ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ‘ಕೈ’ ಹಿಡಿದ ಎಚ್.ಆರ್. ಶ್ರೀನಾಥ್

Last Updated 3 ಜುಲೈ 2022, 19:50 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿದ್ದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕೊಪ್ಪಳದ ಎಚ್.ಆರ್. ಶ್ರೀನಾಥ್ ಮತ್ತೆ ‘ಕೈ’ ಹಿಡಿದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಬಾವುಟ ನೀಡಿ‌ ಶ್ರೀನಾಥ್ ಅವರನ್ನು ಸ್ವಾಗತಿಸಿದರು.

ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಯಾವ ಷರತ್ತೂ ಇಲ್ಲದೇ, ಎಲ್ಲರ ಒಮ್ಮತದಿಂದ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂಬ ಷರತ್ತು ಮಾತ್ರ ಅವರಿಗೆ ನಾವು ಹಾಕಿದ್ದೇವೆ’ ಎಂದರು.

‘ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಪಕ್ಷದ ಸಾಮರ್ಥ್ಯವೇನು ಎನ್ನುವುದೂ ಗೊತ್ತಿದೆ. ಶ್ರೀನಾಥ್ ಸೇರ್ಪಡೆ ಸಂತೋಷದ ವಿಷಯ. ಕೊಪ್ಪಳ ಜಿಲ್ಲೆಯಲ್ಲಿ‌ ಪಕ್ಷಕ್ಕಾಗಿ ಜೊತೆಯಾಗಿ ದುಡಿಯುತ್ತೇವೆ’ ಎಂದು ಇಕ್ಬಾಲ್ ಅನ್ಸಾರಿ ತಿಳಿಸಿದರು.

‘ಮೂರು ವರ್ಷ ವನವಾಸ ದಲ್ಲಿದ್ದೆ. ಬಿಜೆಪಿ ಸೇರುವಂತೆ ಅಮಿತ್ ಶಾ ಕಚೇರಿಯಿಂದಲೇ ಆಹ್ವಾನ ಬಂದಿತ್ತು. ಜಾತ್ಯತೀತತೆಯ ಕಾರಣ ಮತ್ತೆ ಕಾಂಗ್ರೆಸ್‌ಗೆ ವಾಪಸ್ಸಾಗಿದ್ದೇನೆ. ಅಂಜನಾದ್ರಿ ವಿಚಾರ ಮುಂದಿಟ್ಟುಕೊಂಡು ಅವರು ರಾಜಕೀಯ ಮಾಡುತ್ತಿದ್ದಾರೆ. ಈ ಪವಿತ್ರ ಕ್ಷೇತ್ರವನ್ನು ರಕ್ಷಿಸುವ ಕೆಲಸ ಮಾಡುತ್ತೇವೆ‌’ ಎಂದು ಶ್ರೀನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT