ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಸತತ ಮೂರನೇ ಬಾರಿಗೆ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಪ್ರಶಸ್ತಿಗೆ ಭಾಜನವಾಗಿದೆ.

ಇದರೊಂದಿಗೆ ಜಾಗತಿಕ 50 ಅಗ್ರ ಶ್ರೇಯಾಂಕದ ವಿಮಾನ ನಿಲ್ದಾಣಗಳಲ್ಲಿ ಪಟ್ಟಿಯಲ್ಲಿ 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ
ಏರಿದೆ.

ಲಂಡನ್ನಲ್ಲಿ ನಡೆದ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚೆಕ್ ಇನ್, ಭದ್ರತೆ, ವಲಸೆ, ಆಗಮನ, ನಿರ್ಗಮನ ಸೇರಿದಂತೆ ವಿವಿಧ ಸೇವೆಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಸ್ಕೈಟ್ರಾಕ್ಸ್ನಿಂದ ‘ಫೈವ್ ಸ್ಟಾರ್’ ರೇಟಿಂಗ್ ಪಡೆದ ದೇಶದ ಮೊದಲ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಕೆಐಎ ಟರ್ಮಿನಲ್–2 ಪಾತ್ರವಾಗಿದೆ. ಜೊತೆಗೆ, ‘ವಿಶ್ವದ ಅತ್ಯುತ್ತಮ ಆಗಮನ ಸೌಲಭ್ಯದ ವಿಮಾನ ನಿಲ್ದಾಣ’ ಪ್ರಶಸ್ತಿಯನ್ನು ನಾಲ್ಕನೇ ಬಾರಿ ಪಡೆದಿದೆ. ಇಂಗಾಲ ಮಾನ್ಯತೆ ಕಾರ್ಯಕ್ರಮದ ಅಡಿ 5ನೇ ಹಂತ ಮತ್ತು ಪ್ರವೇಶ ಸಾಧ್ಯತೆ ಮಾನ್ಯತೆಯಲ್ಲಿ 3ನೇ ಹಂತ ತಲುಪಿದೆ.

43.82 ಮಿಲಿಯನ್ ಪ್ರಯಾಣಿಕರಿಗೆ ಸೇವೆ

ಕೆಐಎ 2025ರಲ್ಲಿ 43.82 ಮಿಲಿಯನ್ ಪ್ರಯಾಣಿಕರಿಗೆ ಸೇವೆ ನೀಡಿದ್ದು 5.20 ಲಕ್ಷ ಟನ್ ಸರಕು ಸಾಗಣೆ ನಡೆಸಿದೆ. ದಕ್ಷಿಣ ಭಾರತದ ಪ್ರಮುಖ ವಿಮಾನ ನಿಲ್ದಾಣವಾಗಿರುವ ಕೆಐಎ ಪ್ರಯಾಣಿಕ ಮತ್ತು ಸರಕು ಸಾಗಣೆಯಲ್ಲಿ ನಿರಂತರ ಬೆಳವಣಿಗೆ ಸಾಧಿಸುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ನಿರ್ವಹಣೆಯಲ್ಲಿರುವ ಈ ವಿಮಾನ ನಿಲ್ದಾಣ ಮೂಲಸೌಕರ್ಯ ವಿಸ್ತರಣೆ ಮತ್ತು ಸಂಪರ್ಕ ಜಾಲ ಹೆಚ್ಚಿಸುವ ಮೂಲಕ ಭವಿಷ್ಯದಲ್ಲೂ ಪ್ರಮುಖ ಹಬ್ ಆಗಿ ಬೆಳೆದುಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಶಸ್ತಿ ನಮ್ಮ ತಂಡದ ಸಾಮೂಹಿಕ ಪ್ರಯತ್ನಕ್ಕೆ ದೊರೆತ ಗೌರವ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ದಿಸೆಯಲ್ಲಿ ನಾವು ಬದ್ಧರಾಗಿದ್ದೇವೆ.
– ಹರಿ ಮರಾರ್ ಕೆಐಎ ಸಿಇಒ

ಸತತ ಮೂರನೇ ವರ್ಷ ಈ ಪ್ರಶಸ್ತಿ ಗೆಲ್ಲುವುದು ದೊಡ್ಡ ಸಾಧನೆ. ಟರ್ಮಿನಲ್–2 ಈ ವಿಮಾನ ನಿಲ್ದಾಣದ ಖ್ಯಾತಿಯನ್ನು ಹೆಚ್ಚಿಸಿದೆ.
–ಎಡ್ವರ್ಡ್ ಪ್ಲಾಸ್ಟೆಡ್, ಸ್ಕೈಟ್ರಾಕ್ಸ್ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.