ಗುರುವಾರ , ಜನವರಿ 30, 2020
22 °C
ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ ತದ್ರೂಪದಂತಿರಲಿದೆ ಈ ಕೇಂದ್ರ

ವಿಮಾನನಿಲ್ದಾಣದಲ್ಲಿ ಮನರಂಜನಾ ತಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕದ ನ್ಯೂಯಾರ್ಕ್‌ನ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ ತದ್ರೂಪದಂತಿರುವ ಮನರಂಜನಾ ತಾಣವು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಕೆಐಎ) ಇನ್ನು 18ರಿಂದ 20 ತಿಂಗಳುಗಳಲ್ಲಿ ತಲೆ ಎತ್ತಲಿದೆ. ಭಾರತದ ವಿಮಾನನಿಲ್ದಾಣಗಳಲ್ಲೇ ಇಂತಹದ್ದೊಂದು ಪ್ರಯತ್ನ ಇದೇ ಮೊದಲು.

ಭಾರಿ ಗಾತ್ರದ ಗೊಮ್ಮಟ ಹಾಗೂ ಅದರ ಸಣ್ಣ ಪ್ರತಿರೂಪ, ಬಯಲು ಪ್ರದೇಶ, ತಾತ್ಕಾಲಿಕ ಮಳಿಗೆಗಳನ್ನು ಅಳವಡಿಸುವ ಪ್ರದೇಶಗಳನ್ನು ಒಳಗೊಂಡ ಈ ಮನರಂಜನಾ ತಾಣವು ಏಕಕಾಲದಲ್ಲಿ ಒಟ್ಟು 11,000 ಜನ ಸೇರಲು ಅವಕಾಶ ಕಲ್ಪಿಸಲಿದೆ. ದೊಡ್ಡ ಗೊಮ್ಮಟವು ಏಕಕಾಲದಲ್ಲಿ 9 ಸಾವಿರ ಮಂದಿ ಸೇರುವಷ್ಟು ಸ್ಥಳಾವಕಾಶ ಹೊಂದಿದೆ. ಇಲ್ಲಿ ಸಂಗೀತ ಕಛೇರಿ ಮತ್ತಿತರ ಕಾರ್ಯಕ್ರಮ
ಗಳನ್ನು ಆಯೋಜಿಸಬಹುದು. ಸಣ್ಣ ಗೊಮ್ಮಟದಲ್ಲಿ ಸುಮಾರು 2 ಸಾವಿರ ಮಂದಿ ಸೇರುವಂತಹ ಕಾರ್ಪೊರೇಟ್‌ ಕಾರ್ಯಕ್ರಮಗಳನ್ನು ಏರ್ಪಡಿಸ
ಬಹುದು. ಬಯಲು ಪ್ರದೇಶದಲ್ಲಿ ಸಾಮಾಜಿಕ ಒಡನಾಟ, ಭೋಜನ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಷದ 365 ದಿನಗಳೂ ಹಮ್ಮಿಕೊಳ್ಳಬಹುದು.

ಎಂಬಸಿ ಬಳಗ, ಲೈವ್‌ನೇಷನ್‌ ಎಂಟರ್‌ಟೇನ್‌ಮೆಂಟ್‌, ಫೇಸ್‌ 1 ಎಕ್ಸ್‌ಪೀರಿಯೆನ್ಸಸ್‌ ಮುಂತಾದ ಕಂಪನಿಗಳ ಒಕ್ಕೂಟವು ಸೇರಿ ನಿರ್ಮಿಸುತ್ತಿರುವ ಈ ತಾಣವು 6.3 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ‘ಈ ಯೋಜನೆಗಾಗಿ ₹ 100 ಕೋಟಿ ಖರ್ಚು ಮಾಡಲಿದ್ದೇವೆ’ ಎಂದು ಎಂಬಸಿ
ಅಧಿಕಾರಿಯೊಬ್ಬರು ತಿಳಿಸಿದರು.

ಎಂಬಸಿ ಬಳಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದಿತ್ಯ ವಿರ್ವಾನಿ, ‘ಈ ತಾಣವು ಬೆಂಗಳೂರನ್ನು ಅಂತರರಾಷ್ಟ್ರೀಯ ನಕಾಶೆಯಲ್ಲಿ ಸದಾ ಚಟುವಟಿಕೆಯಿಂದ ಕೂಡಿದ ಮನರಂಜನಾ ರಾಜಧಾನಿಯಾಗಿ ರೂಪಿಸಲಿದೆ. ಇದು ಭಾರತ ಮಾತ್ರವಲ್ಲ, ದಕ್ಷಿಣ ಏಷ್ಯಾದಿಂದಲೂ ಪ್ರೇಕ್ಷಕರನ್ನು ಸೆಳೆಯಲಿದೆ’ ಎಂದರು.

ಈ ಮನರಂಜನಾ ತಾಣವು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್‌) ₹ 13,000 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿಸ್ತರಣಾ ಯೋಜನೆಯ ಭಾಗವಾಗಿದೆ. 2022ರ ವೇಳೆಗೆ ದೇಶದಲ್ಲಿ ಅತಿ ಹೆಚ್ಚು ವಹಿವಾಟು ನಡೆಸುವ ಎರಡನೇ ದೊಡ್ಡ ವಿಮಾನನಿಲ್ದಾಣವನ್ನಾಗಿ ರೂಪಿಸುವುದು ಹಾಗೂ ಕೆಐಎಯು ವರ್ಷದಲ್ಲಿ ನಿರ್ವಹಿಸುವ ಪ್ರಯಾಣಿಕರ ಸಂಖ್ಯೆಯನ್ನು 6.50 ಕೋಟಿಗೆ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು