ಕೆಐಎನಲ್ಲಿ ಬರಲಿದೆ ಚತುರ ಭದ್ರತಾ ಮಾರ್ಗ

7
ಪುರುಷ–ಮಹಿಳೆಯರೆನ್ನದೆ ಒಂದೇ ಸರದಿಯಲ್ಲಿ ನಿಲ್ಲಬಹುದು * ಪ್ರಯಾಣಿಕರ ಜತೆ ಸಾಗಲಿದೆ ಸ್ವಯಂಚಾಲಿತ ಟ್ರೇ

ಕೆಐಎನಲ್ಲಿ ಬರಲಿದೆ ಚತುರ ಭದ್ರತಾ ಮಾರ್ಗ

Published:
Updated:
Deccan Herald

ಬೆಂಗಳೂರು: ಪ್ರಯಾಣಿಕರು ಕಾಯುವ ಅವಧಿಯನ್ನು ಕಡಿಮೆಗೊಳಿಸುವ ಮತ್ತು ಎಲ್ಲ ಭದ್ರತಾ ಮಾರ್ಗಗಳಲ್ಲಿ ಪುರುಷರು ಹಾಗೂ ಮಹಿಳೆಯರನ್ನು ತಪಾಸಣೆಗೆ ಒಳಪಡಿಸುವ ಸಲುವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ (ಕೆಐಎ) ನಿಲ್ದಾಣವು ನೂತನ ತಂತ್ರಜ್ಞಾನ ಪರಿಚಯಿಸುತ್ತಿದೆ.

ಸದ್ಯದ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಭದ್ರತಾ ಮಾರ್ಗಗಳಿವೆ. ಕುಟುಂಬದ ಸದಸ್ಯರು ಒಟ್ಟಿಗೆ ಪ್ರಯಾಣಿಸುವಾಗ ಪುರುಷರು ಹಾಗೂ ಮಹಿಳೆಯರು ಭದ್ರತಾ ಪರೀಕ್ಷೆಗೆ ಪ್ರತ್ಯೇಕವಾಗಿ ನಿಲ್ಲಬೇಕಿದೆ. ಅಲ್ಲದೆ, ಎಕ್ಸ್‌ರೇ ಯಂತ್ರಗಳ ತಪಾಸಣೆಗೆ ಟ್ರೇಗಳಲ್ಲಿ ಕಳುಹಿಸಿದ ಲಗೇಜ್‌ಗಳನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಬೇಕು. ಹೊಸ ವ್ಯವಸ್ಥೆಯಲ್ಲಿ ಈ ಎಲ್ಲ ತೊಂದರೆಗಳೂ ತಪ್ಪಲಿವೆ.

ಚತುರ ಭದ್ರತಾ ಮಾರ್ಗ (ಸ್ಮಾರ್ಟ್ ಸೆಕ್ಯೂರಿಟಿ ಲೇನ್) ಮತ್ತು ಆಟೊಮೇಟೆಡ್ ಟ್ರೇ ರಿಟ್ರಿವಲ್ ಸಿಸ್ಟಮ್ (ಎಟಿಆರ್‌ಎಸ್) ವ್ಯವಸ್ಥೆಯನ್ನು ಭಾರತದಲ್ಲೇ ಮೊದಲ ಬಾರಿಗೆ ಕೆಐಎ ಜಾರಿಗೆ ತರುತ್ತಿದೆ.

ಮೆಕ್‍ಡೊನಾಲ್ಡ್ ಹಂಪ್ರಿ (ಆಟೊಮೇಷನ್) ಇಂಡಿಯಾ ಪ್ರೈವೇಟ್ ಲಿಮಿಟೆಡ್‍ ಸಂಸ್ಥೆಯೊಂದಿಗೆ ಈ ಸಂಬಂಧ ಬಿಐಎಎಲ್ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆ ಇದೇ ವರ್ಷದ ಅಂತ್ಯದಲ್ಲಿ ಆರಂಭವಾಗಲಿದೆ.

ತಂತ್ರಜ್ಞಾನದಿಂದಾಗುವ ಪ್ರಯೋಜನವೇನು: ‘ಪ್ರಯಾಣಿಕರು ಮತ್ತು ಅವರು ಕೊಂಡೊಯ್ಯುವ ಲಗೇಜ್‌ಗಳನ್ನು ವಿಮಾನದಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸದೆ ಒಟ್ಟಿಗೆ ತಪಾಸಣೆ ಮಾಡಲು ಸಹಾಯವಾಗಲಿದೆ ಗ್ರಾಹಕರು ಕಾಯುವ ಸಮಯವನ್ನು ಕಡಿಮೆ ಮಾಡುವುದರ ಜತೆಗೆ ಜನದಟ್ಟಣೆಯನ್ನು ತಪ್ಪಿಸಲಿದೆ. ಭದ್ರತಾ ಸಿಬ್ಬಂದಿ ಕಾರ್ಯಕ್ಷಮತೆಯನ್ನು ಸುಧಾರಿಸಲಿದೆ. ಸರತಿ ಸಾಲುಗಳಲ್ಲಿ ನಿಲ್ಲುವ ಪ್ರಯಾಣಿಕರ ಒತ್ತಡವೂ ಕಡಿಮೆ ಆಗಲಿದೆ’ ಎಂದು ಬಿಐಎಎಲ್‍ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾವೇದ್ ಮಲ್ಲಿಕ್ ತಿಳಿಸಿದರು.

‘ಪ್ರಯಾಣಿಕರಿಗೆ ಸಮಸ್ಯೆಗಳು ಉದ್ಭವವಾಗದಂತೆ ಪರಿಹಾರ ಒದಗಿಸಲು ಈ ನೂತನ ತಂತ್ರಜ್ಞಾನ ಅಳಡಿಸಲಾಗುತ್ತಿದೆ. ಪ್ರಸ್ತುತ ಇರುವ ಮಾನವ ಸಂಚಾಲಿತ ಲೇನ್‍ಗಳ ಬದಲಿಗೆ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಟ್ರೇ ಹುಡುಕುವ ಕಿರಿಕಿರಿ ಇಲ್ಲ

‘ಸ್ಮಾರ್ಟ್ ಲೇನ್‍ಗಳ ಜತೆಗಿರುವ ಸ್ವಯಂಚಾಲಿತ ಖಾಲಿ ಟ್ರೇಗಳಲ್ಲಿ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಇಡಬಹುದು. ಇದರಿಂದ ತಮ್ಮ ಟ್ರೇಗಳಿಗಾಗಿ ಹುಡುಕುವ ಸಮಸ್ಯೆ ತ‍ಪ್ಪಲಿದೆ. ಟ್ರೇಗಳು ಒಂದೆಡೆ ಸೇರಿಕೊಳ್ಳುವುದನ್ನು ತಡೆಯಲಿದೆ. ಲಗೇಜ್‌ಗಳನ್ನು ಎಕ್ಸ್‌ರೇ ಯಂತ್ರದ ಒಳಗೆ ತಳ್ಳುವ ಅಗತ್ಯವೂ ಇರುವುದಿಲ್ಲ. ಸರಾಗವಾಗಿ ಒಳ ಹೋಗಲಿವೆ. ಬಾಂಬ್‌ಗಳಂತಹ ಅ‍ಪಾಯಕಾರಿ ವಸ್ತುಗಳನ್ನು ಸುಲಭವಾಗಿ ಪತ್ತೆ ಹಚ್ಚಲೂ ಸಹಾಯವಾಗಲಿದೆ’ ಎಂದು ಜಾವೇದ್‌ ಮಾಹಿತಿ ನೀಡಿದರು.

* ಭಾರತದಲ್ಲಿ ವೈಮಾನಿಕ ಭದ್ರತೆಗೆ ಪುನರ್ ರೂಪ ನೀಡುವಲ್ಲಿ ಈ ನೂತನ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ

-ಮಿಕ್ ಮೆಕ್‍ಡೊನಾಲ್ಡ್, ಮೆಕ್‍ಡೊನಾಲ್ಡ್ ಹಂಪ್ರಿ ಇಂಡಿಯಾ ಮುಖ್ಯಸ್ಥ

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !