ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಪ್ರಶಸ್ತಿ: ಆಯ್ಕೆಗೆ 10 ಸದಸ್ಯರ ಸಮಿತಿ

ಇಂದು ಪ್ರದಾನ l 10 ಸಾಧಕಿಯರಿಗೆ ಲಕ್ಷ್ಮೀದೇವಿ ಪ್ರಶಸ್ತಿ l 5 ಸಂಸ್ಥೆಗಳಿಗೆ ಶಿವಕುಮಾರ ಸ್ವಾಮೀಜಿ ಪುರಸ್ಕಾರ
Last Updated 3 ಸೆಪ್ಟೆಂಬರ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಪ್ರಶಸ್ತಿಗೆ ಅರ್ಹ ಸಾಧಕರನ್ನಷ್ಟೇ ಆಯ್ಕೆಮಾಡುವ ಉದ್ದೇಶದಿಂದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದಲ್ಲಿ ಹತ್ತು ಸದಸ್ಯರ ಸಮಿತಿ ರಚಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಗಣನಿಯವಾಗಿ ಕಡಿಮೆ ಆಗಿದೆ.

ಪ್ರಶಸ್ತಿ ಮೊತ್ತ ಹೆಚ್ಚಳ: ಕೆಂಪೇಗೌಡ ಪ್ರಶಸ್ತಿಯ ನಗದು ಬಹುಮಾನದ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಲಕ್ಷ್ಮೀದೇವಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹25 ಸಾವಿರ ಮತ್ತು ಶಿವಕುಮಾರ ಸ್ವಾಮೀಜಿ ಪ‍್ರಶಸ್ತಿ ಪಡೆದ ಸಂಘ–ಸಂಸ್ಥೆಗಳಿಗೆ ತಲಾ ₹5 ಲಕ್ಷ ನಗದು ಬಹು
ಮಾನ ಮತ್ತು ಕೆಂಪೇಗೌಡರ ಸ್ಮರಣಿಕೆ ನೀಡಲಾಗುತ್ತಿದೆ ಎಂದು ಮೇಯರ್‌ ಗಂಗಾಂಬಿಕೆ ಮಂಗಳವಾರ ಹೇಳಿದರು. ಒಟ್ಟು ₹77.50 ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ.

ಕೆಂಪೇಗೌಡರ ಜಯಂತಿ ಇಂದು: ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಬುಧವಾರ ಬೆಳಿಗ್ಗೆ 8ಕ್ಕೆ ಮಾಲಾರ್ಪಣೆ ಮಾಡಿ ಮೇಯರ್‌ ಗಂಗಾಂಬಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4ಕ್ಕೆ ಡಾ. ರಾಜಕುಮಾರ್‌ ಗಾಜಿನಮನೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮಾಧ್ಯಮಗಳ ಲಾಬಿಗೆ ಮಣಿಯಿತೇ ಪಾಲಿಕೆ?

ಕಳೆದ ಬಾರಿಯಂತೆ ಈ ವರ್ಷ ಕೆಂಪೇಗೌಡ ಪ್ರಶಸ್ತಿ ಆಯ್ಕೆ ವೇಳೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಆಯ್ಕೆ ಸಮಿತಿ ರಚಿಸಲಾಗಿತ್ತು. ಈ ವರ್ಷ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು 70ಕ್ಕೆ ಸೀಮಿತಗೊಳಿಸಲಾಗುವುದು ಎಂದು ಮೇಯರ್‌ ಗಂಗಾಂಬಿಕೆ ಹೇಳಿದ್ದರು. ಈ ಸಮಿತಿ 70 ಗಣ್ಯರನ್ನಷ್ಟೇ ಆಯ್ಕೆ ಮಾಡಿತ್ತು. ಹೆಚ್ಚುವರಿಯಾಗಿ 30 ಗಣ್ಯರ ಹೆಸರನ್ನು ಮೇಯರ್‌ ಗಂಗಾಂಬಿಕೆ ನೇತೃತ್ವದ ಸಮಿತಿಯು ಸೇರಿಸಿದೆ.ಈ ಪೈಕಿ ಅರ್ಧದಷ್ಟು ಮಂದಿ (14) ಮಾಧ್ಯಮ ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ !

‘ನನ್ನ ವಿವೇಚನೆ ಬಳಸಿ ಈ 30 ಜನರನ್ನು ಆಯ್ಕೆ ಮಾಡಲಾಗಿದೆ’ ಎಂದು ಮೇಯರ್‌ ಹೇಳಿದರು.

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು

ಕನ್ನಡಸೇವೆ: ಚಂದ್ರಶೇಖರ ಪಾಟೀಲ (ಚಂಪಾ)

ಚಲನಚಿತ್ರ: ‘ಮುಖ್ಯಮಂತ್ರಿ ಚಂದ್ರು’, ಆರ್‌.ರತ್ನಂ

ಶಿಕ್ಷಣ: ಗುರುರಾಜ ಕರ್ಜಗಿ, ಎಸ್‌.ಭೈರೇಗೌಡ, ಎನ್‌.ವಿ.ಮಣಿ, ಚಿಕ್ಕಣ್ಣ, ಟಿ.ಶಿವಣ್ಣ, ಬಿ.ಆರ್‌.ವಿನೋದ್‌, ವಿ.ಎಸ್.ಸುರೇಂದ್ರ.

ವೈದ್ಯಕೀಯ: ಡಾ.ಶಿವಾನಂದ, ಡಾ.ಟಿ.ವೆಂಕಟಶಾಮಯ್ಯ, ಡಾ.ಕೆ.ಎನ್.ಮಹೇಂದ್ರನಾಥ್, ಡಾ.ಶಾಂತಿ ತುಮ್ಮಲ

ಸಮಾಜಸೇವೆ: ಎನ್‌.ಎ. ಚಿದಂಬರ, ಪ್ರೊ.ರವಿವರ್ಮ ಕುಮಾರ್‌, ಮಾವಳ್ಳಿ ಶಂಕರ್, ಜೆ.ಎಂ.ವೀರಸಂಗಯ್ಯ, ಪ್ರೊ. ಡಿ.ಮಂಚೇಗೌಡ, ಎಂ.ಸದಾಶಿವಪ್ಪ, ಜಿ.ಬಿ.ಶಿವರಾಜು, ನಿಸರ್ಗ ಜಗದೀಶ್, ಡಿ.ಶಿವಕುಮಾರ್, ತಮ್ಮಣ್ಣ ಗೌಡ, ಕೇಶವ್‌ ಕುಮಾರ್‌, ವಿಜಯಲಕ್ಷ್ಮೀ, ಕೇಶವ ಮೂರ್ತಿ, ಆಶು ಶಾ, ಹೇಮಲತಾ ಚಿದಾನಂದ್, ಸೈಯದ್ ಗುಲಾಬ್‌

ವಿವಿಧ:ಎಸ್‌.ಟಿ.ರಾಮಚಂದ್ರಪ್ಪ, ಕೆ.ಕೆ. ನಟರಾಜನ್‌, ಆರ್‌. ಪ್ರಕಾಶ್‌ ಅರಸ್‌, ಪ್ರಮೀಳಾ ಶಂಕರ್‌, ಎಸ್.ಪಿ.ಸಿದ್ಧರಾಮರಾವ್‌, ಎಸ್.ಸುಭಾಷ್‌, ರಾಜಯೋಗೀಂದ್ರ ಶ್ರೀ ವೀರಸ್ವಾಮಿ, ವಿಕ್ರಂ ಸೂರಿ, ನವೀನ್‌ ತಿವಾರಿ, ಶರದ್‌ ಶರ್ಮಾ

ಸಾಹಿತ್ಯ: ಪ್ರೊ. ಶಿವರಾಮಯ್ಯ, ಕೇಶವರೆಡ್ಡಿ ಹಂದ್ರಾಳ, ಪ್ರೊ.ಜಿ.ಅಬ್ದುಲ್‌ ಬಷೀರ್‌, ಪ್ರತಿಭಾ ನಂದಕುಮಾರ್.

ಸಂಗೀತ: ಸುಮಾ ಸುಧೀಂದ್ರ, ಎಂ.ಲಕ್ಷ್ಮಣ್, ಮಂಜುಳಾ ಗುರುರಾಜ್‌, ಪಿ.ರಮಾ, ಉಸ್ಮಾನ್, ಜಿ.ಎಸ್.ಹೆಗ್ಡೆ

ಶಿಲ್ಪಕಲೆ: ಕನಕಮೂರ್ತಿ

ಚಿತ್ರಕಲೆ: ಎಚ್.ಎ.ಅನಿಲ್‌ ಕುಮಾರ್, ಸುಧಾಕರ ದರ್ಬೆ

ರಂಗಭೂಮಿ: ಆಂಜನಪ್ಪ(ಶಂಖನಾದ), ಮೀನಾಕ್ಷಿ, ನಾಗೇಶ್‌ ಬೆಟ್ಟಕೋಟೆ

ಸರ್ಕಾರಿ ಸೇವೆ; ಡಿ.ರೂಪಾ (ಐಪಿಎಸ್), ಗೌರಿ ಹತ್ಯೆ ಪ್ರಕರಣ ಭೇದಿಸಿದ್ದ ಎಂ.ಎನ್‌.ಅನುಚೇತ್‌ (ಐಪಿಎಸ್‌) ಹಾಗೂ 6 ಸದಸ್ಯರನ್ನೊಳಗೊಂಡ ತಂಡ

ಕ್ರೀಡೆ: ಜಿ.ಬಿಂದುರಾಣಿ, ಶಾಂತ ರಾಮಮೂರ್ತಿ, ಸೈಯದ್‌ ಇಬಾದತ್‌ ಉಲ್ಲಾ, ಮುನಿತಿಮ್ಮಯ್ಯ, ಟಿ.ಜಿ.ಶಂಕರ್, ಎಂ.ಯೋಗೇಂದ್ರ, ಪಿ.ಹರ್ಷಿಣಿ, ಪೈಲ್ವಾನ್‌ ನಾಗರಾಜ್‌, ಸುನೀಲ್‌ ರಾಜು, ಜಿ.ಎನ್.ಅರ್ಜುನಪ್ಪ, ಭರತ್ ಕುಮಾರ್, ಎನ್‌.ಕುಮಾರ್‌

ಸಾಂಸ್ಕೃತಿಕ; ಚಂದ್ರಕಲಾ ಹಾರಕೂಡೆ, ಆರ್‌.ರೇಣುಕಾರಾಧ್ಯ

ಮಾಧ್ಯಮ; ಎಸ್‌.ದೇವನಾಥ್‌, ಕುಶಲ ಡಿಮೆಲೊ, ಎಚ್‌.ವಿ.ಕಿರಣ, ದಿವಾಕರ್‌, ಎಂ.ಜಿ.ರಜನಿ, ಸುಭಾಷ್‌ ಹೂಗಾರ್‌, ಕೆ.ಎಸ್.ಗಣೇಶ್‌, ಬಿ.ಎ.ಅರುಣ್‌, ಸೂರಜ್‌ ಮಹಾವೀರ್‌ ಉತ್ರೆ, ಶ್ರೀನಾಥ್‌ ಜೋಶಿ, ಚಂದನ್‌ ಶರ್ಮ, ಸಿದ್ದು ಕಾಳೋಜಿ, ಎಚ್‌.ಎನ್‌.ಶ್ರೀನಿವಾಸ್‌ ಪ್ರಸಾದ್‌, ಅಶೋಕ್‌ ರಾಮ್, ನಾಗರಾಜ್‌ ಭಟ್‌, ಪ್ರವೀಣ್‌ ಅಕ್ಕಿ.

ನೃತ್ಯ; ಮಧುಲಿತ ಮೋಹಪಾತ್ರ, ಕೆ.ಪೂರ್ಣಿಮಾ ಗುರುರಾಜ, ಜಿ.ಎಸ್‌.ರಾಜಲಕ್ಷ್ಮಿ, ಸಂಜಯ್‌ ಶಾಂತಾರಾಮ್‌, ಹೇಮಾ ಪ್ರಭಾತ್‌

ಕನ್ನಡ ಸೇವೆ: ಹಾ.ವೀ.ಮಂಜುಳಾ ಶಿವಾನಂದ, ರಾ.ನಂ.ಚಂದ್ರಶೇಖರ

ರಂಗಭೂಮಿ: ಆರ್‌. ಮಂಜುಳಾ, ಎಚ್‌.ಎಂ.ಮಯ ಬ್ರಹ್ಮಾಚಾರ್‌

ಬಾಲ ಪತ್ರಿಭೆ: ಪ್ರತ್ಯಕ್ಷ

ಚಲನಚಿತ್ರ ವಿಮರ್ಶಕರು: ಬಿ.ಎನ್‌.ಸುಬ್ರಮಣ್ಯ

ಸ್ವಾತಂತ್ರ್ಯ ಹೋರಾಟಗಾರರು: ಡಿ.ಎನ್.ಸಂಪತ್‌

ನಾಡಪ್ರಭು ಕೆಂಪೇಗೌಡ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿ ಪುರಸ್ಕೃತರು

ಸಮಾಜ ಸೇವೆ‌: ಲೀಲಾದೇವಿ ಆರ್. ಪ್ರಸಾದ್‌, ಕವನ ಬಸವಕುಮಾರ್‌, ಪ್ರಾಚಿಗೌಡ, ವಿ.ಭಾರತಿ, ನಾರಂಗಿ ಭಾಯಿ, ಸೌಜನ್ಯ ವಸಿಷ್ಠ

ಕನ್ನಡ ಸೇವೆ: ಧನಭಾಗ್ಯಮ್ಮ

ಕ್ರೀಡೆ: ಎ.ಅನಸೂಯ

ನೃತ್ಯ; ಬಿ.ಆರ್.ಲಕ್ಷ್ಮೀ

ರಂಗಭೂಮಿ; ಗೌರಿಶ್ರೀ

ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳು

ಶ್ರೀ ರಮಣಮಹರ್ಷಿ ಅಕಾಡೆಮಿ ಫಾರ್‌ ಬ್ಲೈಂಡ್ಸ್‌, ಬಾಸ್ಕೋ ಮನೆ, ಸುಮಂಗಲಿ ಸೇವಾಶ್ರಮ ಟ್ರಸ್ಟ್‌, ಮುಸ್ಲಿಂ ಅನಾಥಾಶ್ರಮ, ಮನೋನಂದನ ಬುದ್ಧಿಮಾಂದ್ಯ ಮಕ್ಕಳ ಶಾಲೆ

ಆಯ್ಕೆ ಸಮಿತಿ ರಚನೆಯ ಉದ್ದೇಶವೇನು, ಅದಕ್ಕೆ ಅಗೌರವ ಮಾಡಿದಂತಾಗಲಿಲ್ಲವೆ ಎಂಬ ಪ್ರಶ್ನೆಗೆ, ‘ಮೇಯರ್‌ ವಿವೇಚನಾ ಸಮಿತಿಗೆ ಹೆಚ್ಚುವರಿಯಾಗಿ ಗಣ್ಯರ ಆಯ್ಕೆ ಮಾಡಲು ಅವಕಾಶ ಇದೆ’ ಎಂದರು. ಆದರೆ, ಗಣ್ಯರ ಆಯ್ಕೆಗೆ ಮಾನದಂಡವೇನು ಎಂಬುದನ್ನು ಅವರು ವಿವರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT