ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಮುಕ್ತ ಗ್ರಾಮ: ಪಂಚಾಯಿತಿ ಸದಸ್ಯರ ಪಣ

Last Updated 7 ಜನವರಿ 2021, 19:17 IST
ಅಕ್ಷರ ಗಾತ್ರ

ಹೆಸರಘಟ್ಟ: ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲದೇವನಹಳ್ಳಿ ಗ್ರಾಮವನ್ನು ಕಸಮುಕ್ತ ಗ್ರಾಮವಾಗಿ ರೂಪಿಸಲು ಪಂಚಾಯಿತಿಯ ನೂತನ ಸದಸ್ಯರು ಪಣತೊಟ್ಟಿದ್ದಾರೆ.

‘ಸೋಲದೇವನಹಳ್ಳಿ ಗ್ರಾಮವು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶ್ವದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಅಚಾರ್ಯ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಾರೆ. ಅವರಲ್ಲಿ ಬಹುತೇಕ ವಿದ್ಯಾರ್ಥಿಗಳು ಸೋಲದೇವನಹಳ್ಳಿ ಗ್ರಾಮದಲ್ಲಿರುವ ಪಿ.ಜಿ.ಗಳಲ್ಲಿ ಉಳಿದುಕೊಳ್ಳುತ್ತಾರೆ. ಗ್ರಾಮದಲ್ಲಿನ ಕಸ ಕಂಡು ಬೇಸರ ವ್ಯಕ್ತಪಡಿಸುತ್ತಾರೆ. ಗ್ರಾಮವನ್ನು ಕಸಮುಕ್ತಗೊಳಿಸಲು ಆದ್ಯತೆ ನೀಡಲಾಗುವುದು’ ಎಂದು ವಾರ್ಡ್‌ ಸಂಖ್ಯೆ 1ರ ಸದಸ್ಯ ಬಿ.ಚಾಂದ್ ಪಾಷ ಹೇಳಿದರು.

‘ಕಸಘಟ್ಟಪುರ ಗ್ರಾಮ ಪಂಚಾಯಿತಿಗೆ ಸೋಲದೇವನಹಳ್ಳಿ ಗ್ರಾಮದಿಂದ ಹೆಚ್ಚಿನ ವರಮಾನ ಸಿಗುತ್ತಿದೆ. ಗ್ರಾಮವನ್ನು ಕಸಮುಕ್ತಗೊಳಿಸಲು ನಿರ್ಧರಿಸಿದ್ದು, ಈ ಬಗ್ಗೆ ಯೋಜನೆಯನ್ನೂ ರೂಪಿಸುತ್ತೇವೆ’ ಎಂದರು.

‘ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕಸವನ್ನು ವಿಲೇವಾರಿ ಮಾಡಲು ವಾಹನವೊಂದರ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಪ್ರತಿ ಮನೆಗಳಿಂದ ಕಸವನ್ನು ಸಂಗ್ರಹಿಸಲಾಗುತ್ತದೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲು ಜಾಗವನ್ನು ಗುರುತಿಸುತ್ತಿದ್ದೇವೆ. ಅಧ್ಯಕ್ಷರ ಆಯ್ಕೆಯಾದ ಕೂಡಲೇ, ಕಸಮುಕ್ತ ಗ್ರಾಮ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದು ಎರಡನೇ ಬಾರಿ ಆಯ್ಕೆಯಾಗಿರುವ ಜಿ.ಸಂಧ್ಯಾ ತಿಳಿಸಿದರು.

ನೂತನ ಸದಸ್ಯರಾದ ಲಕ್ಷ್ಮಮ್ಮ, ಜಬೀನ್ ತಾಜ್, ಟಿ.ವೆಂಕಟೇಶ್ ಮೂರ್ತಿ ಕೂಡ ಈ ಕಸ ಮುಕ್ತ ಗ್ರಾಮ ಯೋಜನೆಗೆ ಕೈ ಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT