ಸೋಮವಾರ, ಡಿಸೆಂಬರ್ 5, 2022
21 °C

ಒಂದೇ ದಿನ 7.16 ಲಕ್ಷ ಜನ: ಕೃಷಿ ಮೇಳಗಳಲ್ಲೇ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃಷಿ ಮೇಳದ ನಡೆದ ಜಿಕೆವಿಕೆ ಆವರಣಕ್ಕೆ ಶನಿವಾರ ಜನಸಾಗರವೇ ಹರಿದುಬಂದಿತ್ತು. ಇದೇ ಮೊದಲ ಬಾರಿಗೆ ಕೃಷಿ ಮೇಳವು ದಾಖಲೆ ಬರೆಯಿತು.

ಶನಿವಾರ 7.16 ಲಕ್ಷ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೃಷಿ ಮೇಳ ವೀಕ್ಷಿಸಿದರು. ಕೃಷಿ ಮೇಳದ ಇತಿಹಾಸದಲ್ಲಿ ಇಷ್ಟು ಸಂಖ್ಯೆಯ ರೈತರು ಒಂದೇ ದಿನ ಭಾಗವಹಿಸಿದ್ದು ಇದೇ ಮೊದಲು ಎಂದು ವಿವಿ ತಿಳಿಸಿದೆ.

12,500 ಜನರು ಕೃಷಿ ವಿಶ್ವವಿದ್ಯಾಲಯದ ರಿಯಾಯಿತಿ ದರದಲ್ಲಿ ಊಟ ಸವಿದರು. ಮೇಳದಲ್ಲಿ ₹ 2.85 ಕೋಟಿಯ ವಹಿವಾಟು ನಡೆದಿದೆ. 684 ರೈತರು ಸಲಹಾ ಕೇಂದ್ರದಿಂದ ಮಾಹಿತಿಯನ್ನು ಪಡೆದುಕೊಂಡರು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು