ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ವ್ಹೀಲಿಂಗ್‌; ಮಗ, ತಾಯಿ ಬಂಧನ, ಬಿಡುಗಡೆ

Last Updated 22 ಜುಲೈ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ವ್ಹೀಲಿಂಗ್‌ ಪ್ರಕರಣ ಸಂಬಂಧ ಆದರ್ಶ್ (18) ಹಾಗೂ ಆತನ ತಾಯಿ ರಾಮಾಂಜನಮ್ಮ ಎಂಬುವರನ್ನು ಬಂಧಿಸಿದ್ದ ಕೆಂಗೇರಿ ಸಂಚಾರ ಠಾಣೆ ಪೊಲೀಸರು, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

‘ಆಂಧ್ರಪ್ರದೇಶದ ಹಿಂದೂಪುರದ ಆದರ್ಶ್, ಭಾನುವಾರ ನಸುಕಿನಲ್ಲಿ ಸ್ನೇಹಿತರ ಜೊತೆ ಮಧ್ಯಾಹ್ನ ಕೆಂಗೇರಿ ಬಳಿಯ ನೈಸ್‌ ರಸ್ತೆಗೆ ಬಂದಿದ್ದ. ವ್ಹೀಲಿಂಗ್ ಮಾಡುತ್ತಿದ್ದ ವೇಳೆಯಲ್ಲೇ ನಮಗೆ ಸಿಕ್ಕಿಬಿದ್ದಿದ್ದ’ ಎಂದು ಪೊಲೀಸರು ಹೇಳಿದರು.

‘ಇದು ಆಂಧ್ರದ ನೋಂದಣಿ ಸಂಖ್ಯೆಯ ದ್ವಿಚಕ್ರವಾಹನ. ತಪಾಸಣೆ ನಡೆಸಿದಾಗ, ವಾಹನ ಚಾಲನಾ ಪರವಾನಗಿ ಇಲ್ಲದಿರು
ವುದು ಗೊತ್ತಾಯಿತು. ವಶಕ್ಕೆ ಪಡೆದು ಠಾಣೆಗೆ ಕರೆತಂದೆವು.’

‘ಬೈಕ್‌, ತಾಯಿ ರಾಮಾಂಜನಮ್ಮ ಹೆಸರಿಗೆ ನೋಂದಣಿ ಆಗಿದ್ದ ಮಾಹಿತಿ ಲಭ್ಯವಾಯಿತು. ಅವರನ್ನು ಠಾಣೆಗೆ ಕರೆಸಿ ಹೇಳಿಕೆ ಪಡೆಯಲಾ
ಯಿತು. ವ್ಹೀಲಿಂಗ್ ಮಾಡಿದ್ದ ಆರೋಪದಡಿ ಆದರ್ಶ್‌ ಹಾಗೂ ಬೈಕ್‌ ನೀಡಿದ್ದಕ್ಕಾಗಿ ತಾಯಿಯನ್ನು ಬಂಧಿಸಲಾಯಿತು. ಠಾಣೆ ಜಾಮೀನು ಮೇಲೆಯೇ ಇಬ್ಬರನ್ನು ಬಿಟ್ಟು ಕಳುಹಿಸಲಾಯಿತು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT