ಕೆಎಸ್‌ಆರ್‌ಟಿಸಿಯಿಂದ ತುರ್ತು ಸ್ಪಂದನ ದಳ

7

ಕೆಎಸ್‌ಆರ್‌ಟಿಸಿಯಿಂದ ತುರ್ತು ಸ್ಪಂದನ ದಳ

Published:
Updated:

ಬೆಂಗಳೂರು: ಭಾರಿ ಮಳೆ ಹಾಗೂ ಭೂಕುಸಿತದಿಂದ ರಸ್ತೆ ಹಾನಿಗೊಳಗಾದ ಪ್ರದೇಶಗಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ರದ್ದುಗೊಳಿಸಲಾಗಿದೆ. 

ಆದರೆ, ಇಂಥ ಪ್ರದೇಶಗಳಲ್ಲಿ ಸಿಲುಕಿ ತೊಂದರೆಗೆ ಒಳಗಾದವರನ್ನು ಕರೆತರಲು ಸಂಸ್ಥೆ ತುರ್ತು ಸ್ಪಂದನ ದಳ ರಚಿಸಿದೆ. 

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ರಸ್ತೆ ಮಧ್ಯೆ ಸಿಲುಕಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಆಯಾ ಘಟಕ ವ್ಯಾಪ್ತಿಯಲ್ಲಿ ತಲಾ ಎರಡು ವಾಹನ, ಚಾಲಕರು ಮತ್ತು ನಿರ್ವಾಹಕರನ್ನು ಸಜ್ಜುಗೊಳಿಸಿ ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಆಯಾ ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿದಲ್ಲಿ ವಾಹನಗಳನ್ನು ಅಗತ್ಯವಿರುವ ಸ್ಥಳಗಳಿಗೆ ಕಳುಹಿಸಲಾಗುವುದು ಎಂದು ಸಂಸ್ಥೆ ಹೇಳಿದೆ. 

ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಜಿಲ್ಲಾಡಳಿತದ ಸಹಯೋಗದೊಂದಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಯೋಧರ ಸಂಚಾರಕ್ಕೂ ಬಸ್‌ಗಳನ್ನು ಒದಗಿಸಲಾಗಿದೆ. 77 ಕಿಲೋ ಮೀಟರ್‌ಗಿಂತ ಹೆಚ್ಚು ಸುತ್ತುವರಿದ ಮಾರ್ಗಗಳಲ್ಲಿ ಸಂಚಾರಕ್ಕೆ ಟಿಕೆಟ್‌ ದರದಲ್ಲಿ ಹೆಚ್ಚಳ ಮಾಡಿಲ್ಲ. 

ಪಾಲ್ಘಾಟ್‌ಗೆ ಬಸ್‌: ಕೇರಳದ ತ್ರಿಶೂರ್‌ನಲ್ಲಿ 150ಕ್ಕೂ ಹೆಚ್ಚು ಮಂದಿ ಬೆಂಗಳೂರಿನ ಪ್ರಯಾಣಿಕರು ಸಿಲುಕಿದ್ದಾರೆ. ಅವರನ್ನು ಕರೆತರಲು 5 ಐರಾವತ ಕ್ಲಬ್‌ ಕ್ಲಾಸ್‌ಬಸ್‌ ಕಳುಹಿಸಲಾಗಿದೆ. ಅವರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು
ತಿಳಿಸಿದ್ದಾರೆ.  

ಕೆಎಸ್‌ ಆರ್‌ಟಿಸಿ ನಿಯಂತ್ರಣ ಕೊಠಡಿ ಸಂಖ್ಯೆ

 ಮೊ. 7760990100 ಮತ್ತು 7760990560

( 24 ಗಂಟೆ ಕಾರ್ಯನಿರ್ವಹಣೆ)

ಅವತಾರ್‌ ಶಾಖೆ (ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡಿದ ಪ್ರಯಾಣಿಕರಿಗೆ ಮಾಹಿತಿಗಾಗಿ): 7760990034, 7760990035

(ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ)

9 ಬಸ್‌ ಸಂಚಾರ

ಬೆಂಗಳೂರು: ಶನಿವಾರ ನಗರದಿಂದ 9 ಕೆಎಸ್‌ಆರ್‌ಟಿಸಿ ಬಸ್‌ಗಳು ಮಂಗಳೂರಿಗೆ ತೆರಳಿವೆ.  ಮಂಗಳೂರು, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ 52 ಬಸ್‌ಗಳ ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ. 

ಕೆಎಸ್‌ ಆರ್‌ಟಿಸಿ ಸಂಪರ್ಕ ಸಂಖ್ಯೆ

 ಕೆಎಸ್‌ ಆರ್‌ಟಿಸಿ ನಿಯಂತ್ರಣ ಕೊಠಡಿ ಸಂಖ್ಯೆ  ಮೊ. 7760990100, 7760990560( 24 ಗಂಟೆ ಕಾರ್ಯನಿರ್ವಹಣೆ)

ಅವತಾರ್‌ ಶಾಖೆ (ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡಿದ ಪ್ರಯಾಣಿಕರಿಗೆ ಮಾಹಿತಿಗೆ) 7760990034, 7760990035 (ಬೆಳಿಗ್ಗೆ 7– ರಾತ್ರಿ 10)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !