ಬುಧವಾರ, ಡಿಸೆಂಬರ್ 8, 2021
19 °C

ಕೋವಿಡ್‌ ಸೇನಾನಿಗಳಿಗೆ ಪಾದಪೂಜೆ: ವೆಂಕಟರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಕೋವಿಡ್‌ ಅವಧಿಯಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕೋವಿಡ್‌ ಸೇನಾನಿಗಳಿಗೆ ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಪಾದ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ವಿಜಿನಾಪುರದಲ್ಲಿ ಮಂಗಳವಾರ ನಡೆಯಿತು. 

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ವೆಂಕಟರೆಡ್ಡಿ,‘ಕೋವಿಡ್‌ ಸಮಯದಲ್ಲಿ ವೈದ್ಯರ ಸೇವೆ ಶ್ಲಾಘನೀಯ. ಯಾವುದೇ ರಜೆ ತೆಗೆದುಕೊಳ್ಳದೆ, ನಿರಂತರವಾಗಿ ಲಸಿಕಾ ಅಭಿಯಾನದಲ್ಲಿ ತೊಡಗಿದ್ದಾರೆ. ಅವರಿಗೆ ಪಾದ ಪೂಜೆ ಮಾಡಿ ಗೌರವಿಸುವುದು ಒಳ್ಳೆಯ ಕೆಲಸ’ ಎಂದರು.

ಬಿಜೆಪಿ ಸ್ಥಳೀಯ ಮುಖಂಡ ಬಂಡೆ ಎಸ್.ರಾಜು,‘ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 95ರಷ್ಟು ಲಸಿಕಾ ಪೂರ್ಣಗೊಳಿಸಿರುವ ವಾರ್ಡ್ ವಿಜಿನಾಪುರ’ ಎಂದು  ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು