ಶನಿವಾರ, ಸೆಪ್ಟೆಂಬರ್ 21, 2019
21 °C
ಪ್ರಧಾನಿ ಮೋದಿಗೆ ಎಸ್‌.ಎಂ.ಕೃಷ್ಣ ಪತ್ರ

ಬೆಂಗಳೂರಿನಲ್ಲಿ ಜ್ಞಾನ ನಗರಿ ಸ್ಥಾಪಿಸಿ

Published:
Updated:
Prajavani

ಬೆಂಗಳೂರು: ಯುವಜನತೆಗೆ ವಿಶ್ವದರ್ಜೆ ತರಬೇತಿ ನೀಡುವ ಜ್ಞಾನ ನಗರಿಯನ್ನು ದೇಶದಲ್ಲಿ ಸ್ಥಾಪಿಸುವ ಅಗತ್ಯ ಇದೆ. ಈಗಾಗಲೇ ಐಟಿ, ವಿಜ್ಞಾನ, ಸ್ಟಾರ್ಟ್‌ಅಪ್‌ ರಾಜಧಾನಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲೇ ಇಂತಹ ಮೊದಲ ಕೇಂದ್ರ ತೆರೆಯಬೇಕು ಎಂದು ಮಾಜಿ ವಿದೇಶಾಂಗ ವ್ಯವಹಾರ ಸಚಿವ ಎಸ್‌.ಎಂ.ಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.

‘ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ಎನ್‌ಐಎಂಜೆಡ್‌) ಸ್ಥಾಪನೆಯಂತೆ ರಾಜ್ಯ ಸರ್ಕಾರಗಳೊಂದಿಗಿನ ಪಾಲುದಾರಿಕೆ
ಯಲ್ಲೂ ಇಂತಹ ಕೇಂದ್ರ ಸ್ಥಾಪಿಸಬಹುದು. ಹಲವು ದೇಶಗಳೊಂದಿಗೆ ಇರುವ ಉತ್ತಮ ಸಂಬಂಧ ಬಳಸಿಕೊಂಡು ಇಂತಹ ಜ್ಞಾನ ನಗರಿ ಸ್ಥಾಪನೆಯನ್ನು ಈ ಹಣಕಾಸು ವರ್ಷದೊಳಗೆಯೇ ಮಾಡಬೇಕು’ ಎಂದು ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

ದೇಶದಲ್ಲಿ ಪ್ರಸ್ತುತ 30 ಕೋಟಿಗೂ ಅಧಿಕ ಮಂದಿ 15 ವರ್ಷದೊಳಗಿನವರಾಗಿದ್ದು, 2030ರವರೆಗೆ ಪ್ರತಿ ತಿಂಗಳು 10 ಲಕ್ಷ ಮಂದಿ 18 ವರ್ಷ ಪೂರೈಸಲಿದ್ದಾರೆ. ಇವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇದಕ್ಕೆ ಅನುಗುಣವಾಗಿ ಜಾಗತಿಕ ಮಟ್ಟದ ಜ್ಞಾನ ನಗರಿಗಳನ್ನು ದೇಶದಲ್ಲಿ ಸ್ಥಾಪಿಸಬೇಕಾಗಿದೆ ಎಂದು ವಿವರಿಸಿದ್ದಾರೆ.

Post Comments (+)