್ರಕರಣ ಜೊತೆಯಲ್ಲಿ ಬೇರೆ ಬೇರೆ ಪ್ರಕರಣಗಳೂ ದಾಖಲಾಗಿವೆ’ ಎಂದು ಹೇಳಿದರು.

5,766 ವಾಹನ ಕಳ್ಳತನ

‘2023ರಲ್ಲಿ ಜನವರಿಯಿಂದ ಜೂನ್‌ವರೆಗೆ 5,766 ವಾಹನಗಳು ಕಳ್ಳತನ ಆಗಿವೆ. 2022ರಲ್ಲಿ ಆರು ತಿಂಗಳಿನಲ್ಲಿ 5,952 ವಾಹನಗಳು ಕಳ್ಳತನವಾಗಿದ್ದವು’ ಎಂದು ತಿಳಿಸಿದರು.

ರಾಜ್ಯದಲ್ಲಿ ಆರು ತಿಂಗಳಲ್ಲಿ 650 ಕೊಲೆ, 1,857 ಗಲಭೆಗಳು
ರಾಜ್ಯದಲ್ಲಿ ಆರು ತಿಂಗಳಲ್ಲಿ 650 ಕೊಲೆ, 1,857 ಗಲಭೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT