ಕೆ.ಆರ್.ಪುರ: ರೋಲ್ ಕಾಲ್ ವಸೂಲಿ ತಡೆಗಟ್ಟಿ, ಒತ್ತುವರಿಯಾದ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಕಾರ್ಯಕರ್ತರು ಗೋಣಿಚೀಲ ತೊಟ್ಟು ಕೆ.ಆರ್.ಪುರದ ಸಂತೆ ಮೈದಾನದಿಂದ ಸಂಚಾರಿ ಉಪ ಆಯುಕ್ತರ ಕಚೇರಿವರೆಗೂ ಕಾಲ್ನಡಿಗೆ ಜಾಥಾ ನಡೆಸಿದರು.

‘ಒಂದು ವರ್ಷದಿಂದ ಕೆ.ಆರ್.ಪುರ ಸಂತೆ ಮುಂಭಾಗದಲ್ಲಿ ರಾತ್ರಿ ಸುಮಾರು ಒಂದು ಗಂಟೆಯಿಂದ ಬೆಳಗಿನ ಜಾವ ಎಂಟು ಗಂಟೆವರೆಗೂ ಹಲವು ವ್ಯಾಪಾರಿಗಳು ರಸ್ತೆಯ ಮುಕ್ಕಾಲು ಭಾಗದವರೆಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಮುಚ್ಚಿ ವಾಹನ ದಟ್ಟಣೆಗೆ ಕಾರಣರಾಗಿರುತ್ತಿದ್ದಾರೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಸಂತೆಯ ಮುಂಭಾಗದಿಂದ ಪೂರ್ವ ಭಾಗದ ಜಿ.ಬಿ.ಎ ಪಾಲಿಕೆ ಕಚೇರಿವರೆಗೂ ವ್ಯಾಪಾರಸ್ಥರು ಅಕ್ರಮವಾಗಿ ಅಂಗಡಿಗಳನ್ನು ಹಾಕಿಕೊಂಡು ಆಂಬುಲೆನ್ಸ್ ವಾಹನಗಳು ಮತ್ತು ಶಾಲಾ ಮಕ್ಕಳ ವಾಹನಗಳಿಗೂ ರಸ್ತೆಯನ್ನು ಬಿಡುವುದಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಸುಂಕದ ಹೆಸರಿನಲ್ಲಿ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳಿಗೆ ₹1,000 ಹಾಗೂ ಅಂಗಡಿ ಹಾಕಿಕೊಂಡವರ ಬಳಿ ₹300 ಹಣವನ್ನು ಅಕ್ರಮವಾಗಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳು, ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ದೂರು ದಾಖಲಿಸಿದ್ದರು ಯಾವುದೇ ಪ್ರಯೋಜವಾಗಿಲ್ಲ. ಸುಂಕದ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿಯೇ ಹಫ್ತಾ ವಸೂಲಿ ಮಾಡುತ್ತಿರುತ್ತಾರೆ’ ಎಂದು ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ದೂರಿದರು.

‘ಪೊಲಿಸರಿಗೆ ದುಡ್ಡು ನೀಡುತ್ತಿದ್ದೇವೆ ನಮ್ಮನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡು ಕಿಡಿಗೇಡಿಗಳು ಓಡಾಡುತ್ತಿದ್ದಾರೆ. ಇಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ವಿ.ಶಿವಶಂಕರ್, ಒಕ್ಕೂಟದ ಪದಾಧಿಕಾರಿಗಳಾದ ಆರ್.ಕುಮಾರ್, ವಿನೋದ್ ಕುಮಾರ್, ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.