ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು 2025ರ ಎರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ ನೀಡುವ ಎರ್ಪೋರ್ಟ್ ಸರ್ವಿಸ್ ಕ್ವಾಲಿಟಿ ಪ್ರಶಸ್ತಿಯಲ್ಲಿ ‘ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಗೌರವ ಪಡೆದುಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣ ಸತತ ನಾಲ್ಕನೇ ವರ್ಷವೂ ಈ ಪ್ರಶಸ್ತಿಗೆ ಪಾತ್ರವಾಗಿದೆ.

ಪ್ರಯಾಣಿಕರಿಂದ ಪಡೆಯುವ ನೇರ ಪ್ರತಿಕ್ರಿಯೆಗಳ ಆಧಾರಿಸಿ ಪ್ರಶಸ್ತಿ ನೀಡಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ದೊರೆಯುವ ಸೇವೆ, ಸೌಕರ್ಯ, ಸ್ವಚ್ಛತೆ, ಪ್ರಯಾಣಿಕರಿಗೆ ಇರುವ ಅನುಕೂಲತೆ ಮತ್ತು ಸೌಲಭ್ಯಗಳನ್ನು ಗಮನದಲ್ಲಿಟ್ಟು ಮೌಲ್ಯಮಾಪನ ಮಾಡಲಾಗುತ್ತದೆ.

ವಿಮಾನ ನಿಲ್ದಾಣದ ಟರ್ಮಿನಲ್–1 ಮತ್ತು ಟರ್ಮಿನಲ್–2ರಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ನೀಡುವ ಸೇವೆಗಳು ಉತ್ತಮ ಗುಣಮಟ್ಟದ್ದಾಗಿವೆ ಎಂದು ಪ್ರಯಾಣಿಕರ ಪ್ರತಿಕ್ರಿಯೆ ತಿಳಿಸಿದೆ.

ಇಮಿಗ್ರೇಷನ್ ಪ್ರಕ್ರಿಯೆ ಸಮಯ ಕಡಿಮೆಯಾಗಿರುವುದು, ಸರಕು(ಬ್ಯಾಗೇಜ್) ಪಡೆಯುವ ವ್ಯವಸ್ಥೆ ಸುಧಾರಿಸಿರುವುದು, ವಿಮಾನ ನಿಲ್ದಾಣದೊಳಗಿನ ಮಾರ್ಗಸೂಚಿಗಳು (ಸೈನ್ ಬೋರ್ಡ್), ನಿರೀಕ್ಷಣಾ ಪ್ರದೇಶಗಳ ಸೌಕರ್ಯ ಮತ್ತು ಡಿಜಿಟಲ್ ಸೇವೆಗಳು ಸುಧಾರಿಸಿರುವುದಿಂದ ಪ್ರಶಸ್ತಿ ಲಭಿಸಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ತಿಳಿಸಿದೆ.

2025ರಲ್ಲಿ 2024ರಿಗಿಂತ ಕೆಲವು ಸೇವೆಗಳಲ್ಲೂ ಸುಧಾರಣೆ ಕಂಡುಬಂದಿದೆ. ವೈ-ಫೈ ಸೌಲಭ್ಯ, ಸರಕು ಪಡೆಯುವ ಸ್ಥಳದ ಡಿಸ್ಪ್ಲೇ ವ್ಯವಸ್ಥೆ, ಟ್ರಾಲಿ, ನಿರೀಕ್ಷಣಾ ಪ್ರದೇಶಗಳ ಆರಾಮದಾಯಕತೆ, ಟರ್ಮಿನಲ್ ಒಳಗಿನ ನಡೆದು ಹೋಗುವ ದೂರ, ಬ್ಯಾಗೇಜ್ ಪಡೆಯುವ ಸಮಯ, ವಿಮಾನದಿಂದ ಇಳಿಯುವ ಸಮಯ ಹಾಗೂ ಇಮಿಗ್ರೇಷನ್ ಪ್ರಕ್ರಿಯೆ ಸಮಯ ಕಡಿಮೆಯಾಗಿದೆ. ಈ ಅಂಶವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

‘ಪ್ರಯಾಣಿಕರಿಗೆ ವೇಗವಾದ, ಸುಗಮ ಮತ್ತು ಅನುಕೂಲಕರ ಅನುಭವ ನೀಡುವುದು ನಮ್ಮ ಮುಖ್ಯ ಉದ್ದೇಶ. ವಿಮಾನದಿಂದ ಇಳಿಯುವ ಕ್ಷಣದಿಂದ ಹೊರಗೆ ಬರುವವರೆಗಿನ ಪ್ರಕ್ರಿಯೆ ಸುಗಮವಾಗಿರಲು ನಾವು ವ್ಯವಸ್ಥೆ ಮಾಡಿದ್ದೇವೆ. ನಾಲ್ಕನೇ ವರ್ಷವೂ ಈ ಪ್ರಶಸ್ತಿ ದೊರೆತಿರುವುದು ನಮ್ಮ ತಂಡದ ಒಟ್ಟಾರೆ ಪ್ರಯತ್ನದ ಫಲವಾಗಿದೆ’ ಎಂದು ವಿಮಾನ ನಿಲ್ದಾಣ ಲಿಮಿಟೆಡ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಗಿರೀಶ್ ನಾಯರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.