ಕೆ.ಆರ್.ಪುರ: ಹೊಸೂರು ಬಂಡೆ ಸಮೀಪವಿರುವ ಶ್ರೀ ಕೃಷ್ಣ ಗೋಶಾಲೆಯಲ್ಲಿ ಸಂಭವಿಸಿದ ಅವಘಡದಲ್ಲಿ ಸಾವಿರಕ್ಕೂ ಹೆಚ್ಚು ದನಗಳಿಗೆ ಶೇಖರಿಸಿ ಇಡಲಾಗಿದ್ದ ಒಣಹುಲ್ಲು ಸಂಪೂರ್ಣ ಭಸ್ಮವಾಗಿದ್ದು, ಬಾಗಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕಸಾಯಿಖಾನೆಗೆ ಸಾಗಿಸುತ್ತಿದ್ದ ದನಗಳನ್ನು ರಕ್ಷಣೆ ಮಾಡಿ ಕೆಲ ಸಂಘಟನೆಗಳು ಹಾಗೂ ಪೋಲಿಸರು ತಂದು ಬಿಟ್ಟಿರುವ ವಿವಿಧ ತಳಿಯ 1,158 ಪಶುಗಳ ಜೊತೆಗೆ ಒಂಟೆ, ಕುರಿ, ಕುದುರೆ, ಎಮ್ಮೆಗಳನ್ನು ಏಳು ವರ್ಷಗಳಿಂದ ಪಾಲನೆ ಮಾಡಲಾಗುತ್ತಿದೆ.

‘ದೊಡ್ಡಬಳ್ಳಾಪುರ, ದೇವನಹಳ್ಳಿ, ಬಾಗಲೂರು ಸುತ್ತಮುತ್ತಲಿನ 17 ಗ್ರಾಮಗಳಿಂದ ಒಂದು ವರ್ಷಕ್ಕೆ ಬೇಕಾಗುವಷ್ಟು ರಾಗಿ ಹುಲ್ಲನ್ನು ಖರೀದಿ ಮಾಡಿ ಶೇಖರಿಸಲಾಗಿತ್ತು. ಗೋಶಾಲೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಿಟಕಿ ಗಾಜು ಒಡೆದು ಒಣಹುಲ್ಲು ಘಟಕಕ್ಕೆ ಬೆಂಕಿ ಇಟ್ಟಿದ್ದಾರೆ’ ಎಂದು ಗೋಶಾಲಾ ಸಂಸ್ಥಾಪಕ ಪುಖ್ ರಾಜ್ ಮಹಾರಾಜ್ ದೂರಿನಲ್ಲಿ ತಿಳಿಸಿದ್ದಾರೆ.

‘ಕಸಾಯಿಖಾನೆಗೆ ರವಾನೆಯಾಗುತ್ತಿದ್ದ ಗೋವು ಸಾಕುತ್ತಿರುವುದರಿಂದ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಗೋಶಾಲೆಯಲ್ಲಿ ಒಣಹುಲ್ಲು ಗೋದಾಮಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಗೋಡೌನ್ ಕೂಡ ಹಾಳಾಗಿದ್ದು, ₹2 ಕೋಟಿಗೂ ಹೆಚ್ಚು ನಷ್ಟವಾಗಿದೆ’ ಎಂದು ತಿಳಿಸಿದ್ದಾರೆ.

ಅರವಿಂದ ಲಿಂಬಾವಳಿ ಭೇಟಿ: ಗೋಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ‘ಬೆಂಕಿ ಅವಘಡದಲ್ಲಿ ಗೋಶಾಲೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಗೋಶಾಲೆಯ ನವೀಕರಣ ಕಾಮಗಾರಿ ಕೈಗೊಳ್ಳಲು ಸಹಕಾರ ನೀಡಲಾಗುವುದು. ಮಾರ್ಚ್ 29ರಂದು ಕರಸೇವೆ ನಡೆಸಲಿದ್ದೇವೆ’ ಎಂದು ತಿಳಿಸಿದರು.

ನಗರಮಂಡಲ ಅಧ್ಯಕ್ಷ ಎಚ್.ಎಸ್.ಪಿಳ್ಳಪ್ಪ, ಗೋಶಾಲೆಯ ಮುಖ್ಯಸ್ಥ ಪುಖ್ ರಾಜ್ ಮಹಾರಾಜ್, ಕಣ್ಣೂರು ಅಶೋಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.