ಗುರುವಾರ , ಮಾರ್ಚ್ 4, 2021
30 °C

ವಿಭೂತಿಪುರ ಕೆರೆ ಸುತ್ತ ಸಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ವಿಭೂತಿಪುರ ಕೆರೆ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಭಾನುವಾರ ನೆಡಲಾಯಿತು. ವಿಭೂತಿಪುರ ಕೆರೆ ಸಂರಕ್ಷಣಾ ತಂಡದಿಂದ ಆಯೋಜಿಸಿದ್ದ ವನಮಹೋತ್ಸವಕ್ಕೆ ಪಾಲಿಕೆ ಸದಸ್ಯ ಎಸ್.ಜಿ.ನಾಗರಾಜ್ ಚಾಲನೆ ನೀಡಿದರು.

‘ಎಲ್ಲರು ಪರಿಸರ ಕಾಳಜಿ ಹೊಂದಿದರೆ ನಾಡು ಸಮೃದ್ಧವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ನೀರಿನ ಮಟ್ಟ ವೃದ್ಧಿಸಲು ಪರಿಸರ ಸಂರಕ್ಷಣೆ ಮಾಡಬೇಕು. ವಿಭೂತಿಪುರ ಕೆರೆಯನ್ನು ಹಸಿರು ಉದ್ಯಾನವಾಗಿ ಪರಿವರ್ತಿಸಿ ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಮಾಡಲಾಗುವುದು. ₹4 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೆರೆ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ, ತೆರೆದ ಜಿಮ್, ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು’ ಎಂದರು.

‘ಬೆಂಗಳೂರು ನಗರವನ್ನು ಸೆಪ್ಟೆಂಬರ್ ವೇಳೆಗೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಸಲಾಗುತ್ತಿದೆ. ಕೇವಲ ಸಸಿ ನೆಟ್ಟರೆ ಸಾಲದು, ಅವುಗಳಿಗೆ ಪ್ರತಿನಿತ್ಯ ನೀರುಣಿಸಿ ಪೋಷಿಸಬೇಕು’ ಎಂದು ಹೇಳಿದರು.

ಎಚ್ಎಎಲ್ ವಾರ್ಡ್ ಸದಸ್ಯ ಮಂಜುನಾಥ್ ಮಾತನಾಡಿ, ‘ವಿಭೂತಿಪುರ ಕೆರೆ ನೀರನ್ನು ನಿರ್ವಹಣೆ ಮಾಡಲು ಸದ್ಯದಲ್ಲೆ ಎಸ್‌ಟಿಪಿ ನಿರ್ಮಾಣ ಮಾಡಲಾಗುವುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.