ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯು (ಎನ್ಕೆಪಿಎಲ್) ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ) ವ್ಯಾಪ್ತಿಗೆ ಬರಲಿದೆ ಎಂದು ತೀರ್ಮಾನಿಸಿ ರೇರಾ ಮೇಲ್ಮನವಿ ನ್ಯಾಯಮಂಡಳಿ ಆದೇಶ ನೀಡಿದೆ. ಕೆ–ರೇರಾ ನೀಡಿದ್ದ ಆದೇಶದ ವಿರುದ್ಧ ಬಿಡಿಎ ನವೆಂಬರ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 ರ ಅಡಿ ಪ್ರಾಧಿಕಾರವು ‘ಪ್ರವರ್ತಕ’ ಎಂದು ಪರಿಗಣಿಸಬಹುದು ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

ಮಾರ್ಚ್ 3 ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಮಂಡಳಿಯು, ರೇರಾ ಕಾಯ್ದೆಯ ನಿಬಂಧನೆಗಳು ಬಿಡಿಎಗೆ ಸಂಪೂರ್ಣವಾಗಿ ಅನ್ವಯಿಸುತ್ತವೆ ಎಂಬುದನ್ನು ತಿಳಿಸಿದೆ. ಅಲ್ಲದೆ ಕೆ–ರೇರಾದ ಆದೇಶವನ್ನು ‘ಅಧಿಕಾರ ವ್ಯಾಪ್ತಿಯಿಲ್ಲದೆ ಹೊರಡಿಸಲಾಗಿದೆ’ ಎಂಬ ಬಿಡಿಎ ವಾದವನ್ನು ಸಹ ಅದು ತಳ್ಳಿ ಹಾಕಿದೆ.

ಕೆಂಪೇಗೌಡ ಬಡಾವಣೆಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ತನ್ನ ವಿರುದ್ಧ ರೇರಾದಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ‘ಬಿಡಿಎ ಶಾಸನಬದ್ಧ ಸಂಸ್ಥೆಯಾಗಿದ್ದು, ರಿಯಲ್ ಎಸ್ಟೇಟ್ ಯೋಜನೆಗಳ ಪ್ರವರ್ತಕನಲ್ಲ. ಹಾಗಾಗಿ ರೇರಾ ವ್ಯಾಪ್ತಿಯಿಂದ ಹೊರಗಿಡಬೇಕು’ ಎಂಬ ವಾದವನ್ನು ಮಂಡಿಸಿತ್ತು.

‘ರೇರಾ ಕಾಯ್ದೆಯ ಕಲಂ 2ಝಡ್ಕೆ (3) ಅನ್ವಯ, ಸಾರ್ವಜನಿಕರಿಗೆ ಮಾರಾಟಕ್ಕಾಗಿ ನಿವೇಶನ ಅಥವಾ ಕಟ್ಟಡಗಳನ್ನು ನಿರ್ಮಿಸುವ ಅಥವಾ ಅಭಿವೃದ್ಧಿಪಡಿಸುವ ಯಾವುದೇ ಅಭಿವೃದ್ಧಿ ಪ್ರಾಧಿಕಾರ ಅಥವಾ ಸಾರ್ವಜನಿಕ ಸಂಸ್ಥೆಯನ್ನು ‘ಪ್ರವರ್ತಕ’ ಎಂದು ಪರಿಗಣಿಸಬೇಕು. ಆದ್ದರಿಂದ, ಕೆಂಪೇಗೌಡ ಬಡಾವಣೆ ಯೋಜನೆಯನ್ನು ಬಿಡಿಎ ನೋಂದಾಯಿಸಿಕೊಳ್ಳಬೇಕು’ ಎಂದು ರೇರಾ ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಬಿಡಿಎ, ಕಾಯ್ದೆಯ ಸೆಕ್ಷನ್ 44ರ ಅಡಿ ಮೇಲ್ಮನವಿ ಸಲ್ಲಿಸಿತು. ಪ್ರಾಧಿಕಾರವು ತಾನು ಶಾಸನಬದ್ಧ ಯೋಜನಾ ಸಂಸ್ಥೆಯಾಗಿದ್ದು, ಬಡಾವಣೆ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಕೆ-ರೇರಾಗೆ ಅಧಿಕಾರವಿಲ್ಲ ಎಂದು ವಾದಿಸಿತ್ತು.

ನ್ಯಾಯಾಂಗ ಸದಸ್ಯ ಎನ್. ಸಂತೋಷ್ ಕುಮಾರ್ ಶೆಟ್ಟಿ ಮತ್ತು ಆಡಳಿತಾತ್ಮಕ ಸದಸ್ಯ ಮಹೇಂದ್ರ ಜೈನ್ ಒಳಗೊಂಡ ನ್ಯಾಯಮಂಡಳಿಯು, ಕೆ-ರೇರಾದ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.