ಬೆಂಗಳೂರು: ಲೋಕಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಂದ ಹಲವರಿಗೆ ನಿರಾಸೆ ಉಂಟಾಯಿತು.

ಲೋಕಭವನಕ್ಕೆ ಗಣ್ಯರು ಹಾಗೂ ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಿ, ಪಾಸ್ ನೀಡಲಾಗಿತ್ತು. ಮಧ್ಯಾಹ್ನ 3 ಗಂಟೆವರೆಗೂ ಪಾಸ್ ಇದ್ದವರನ್ನು ಒಳಗೆ ಬಿಡಲಾಯಿತು. ನಂತರ ಬಂದವರನ್ನು ಸ್ಥಳಾವಕಾಶದ ಕೊರತೆ ಹೇಳಿ ಪೊಲೀಸರು ಒಳಗೆ ಬಿಡಲಿಲ್ಲ.

ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು ಉಂಟಾಯಿತು. ಪೊಲೀಸರು ಮತ್ತು ಗಣ್ಯರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಗಣ್ಯರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು. ಕೆಲವರನ್ನು ಬಲವಂತವಾಗಿ ಪೊಲೀಸರು ಎಳೆದೊಯ್ದರು.

‘ಆಹ್ವಾನ ಪತ್ರಿಕೆ ಇದ್ದರೂ ಒಳಗೆ ಏಕೆ ಬಿಡುತ್ತಿಲ್ಲ? ನೋಡಿ ಇದು ನಮಗೆ ಕೊಟ್ಟಿರುವ ಆಹ್ವಾನ ಪತ್ರಿಕೆ. ಜಾಗವಿಲ್ಲವೆಂದು ಮೊದಲೇ ಹೇಳಿದ್ದರೆ ಬರುತ್ತಿರಲಿಲ್ಲ’ ಎಂದು ಕೆಲವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ಸ್ಥಳಾವಕಾಶದ ಕೊರತೆ ಇರುವುದನ್ನು ಮನವರಿಕೆ ಮಾಡಲು ಪ್ರಯತ್ನಿಸಿದರು.

ಅನ್ಯ ಮಾರ್ಗವಿಲ್ಲದೇ ಲೋಕಭವನದ ಪ್ರವೇಶ ದ್ವಾರ, ತಿಮ್ಮಯ್ಯ ವೃತ್ತ ಹಾಗೂ ವಿಧಾನಸೌಧ ಮುಂಭಾಗ ಹಾಕಲಾಗಿದ್ದ ಎಲ್ಇಡಿ ಪರದೆಗಳಲ್ಲೇ ಸಾವಿರಾರು ಮಂದಿ ಸಮಾರಂಭ ವೀಕ್ಷಿಸಿ ಸಂಭ್ರಮಿಸಿದರು. ಸಮಾರಂಭ ವೀಕ್ಷಿಸುವ ಸಲುವಾಗಿ ನಗರದ ಹಲವೆಡೆ ಪರದೆಗಳನ್ನು ಅಳವಡಿಸಲಾಗಿತ್ತು.

ವಿವಿಧ ಜಿಲ್ಲೆಗಳಿಂದಲೂ ಮುಖ್ಯಮಂತ್ರಿ ಹಾಗೂ ಸಚಿವರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಬಂದಿದ್ದರು. ನಗರದಲ್ಲಿಯೂ ಕೆಲವು ಭಾಗಗಳಿಂದ ಮೆರವಣಿಗೆ ಮೂಲಕವೂ ಆಗಮಿಸಿದ್ದರು.

ಪ್ರಮಾಣ ವಚನ ಸ್ಥಳಕ್ಕೆ ತೆರಳಲು ಸುಮಾರು ಇಪ್ಪತ್ತು ನಿಮಿಷ ಪ್ರವೇಶದ್ವಾರದ ಮುಂದೆ ರಸ್ತೆಯಲ್ಲೇ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಗಣ್ಯರು ಕಾಯಬೇಕಾಯಿತು.

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಫ್ಲೆಕ್ಸ್, ಹೋರ್ಡಿಂಗ್ಸ್ ರಾರಾಜಿಸಿದವು. ಕೆ.ಆರ್.ವೃತ್ತ, ಹಡ್ಸನ್ ವೃತ್ತ, ಪುರಭವನ, ಮೈಸೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆ, ಬನ್ನೇರುಘಟ್ಟ ರಸ್ತೆ, ಮಾಗಡಿ ರಸ್ತೆ ಸೇರಿ ಹಲವೆಡೆ ಡಿ.ಕೆ.ಶಿವಕುಮಾರ್ಗೆ ಶುಭಾಶಯ ಕೋರುವ ಫ್ಲೆಕ್ಸ್ , ಬ್ಯಾನರ್, ಹೋರ್ಡಿಂಗ್ಸ್ಗಳನ್ನು ಅಳವಡಿಸಲಾಗಿತ್ತು.

ವಾಹನ ಸವಾರರ ಪರದಾಟ

ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಲೋಕಭವನ ಹಾಗೂ ವಿಧಾನಸೌಧ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು. ಸುಗಮ ಸಂಚಾರ ದೃಷ್ಟಿಯಿಂದ ಮಧ್ಯಾಹ್ನ 12 ರಿಂದ ರಾತ್ರಿ 8ರವರೆಗೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು.

ಕ್ವೀನ್ಸ್ ರಸ್ತೆ ಚಾಲುಕ್ಯ ರಸ್ತೆ ತಿಮ್ಮಯ್ಯ ವೃತ್ತ ವಿಧಾನಸೌಧ ಸುತ್ತಮುತ್ತ ಕೆ.ಆರ್.ಸರ್ಕಲ್ ಕಬ್ಬನ್ ಪಾರ್ಕ್ ರಸ್ತೆ ಇನ್ಫೆಂಟ್ರಿ ರಸ್ತೆಯಲ್ಲೂ ವಿಪರೀತ ದಟ್ಟಣೆ ಉಂಟಾಗಿತ್ತು. ವಾಹನಗಳು ಆಮೆಗತಿಯಲ್ಲಿ ಸಾಗುತ್ತಿದ್ದವು. ಲೋಕಭವನದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರು ಕಾರಿನಲ್ಲಿ ವಿಧಾನಸೌಧಕ್ಕೆ ಬಂದರು. ಕಲಾತಂಡಗಳು ಮುಖ್ಯಮಂತ್ರಿ ಮತ್ತು ಸಚಿವರನ್ನು ಸ್ವಾಗತಿಸಿದವು. ಆ ವೇಳೆ ವಿಧಾನಸೌಧ ಮುಂಭಾಗದ ರಸ್ತೆಯಲ್ಲಿ ವಾಹನಗಳ ಸಾಲು ಕಂಡು ಬಂತು.

ಸಮಾರಂಭಕ್ಕೆ ಪೊಲೀಸ್ ಕಟ್ಟೆಚ್ಚರ

ಲೋಕಭವನ ಸುತ್ತಮುತ್ತಲ ಭಾಗದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿತ್ತು. ಬಂದೋಬಸ್ತ್ಗಾಗಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಲೋಕಭವನ ಸುತ್ತಲಿನ ಪ್ರದೇಶದಲ್ಲಿ ಮೂವರು ಜಂಟಿ ಪೊಲೀಸರು ಆಯುಕ್ತರು ಡಿಸಿಪಿಗಳು ಎಸಿಪಿಗಳು ಮತ್ತು ಇನ್ಸ್ಪೆಕ್ಟರ್ಗಳು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳು ಕೆಎಸ್ಆರ್ಪಿ ತುಕಡಿ ಸಿಬ್ಬಂದಿ ಸೇರಿ ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಮಫ್ತಿ ಪೊಲೀಸರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಲೋಕಭವನ ವಿಧಾನಸೌಧದ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಗಣ್ಯರು ಮತ್ತು ಆಹ್ವಾನಿತರನ್ನು ಮಾತ್ರ ಸಮಾರಂಭದ ಸ್ಥಳಕ್ಕೆ ಬಿಡಲಾಯಿತು.

ಜನರು ಏನಂತಾರೆ?

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಲು ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲದೇ ದೂರದ ಗದಗ, ವಿಜಯಪುರದಿಂದಲೂ ಜನರು ರಾಜಧಾನಿಗೆ ಬಂದಿದ್ದರು. ಸಂಭ್ರಮವನ್ನು ಕಣ್ತುಂಬಿಕೊಂಡ ನಾಗರಿಕರು ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಯುವಕರಿಗೆ ಉದ್ಯೋಗ, ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡುವರೆಂಬ ನಿರೀಕ್ಷೆಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

ಅಭಿವೃದ್ಧಿಗೆ ವೇಗ ಸಿಗಲಿ

ಬೆಂಗಳೂರಿನಲ್ಲಿ ಮೂಲಸೌಕರ್ಯ ಮತ್ತಷ್ಟು ಸುಧಾರಿಸಬೇಕು. ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿದ್ದು, ಅಭಿವೃದ್ಧಿಗೆ ವೇಗ ಸಿಗಬೇಕು. ಯೋಜನೆಗಳ ಅನುಷ್ಠಾನ ಸೇರಿದಂತೆ ಆಡಳಿತಾತ್ಮಕ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು. ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದೇ ಆದ್ಯತೆ ಆಗಬೇಕು.

ಸಾದತ್ಉಲ್ಲಾ ಖಾನ್, ಸಂಪಂಗಿರಾಮನಗರ

ಯೋಜನೆ ಮುಂದುವರಿಸಿ

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸದೇ ಮುಂದುವರಿಸಬೇಕು. ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು. ಮನೆಗೆಲಸ ಮಾಡುವ ಮಹಿಳೆಯರು, ಬೀದಿಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರಿಗೆ ಸಹಾಯವಾಗುವಂಥ ಯೋಜನೆಗಳನ್ನು ಜಾರಿಗೊಳಿಸಬೇಕು.

ಗೀತಾ, ಬೀದಿಬದಿ ವ್ಯಾಪಾರಿ, ಶಾಂತಿನಗರ

ಮೆಟ್ರೊ ವಿಸ್ತರಿಸಿ

ಮೆಟ್ರೊ ಸೇವೆಯನ್ನು ಎಲ್ಲ ಕಡೆಗೂ ವಿಸ್ತರಿಸಬೇಕು. ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡಲು ಇಲಾಖೆಗಳಲ್ಲಿ ನೇಮಕಾತಿಗೆ ಕ್ರಮವಹಿಸಬೇಕು.

ಆಲೆನ್ ಅಭಿಜಿತ್, ಕೊತ್ತನೂರು

ಉತ್ತಮ ಆಡಳಿತ ಕೊಡಲಿ

ಸಿದ್ಧರಾಮಯ್ಯ ಅವರು ಉತ್ತಮ ಆಡಳಿತ ನೀಡಿದ್ದರು. ಅದೇ ಮಾದರಿಯಲ್ಲಿ ಜನಪರ ಸರ್ಕಾರವನ್ನು ಡಿ.ಕೆ.ಶಿವಕುಮಾರ್ ಮುನ್ನಡೆಸಬೇಕು. ಕಟ್ಟಕಡೆಯ ವ್ಯಕ್ತಿಗೂ ಎಲ್ಲ ಸೌಕರ್ಯಗಳು ಸಿಗಬೇಕು. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು

ಮಹಾಲಿಂಗ ಲಮಾಣಿ, ಶಿರಹಟ್ಟಿ, ಗದಗ

ನೇಮಕಾತಿ ನಡೆಸಲಿ

ಯುವಕರು, ಮಹಿಳೆಯರು, ಹಿಂದುಳಿದವರ ಕಲ್ಯಾಣಕ್ಕೆ ಶ್ರಮಿಸಬೇಕು. ಕಳೆದ 8 ವರ್ಷಗಳಿಂದ ಯಾವುದೇ ಉದ್ಯೋಗ ನೇಮಕಾತಿ ನಡೆದಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಅವ್ಯವಸ್ಥೆಯನ್ನು ಸರಿಪಡಿಸಿ, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು

ಸಂತೋಷ್ ಕುಮಾರ್ ನಾಯ್ಕ್, ಹುಣಸಗಿ, ಯಾದಗಿರಿ

ಒಳ್ಳೆಯ ಕೆಲಸಗಳು ಆಗುತ್ತವೆ

ಬೆಲೆ ಏರಿಕೆ ಆಗುತ್ತಿರುವುದನ್ನು ತಡೆಗಟ್ಟಲಿ. ಶ್ರಮಿಕರು, ಕಾರ್ಮಿಕರಿಗೆ ಒಳ್ಳೆಯ ಕೆಲಸ ಮಾಡಿಕೊಡಬೇಕು. ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಓಡಾಡುವುದನ್ನು ತಪ್ಪಿಸಬೇಕು. ತಮಿಳುನಾಡಿನಲ್ಲಿ ಒಳ್ಳೆಯ ಸರ್ಕಾರ ಬಂದಿದೆ. ಇಲ್ಲಿಯೂ ಮಹಿಳೆಯರು– ಮಕ್ಕಳಿಗೆ ಉತ್ತಮ ಯೋಜನೆಗಳು ಬರಲಿ

ಎಸ್ತರ್, ಆಟೊ ಚಾಲಕಿ, ಕೋರಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.