ಶುಕ್ರವಾರ, ಡಿಸೆಂಬರ್ 6, 2019
21 °C

ಚಿತ್ರಕೂಟ ಶಾಲೆ ರನ್ನರ್‌ಅಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಲ್ಲಿಯ ನಾಗದೇವನಹಳ್ಳಿಯ ಚಿತ್ರಕೂಟ ಶಾಲಾ ತಂಡ ರಾಷ್ಟ್ರ ಮಟ್ಟದ 17 ವರ್ಷದೊಳಗಿನ ಬಾಲಕಿಯರ ಕೊಕ್ಕೊ ಪಂದ್ಯಾವಳಿಯಲ್ಲಿ ರನ್ನರ್‌ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇತ್ತೀಚೆಗೆ ಹರಿಯಾಣದ ಹನ್ಸಿಯಲ್ಲಿ ಟೂರ್ನಿ ನಡೆದಿತ್ತು. ರಂಗನಾಥ್ ವಿ.ಎಸ್ ಮತ್ತು ತಿಪ್ಪೇಸ್ವಾಮಿ ಆರ್.ಎನ್ ಅವರು ತಂಡಕ್ಕೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದರು. ಎಂ. ಅಮೂಲ್ಯ ಅತ್ಯುತ್ತಮ ಚೇಸರ್ ಆಗಿ ಹೊರಹೊಮ್ಮಿದ್ದಾರೆ.

ನಾಯಕಿ ಪಿ. ರಕ್ಷಾ ಅವರಿಗೆ, ಆರ್. ಚಂದನಾ, ಲಾಸ್ಯ ಸುರೇಶ್, ವಿ. ಮಾನ್ಯ, ವೇದಿಕಾ ಮಹೇಶ್, ಅಕ್ಷರಾ ಮನೋಹರ್, ವಿ.ಎಸ್. ಕೃಪಾ, ವಚನಾ ಬಸವರಾಜ್ ಹಿರೇಮಠ್, ಜಿ. ವರ್ಷಾ, ಜಿ. ಶ್ರೇಯಾ, ಕೆ. ವೇದಿತಾ ಉತ್ತಮ ಬೆಂಬಲ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು