ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎ; ಬಳಕೆದಾರರ ಶುಲ್ಕ ಶೇ 54ರಷ್ಟು ಇಳಿಕೆ

Last Updated 1 ಸೆಪ್ಟೆಂಬರ್ 2018, 19:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಳಕೆದಾರರ ಶುಲ್ಕವನ್ನು ಶೇ 54ರಷ್ಟು ಇಳಿಕೆ ಮಾಡಲಾಗಿದೆ.‌

ಆ ಬಗ್ಗೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು (ಎಇಆರ್‌ಎ) ಆಗಸ್ಟ್‌ 31ರಂದು ಆದೇಶ ಹೊರಡಿಸಿದ್ದು, ಹೊಸ ಶುಲ್ಕವು ಇದೇ 16ರಿಂದ ಜಾರಿಗೆ ಬರಲಿದೆ. ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಟಿಕೆಟ್‌ ದರವೂ ಕಡಿಮೆ ಆಗುವ ಸಾಧ್ಯತೆ ಇದೆ.

2019ರ ಏಪ್ರಿಲ್ 1ರಿಂದ ಹಾಗೂ 2020ರ ಏಪ್ರಿಲ್ 1ರಿಂದಲೂ ಶುಲ್ಕದಲ್ಲಿ ಬದಲಾವಣೆ ಆಗಲಿದೆ. ಆ ಬಗ್ಗೆಯೂ ಎಇಆರ್‌ಎ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ಶುಲ್ಕ ಏರಿಕೆ ಹಾಗೂ ಇಳಿಕೆ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆದಿತ್ತು. ಶುಲ್ಕ ಇಳಿಕೆ ಮಾಡುವಂತೆ ಹಲವರು ಒತ್ತಾಯಿಸಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಶುಲ್ಕ ಇಳಿಕೆ ಮಾಡದಂತೆ ಪ್ರಸ್ತಾವ ಸಲ್ಲಿಸಿತ್ತು. ಆ ಪ್ರಸ್ತಾವವನ್ನು ತಿರಸ್ಕರಿಸಿರುವ ಎಇಆರ್‌ಎ, ಶುಲ್ಕ ಇಳಿಕೆ ಮಾಡುವ ಮೂಲಕ ಪ್ರಯಾಣಿಕ ಸ್ನೇಹಿ ನಿರ್ಧಾರ ಕೈಗೊಂಡಿದೆ’ ಎಂದು ಏರ್‌ಲೈನ್ಸ್ ಬಳಕೆದಾರರ ಸಲಹಾ ಸಮಿತಿ (ಎಯುಸಿಸಿ) ಸದಸ್ಯರೊಬ್ಬರು ತಿಳಿಸಿದರು.

ಸಭೆಯಲ್ಲಿ ಕೇಳಿಬಂದಿದ್ದ ಬೇಡಿಕೆ: ವಿಮಾನ ನಿಲ್ದಾಣದಲ್ಲಿ ಕೆಲವು ತಿಂಗಳ ಹಿಂದಷ್ಟೇ ಏರ್‌ಲೈನ್ಸ್ ಬಳಕೆದಾರರ ಸಲಹಾ ಸಮಿತಿ (ಎಯುಸಿಸಿ) ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಕೆಲವು ಸದಸ್ಯರು, ಶುಲ್ಕ ಇಳಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದರು.

ಅದಕ್ಕೆ ಬೆಂಬಲ ಸೂಚಿಸಿದ್ದ ಉಳಿದೆಲ್ಲ ಸದಸ್ಯರು, ಶುಲ್ಕ ಇಳಿಕೆ ಮಾಡುವಂತೆ ಎಇಆರ್‌ಎಗೆ ಮನವಿ ಸಹ ಕಳುಹಿಸಿದ್ದರು.

‘ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಶುಲ್ಕ ಸಂಗ್ರಹದಿಂದ ಆದಾಯವೂ ಹೆಚ್ಚಳವಾಗಿದೆ. ಹೀಗಾಗಿ, ಬಳಕೆದಾರರ ಶುಲ್ಕ ಕಡಿತ ಮಾಡುವಂತೆ ಆಗ್ರಹಿಸಿದ್ದೆವು’ ಎಂದು ಎಯುಸಿಸಿ ಸದಸ್ಯರೊಬ್ಬರು ತಿಳಿಸಿದರು.

ಬಳಕೆ ಶುಲ್ಕದಲ್ಲೂ ಇಳಿಕೆ: ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್, ಪಾರ್ಕಿಂಗ್ ಹಾಗೂ ಹೌಸಿಂಗ್ ದರವನ್ನೂ ಇಳಿಕೆ ಮಾಡಲಾಗಿದೆ. ವಿಮಾನಗಳಿಗೆ ತುಂಬಿಸುವ ತೈಲದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಬಳಕೆದಾರರ ಶುಲ್ಕ ಪಟ್ಟಿ

ದೇಶೀಯ, ಅಂತರರಾಷ್ಟ್ರೀಯ

ಮೊದಲಿದ್ದ ಶುಲ್ಕ ,₹306,₹1.226

2018ರ ಸೆ. 16ರಿಂದ, ₹139, ₹558

2019 ಏ. 1ರಿಂದ, ₹179, ₹716

2020 ಏ.1ರಿಂದ, ₹100, ₹400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT