7

ಕೆಎಸ್‌ಆರ್‌ಟಿಸಿಗೆ ಇಂಡಿಯಾ ಬಸ್‌ ಪ್ರಶಸ್ತಿ

Published:
Updated:
ಕ್ವಾಲಾಲಂಪುರದಲ್ಲಿ ಕೆಎಸ್‌ಆರ್‌ಟಿಸಿ ನಿರ್ದೇಶಕ ಕೆ.ಶ್ರೀನಿವಾಸ್‌ ಅವರು ದಟಕ್ ಸೆರಿ ಮಿರ್ಜಾ ಮೊಹಮದ್ ತೈಜಾಬ್ ಅವರಿಂದ ಇಂಡಿಯಾ ಬಸ್‌ ಪ್ರಶಸ್ತಿ ಸ್ವೀಕರಿಸಿದರು. ಸಂಸ್ಥೆಯ ಸಹಾಯಕ ಸಂಚಾರ ವ್ಯವಸ್ಥಾಪಕ ರಾಘವೇಂದ್ರ ಇದ್ದರು

ಬೆಂಗಳೂರು: ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸಿರುವ ಮಾಹಿತಿ ತಂತ್ರಜ್ಞಾನ ಹಾಗೂ ಸುರಕ್ಷತಾ ಕ್ರಮಗಳಿಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) 2018ನೇ ಸಾಲಿನ ಇಂಡಿಯಾ ಬಸ್‌ ಪ್ರಶಸ್ತಿ ಲಭಿಸಿದೆ.

ಕ್ವಾಲಾಲಂಪುರದಲ್ಲಿ ಮಲೇಷಿಯಾ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಮಹಾನಿರ್ದೇಶಕ ದಟಕ್‌ ಸೆರಿ ಮಿರ್ಜಾ ಮೊಹಮದ್‌ ತೈಜಾಬ್‌ ಅವರಿಂದ ಕೆಎಸ್‌ಆರ್‌ಟಿಸಿಯ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕ ಕೆ.ಶ್ರೀನಿವಾಸ್‌ ಪ್ರಶಸ್ತಿ ಸ್ವೀಕರಿಸಿದರು.

ಸಾರಿಗೆ ಕ್ಷೇತ್ರದ ವಿದ್ಯಮಾನ ಹಾಗೂ ಬೆಳವಣಿಗೆ ಗುರುತಿಸಲು ಇಂಡಿಯಾ ಬಸ್‌ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಎಸ್‌ಆರ್‌ಟಿಸಿಗೆ ಸತತ ನಾಲ್ಕನೇ ಬಾರಿ ಈ ಪ್ರಶಸ್ತಿ ಲಭಿಸಿದೆ. 

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !