ಸ್ವರ್ಣಾಂಭ ವಿದ್ಯಾ ಸಂಸ್ಥೆಯಿಂದ ಕೊಡಗಿಗೆ ₹40 ಸಾವಿರ ದೇಣಿಗೆ

ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಸ್ವರ್ಣಾಂಭ ವಿದ್ಯಾ ಸಂಸ್ಥೆ ವತಿಯಿಂದ ಕೊಡಗಿನ ನೆರೆ ಸಂತ್ರಸ್ತರ ಅನುಕೂಲಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹40 ಸಾವಿರ ದೇಣಿಗೆಯನ್ನು ಚೆಕ್ ಮೂಲಕ ತಹಶೀಲ್ದಾರ್ ರಾಜಶೇಖರ್ ಅವರಿಗೆ ನೀಡಲಾಯಿತು.
‘ಮಳೆಯಿಂದಾಗಿ ಕೊಡಗು ಅಕ್ಷರಶಃ ನಾಶವಾಗಿದೆ. ಅಲ್ಲಿಯ ಜನರು ಬೀದಿಗೆ ಬಿದ್ದಿದ್ದಾರೆ. ಅವರು ಪುನಃ ತಮ್ಮ ಬದುಕು ಕಟ್ಟಿಕೊಳ್ಳಲು ನಾಡಿನ ಜನ ಸಹಾಯ ಮಾಡುತ್ತಿದ್ದಾರೆ. ಈ ಶಾಲೆಯಿಂದ ಕೂಡ ಸಣ್ಣ ಸಹಾಯ ಮಾಡುತ್ತಿರುವುದು ಸಂತೋಷದ ವಿಷಯ’ ಎಂದು ಹೊನ್ನಮ್ಮ ಗವಿ ಮಠದ ರುದ್ರಮುನಿ ಸ್ವಾಮೀಜಿ ಹೇಳಿದರು.
‘ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯೊಂದು ಕೊಡಗಿನ ಜನರಿಗಾಗಿ ಮಿಡಿದಿರುವುದು ಉತ್ತಮ ಸಂಗತಿ. ಅವರು ನೀಡಿದ ಚೆಕ್ ಅನ್ನು ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಹಶೀಲ್ದಾರ್ ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಎಚ್.ಸಿ.ಸುರೇಶ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.