ಸ್ಟಾರ್ಟ್‌ ಅಪ್‌ ಸಂಸ್ಥೆಗಳೊಂದಿಗೆ ಐಟಿಐ ಒಪ್ಪಂದ

7
ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನ ಉತ್ಪಾದನೆಗೆ ಮುನ್ನುಡಿ

ಸ್ಟಾರ್ಟ್‌ ಅಪ್‌ ಸಂಸ್ಥೆಗಳೊಂದಿಗೆ ಐಟಿಐ ಒಪ್ಪಂದ

Published:
Updated:
Deccan Herald

ಬೆಂಗಳೂರು: ದೇಶದಲ್ಲಿ ಐಸಿಟಿ-ಐಒಟಿ ಆಧರಿತ ಉತ್ಪನ್ನಗಳನ್ನು ತಯಾರಿಸುವ ಕ್ಷೇತ್ರದಲ್ಲಿ ಅತ್ಯಾಧುನಿಕ ಆವಿಷ್ಕಾರಗಳನ್ನು ಹೊರತಂದಿರುವ ಸ್ಟಾರ್ಟ್‌ ಅಪ್‌ ಸಂಸ್ಥೆಗಳೊಂದಿಗೆ ಐಟಿಐ ಲಿಮಿಟೆಡ್ ಒಪ್ಪಂದಕ್ಕೆ ಸಹಿ ಹಾಕಿತು.

ಮಿಲಿಟರಿ ಅಡ್ವಾನ್ಸ್ಡ್ ರೇಡಾರ್ ಸಿಸ್ಟಂ, ಅಡ್ವಾನ್ಸ್‌ಡ್ ಎಡ್ಜ್ ರೂಟರ್ ಸಿಸ್ಟಮ್, ನೆಕ್ಸ್ಟ್ ಜನರೇಷನ್ 5ಜಿ ತಂತ್ರಜ್ಞಾನ ಆಧರಿತ ಉತ್ಪನ್ನಗಳು, ಡೇಟಾ ಸ್ಟೋರೇಜ್ ಮತ್ತು ನೆಟ್‌ವರ್ಕಿಂಗ್‌, ಡಿಜಿಟಲ್ ಸೆಕ್ಯೂರಿಟಿ ಸಲ್ಯೂಷನ್ಸ್, ಅಡ್ವಾನ್ಸ್ ಮೀಟರಿಂಗ್ ಸಲ್ಯೂಷನ್ ಮತ್ತು ವೈ-ಫೈ ಉತ್ಪನ್ನಗಳು ಹಾಗೂ ಮತ್ತಿತರ ಪರಿಹಾರ ಉಪಕರಣಗಳ ಉತ್ಪಾದನೆ ಕುರಿತು ಒಪ್ಪಂದ ನಡೆದಿದೆ.

ಐಸಿಟಿ ಮತ್ತು ಐಒಟಿ ಸ್ಟಾರ್ಟ್‌ ಅಪ್‌ ಟೆಕ್ ಎಕ್ಸ್‌ಪೋ' ಪ್ರದರ್ಶನದಲ್ಲಿ ಕೇಂದ್ರ ಸಂವಹನ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಹಾಗೂ ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಸಮ್ಮುಖದಲ್ಲಿ ಸಹಿ ಹಾಕಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮನೋಜ್ ಸಿನ್ಹಾ, ‘16 ವರ್ಷಗಳಲ್ಲಿ ನಷ್ಟ ಅನುಭವಿಸಿದರೂ 2017-2018ರ ಹಣಕಾಸು ವರ್ಷದಲ್ಲಿ ಲಾಭಗಳಿಸುವ ಮೂಲಕ ಐಟಿಐ ಸಂಸ್ಥೆಯು ಫೀನಿಕ್ಸ್ ಪಕ್ಷಿಯಂತೆ ಪುಟಿದೇಳುತ್ತಿರುವುದನ್ನು ಕಂಡು ಸಂತಸವಾಗಿದೆ. ದೇಶದಲ್ಲಿ ಇದೀಗ 20 ಸಾವಿರಕ್ಕೂ ಅಧಿಕ ನವೋದ್ಯಮಗಳಿವೆ. ಅವುಗಳ ಬೆಳವಣಿಗೆಗೆ ಎಲ್ಲ ರೀತಿಯ ಸೌಕರ್ಯ ಮತ್ತು ಸವಲತ್ತುಗಳನ್ನು ಭಾರತ ಇಂದು ಹೊಂದಿದೆ. ಐಟಿಐ ಸಂಸ್ಥೆಯು ಇಲ್ಲಿ ಪ್ರದರ್ಶನಗೊಂಡ ಹಲವು ಆವಿಷ್ಕಾರಗಳನ್ನು ಪರಿಶೀಲಿಸಿ ವಿವಿಧ ಬಗೆಯ ಉತ್ಪನ್ನಗಳನ್ನು ಉತ್ಪಾದಿಸುವ ಕಡೆಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಐಟಿಐ ಲಿಮಿಟೆಡ್‌ನ ವಿಸ್ತೃತ ಮಾರುಕಟ್ಟೆ ಜಾಲ ಈ ಉದ್ಯಮಗಳ ಬೆಳವಣಿಗೆಗೆ ನೆರವಾಗಲಿದೆ’ ಎಂದರು.

ಅರುಣಾ ಸುಂದರರಾಜನ್ ಅವರು ಮಾತನಾಡಿ, ‘ಹೊಸ ಡಿಜಿಟಲ್‌ ಸಂವಹನ ನೀತಿ – 2018ರ ಕರಡಿನಲ್ಲಿ ಸ್ಥಳೀಯ ಉತ್ಪಾದನೆಗೆ ಪ್ರಮುಖ್ಯತೆ ನೀಡಲಾಗಿದೆ. ಡಿಜಿಟಲ್ ಸಂವಹನ ತಂತ್ರಜ್ಞಾನ ವಿಭಾಗದಲ್ಲಿ ನಿರ್ದಿಷ್ಟ ಉತ್ಪನ್ನಗಳ ತ್ವರಿತ ಉತ್ಪಾದನೆಗೆ ಒತ್ತು ನೀಡಲಿದೆ. ಇನ್ನು ವಸ್ತು ಪ್ರದರ್ಶನದಲ್ಲಿ ಅನಾವರಣಗೊಳಿಸಲಾದ ಹಲವು ಅತ್ಯಾಧುನಿಕ ಆವಿಷ್ಕಾರಗಳನ್ನು ಉತ್ಪಾದಿಸುವ ಕಡೆಗೆ ಐಟಿಐ ಲಿಮಿಟೆಡ್ ಶ್ರಮಿಸಬೇಕಿದೆ’ ಎಂದರು.

ಟಿಟಿ ಲಿಮಿಟೆಡ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ಅಲಗೇಸನ್, ಐಟಿಐ ಲಿಮಿಟೆಡ್‌ನ ಮಾರುಕಟ್ಟೆ ನಿರ್ದೇಶಕ ಆರ್‌.ಎಂ.ಅಗರ್‌ವಾಲ್‌ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !