ಭಾನುವಾರ, ಆಗಸ್ಟ್ 18, 2019
24 °C

ಪ್ರವಾಹ: ಕೆಎಸ್‌ಆರ್‌ಟಿಸಿಗೆ ₹5.40 ಕೋಟಿ ನಷ್ಟ

Published:
Updated:

ಬೆಂಗಳೂರು: ಪ್ರವಾಹ ಮತ್ತು ನೆರೆಯಿಂದ ಬಸ್‌ ಸಂಚಾರ ಸ್ಥಗಿತಗೊಂಡ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ₹5.40 ಕೋಟಿ ನಷ್ಟ ಉಂಟಾಗಿದೆ.

ಬೆಂಗಳೂರಿನಿಂದ ಬೆಳಗಾವಿ, ಉತ್ತರ ಕನ್ನಡ, ಮಡಿಕೇರಿ, ಮುರುಡೇಶ್ವರ, ಧರ್ಮಸ್ಥಳ, ಕುಕ್ಕೆ
ಸುಬ್ರಹ್ಮಣ್ಯ, ಕೊಲ್ಲೂರು, ಕುಂದಾಪುರ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಹೋಗಬೇಕಿದ್ದ ಬಸ್‌ಗಳ ಸಂಚಾರಕ್ಕೆ ಅಡಚಣೆಯಾಗಿದೆ. ಆ.4ರಿಂದ ಈವರೆಗೆ 2,702 ಮಾರ್ಗಗಳಲ್ಲಿ 15.98 ಲಕ್ಷ ಕಿಲೋ ಮೀಟರ್‌ ಪ್ರಯಾಣ ರದ್ದುಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಟಿಕೆಟ್ ಕಾಯ್ದಿರಿಸಿದ್ದವರ ಪೈಕಿ 45,233 ಮಂದಿ ಪ್ರಯಾಣ ರದ್ದು ಮಾಡಿದ್ದು, ಅವರಿಗೆ ₹2.67 ಕೋಟಿ ವಾಪಸ್‌ ನೀಡಲಾಗಿದೆ ಎಂದು ನಿಗಮ ಪ್ರಕಟಣೆಯಲ್ಲಿ ವಿವರಿಸಿದೆ.

ಮಂಗಳವಾರವೂ 2,554 ಜನರು ಪ್ರಯಾಣ ರದ್ದುಪಡಿಸಿದ್ದು, ₹15.56 ಲಕ್ಷವನ್ನು ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದೆ.

Post Comments (+)