ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಗೆ ಹೃದಯವಂತಿಕೆ ಅಗತ್ಯ: ಡಾ.ಸಿ.ಎನ್. ಮಂಜುನಾಥ್ ಅಭಿಮತ

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಮತ
Last Updated 28 ನವೆಂಬರ್ 2021, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯರಾದವರು ಹೃದಯವಂತಿಕೆ ಮತ್ತು ವೃತ್ತಿಪರತೆ ಹೊಂದಿರಬೇಕೇ ಹೊರತು ಧನದಾಹಿತ್ವವಲ್ಲ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ವಿಶ್ವ ಕನ್ನಡ ಕಲಾಕೂಟವು ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕಡಾ.ಸಿ ರಾಮಚಂದ್ರ ಅವರಿಗೆ‘ಕರ್ನಾಟಕದ ಧ್ರುವತಾರೆ’ ಪ್ರಶಸ್ತಿ ನೀಡಿ ಗೌರವಿಸಿದರು.

‘ಡಿಜಿಟಲೀಕರಣ ಮತ್ತು ಮೊಬೈಲ್ ಬಳಕೆ ಮಾನವೀಯ ಸಂಬಂಧಗಳನ್ನೇ ತೊಡೆದು ಹಾಕಿವೆ. ಹಿಂದೆ ವಿರಳವಾಗಿ ನಡೆಯುತ್ತಿದ್ದ ದರೋಡೆ ಪ್ರಕರಣಗಳು ಈಗ ಸಾಮಾನ್ಯವಾಗಿವೆ.ಜಗತ್ತಿನ ಯಾವುದೊ ಮೂಲೆಯಲ್ಲಿ ಕುಳಿತ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಅರಿವಿಗೆ ಬಾರದ ರೀತಿಯಲ್ಲಿ ತಂತ್ರಜ್ಞಾನದ ನೆರವಿನಿಂದ ಹಣ ದೋಚುತ್ತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದಡಾ.ಸಿ. ರಾಮಚಂದ್ರ, ‘ವೈದ್ಯ ವೃತ್ತಿ ನನಗೆ ತುಂಬಾ ಇಷ್ಟವಾದದ್ದು. ಮನಸ್ಸಿನ ವೇಗಕ್ಕೆ ತಕ್ಕಂತೆ ಕೆಲಸಗಳು ಆಗದಿದ್ದಾಗಕಾರ್ಯದೊತ್ತಡ ಹೆಚ್ಚಾಗುತ್ತದೆ. ಆಡಳಿತಾತ್ಮಕ ಜವಾಬ್ದಾರಿ ಕೃತಜ್ಞತೆ ಇಲ್ಲದ ಕೆಲಸ’ ಎಂದರು.

ಪರಿಸರವಾದಿ ಅ.ನ. ಯಲ್ಲಪ್ಪ ರೆಡ್ಡಿ, ‘ಪ್ರೀತಿ, ಕರುಣೆ,ವಿನಯಶೀಲತೆ ಸೇರಿದಂತೆ ವಿವಿಧ ಗುಣಗಳನ್ನು ವೈದ್ಯರು ಅಳವಡಿಸಿಕೊಂಡಿರಬೇಕು. ಆಗ ರೋಗಿಗಳ ಮನೋಗತ ಅರಿತು, ಕಾಯಿಲೆ ವಾಸಿ ಮಾಡಬಹುದು’ ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT