ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣ: ತಿಂಗಳಲ್ಲಿ 34,339 ಟನ್ ಸರಕು ಸಾಗಣೆ

Last Updated 25 ನವೆಂಬರ್ 2020, 21:15 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಈ ವರ್ಷ ಅಕ್ಟೋಬರ್ ತಿಂಗಳಲ್ಲಿ 34,339 ಟನ್‌ಗಳಷ್ಟು ಸರಕು ಸಾಗಣೆ ನಡೆಸಿದೆ. ಕಳೆದ 26 ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಇದು ಗರಿಷ್ಠ ಪ್ರಮಾಣದ ಸರಕು ಸಾಗಣೆ ಎಂದು ವಿಮಾನ ನಿಲ್ದಾಣವು ತಿಳಿಸಿದೆ.

ದೇಶೀಯ ಮಟ್ಟದಲ್ಲಿನ ಸರಕು ಸಾಗಣೆಯಲ್ಲಿಯೂ ಅಕ್ಟೋಬರ್ ತಿಂಗಳಲ್ಲಿ ಭಾರೀ ಪ್ರಗತಿ ಕಂಡಿದೆ. 8,117 ಟನ್‌ಗಳಷ್ಟು ಸರಕನ್ನು ಸಾಗಣೆ ಮಾಡಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಸರಕುಗಳು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿವೆ. ವಿದೇಶಗಳಿಗೆ ರಫ್ತು ಮಾಡಲಾಗಿರುವ ಸರಕುಗಳು ಹೆಚ್ಚು ದಿನ ಶೇಖರಣೆಗೆ ಯೋಗ್ಯವಾದವಾಗಿವೆ. 1,095 ಟನ್ ಸರಕನ್ನು ದೋಹಾಕ್ಕೆ ರಫ್ತು ಮಾಡಲಾಗಿದೆ ಎಂದು ಹೇಳಿದೆ.

ದೇಶದಲ್ಲಿಯೇ ಸಕಾರಾತ್ಮಕ ಬೆಳವಣಿಗೆ ಕಂಡ ಮೊದಲ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ನಗರದ ವಿಮಾನ ನಿಲ್ದಾಣವು ಸೆಪ್ಟೆಂಬರ್ ತಿಂಗಳಲ್ಲಿ ಭಾಜನವಾಗಿತ್ತು. 2019ರ ಅಕ್ಟೋಬರ್‌ ತಿಂಗಳಲ್ಲಿ ನಡೆಸಲಾಗಿದ್ದ ಸರಕು ಸಾಗಣೆಗೆ ಹೋಲಿಸಿದಲ್ಲಿ ಈ ಬಾರಿ ಶೇ 0.1ರಷ್ಟು ಬೆಳವಣಿಗೆ ಹೊಂದಿದೆ. ಅ.22ರಂದು ಒಂದೇ ದಿನ 52 ಬಾರಿ ಸರಕು ಸಾಗಣೆ ವಿಮಾನಗಳು ಸಂಚಾರ ನಡೆಸಿದ್ದು, 1,359 ಟನ್‌ಗಳಷ್ಟು ಸರಕುಗಳನ್ನು ಸಾಗಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣವು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT