ಪದವಿ ಪ್ರಮಾಣ ಪತ್ರ ವಿತರಿಸಲು ಆದೇಶ

ಶುಕ್ರವಾರ, ಜೂಲೈ 19, 2019
24 °C

ಪದವಿ ಪ್ರಮಾಣ ಪತ್ರ ವಿತರಿಸಲು ಆದೇಶ

Published:
Updated:

ಬೆಂಗಳೂರು: ‘ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ವ್ಯಾಸಂಗ ಮಾಡಿದ 11 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪ್ರಮಾಣ ಪತ್ರ (ಪ್ರಾವಿಷನಲ್ ಡಿಗ್ರಿ ಸರ್ಟಿಫಿಕೇಟ್) ಹಾಗೂ ಅಂಕಪಟ್ಟಿ ನೀಡಿ’ ಎಂದು ಹೈಕೋರ್ಟ್, ಕೆಎಸ್‌ಒಯುಗೆ ಆದೇಶಿಸಿದೆ.

ಈ ಕುರಿತಂತೆ ನಂಜನಗೂಡಿನ ಜಿ.ಆನಂದಕುಮಾರ್, ಆರ್.ಮಹದೇವಸ್ವಾಮಿ ಸೇರಿದಂತೆ 11 ಜನ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ
ನಡೆಸಿ ಮಧ್ಯಂತರ ಆದೇಶ ನೀಡಿದೆ.

‘2013-14ನೇ ಸಾಲಿನವರೆಗೆ ನಾನಾ ಕೋರ್ಸ್‌ಗ ಳಿಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕಾಗಿ ಪದವಿ ಪ್ರಮಾಣಪತ್ರ ಹಾಗೂ ಅಂಕಪಟ್ಟಿ ವಿತರಿಸುವಂತೆ ಸರ್ಕಾರ 2017ರಲ್ಲಿ ಕೆಎಸ್‌ಒಯುಗೆ ಆದೇಶಿಸಿತ್ತು. ಆದರೆ ವಿಶ್ವವಿದ್ಯಾಲಯ ಇನ್ನೂ ಪ್ರಮಾಣಪತ್ರ ನೀಡಿಲ್ಲ’ ಎಂದು ದೂರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

2013ರಿಂದ 2018ರ ನಡುವೆ ಪದವಿ ಪೂರೈಸಿರುವ ಸುಮಾರು 90 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೆಎಸ್‌ಒಯು ಪದವಿ ಪ್ರಮಾಣಪತ್ರ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !