ಶನಿವಾರ, ಸೆಪ್ಟೆಂಬರ್ 18, 2021
27 °C

ಹಂಪಿಗೆ ಪ್ಯಾಕೇಜ್ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಂಪಿ ಮತ್ತು ತುಂಗಭದ್ರಾ ಜಲಾಶಯ ವೀಕ್ಷಣೆಗೆ ಪ್ಯಾಕೇಜ್‌ ಪ್ರವಾಸವನ್ನು ಕೆಎಸ್‌ಆರ್‌ಟಿಸಿ ರೂಪಿಸಿದ್ದು, ಆ.6ರಿಂದ ಆರಂಭವಾಗಲಿದೆ.

ಬೆಂಗಳೂರಿನಿಂದ ಪ್ರತಿದಿನ ರಾತ್ರಿ 10 ಗಂಟೆಗೆ ಹೊರಡುವ ಹವಾನಿಯಂತ್ರಿತ ರಹಿತ ಸ್ಲೀಪರ್ ಬಸ್‌, ಬೆಳಗಿನ ಜಾವ 4.30ಕ್ಕೆ ಹೊಸಪೇಟೆ ತಲುಪಲಿದೆ. ವಿಶ್ರಾಂತಿ, ಉಪಾಹಾರದ ಬಳಿಕ ಹಂಪಿಗೆ ತೆರಳಿ ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಸಾಸಿವೆಕಾಳು, ಕಡಲೆಕಾಳು ಗಣೇಶ, ಲಕ್ಷ್ಮಿ ನರಸಿಂಹ, ಬಡವಲಿಂಗ, ಅಶ್ವಶಾಲೆ, ಕಲ್ಯಾಣಿ, ಕಮಲ ಮಹಲ್, ಮಹಾನವಮಿ ದಿಬ್ಬ, ರಾಣಿಯರ ಈಜುಕೊಳ ವೀಕ್ಷಣೆ ಮಾಡಿಸಲಾಗುವುದು.

ಬಳಿಕ ತುಂಗಭದ್ರಾ ಜಲಾಶಯ, ಸಂಜೆ 7ಕ್ಕೆ ಸಂಗೀತ ಕಾರಂಜಿ ವೀಕ್ಷಣೆ ಮಾಡಿ ರಾತ್ರಿ 9ಕ್ಕೆ ಪ್ರಯಾಣ ಆರಂಭಿಸಿ ಬೆಳಿಗ್ಗೆ 4.30ಕ್ಕೆ ಬೆಂಗಳೂರಿಗೆ ಬಸ್‌ ತಲುಪಲಿದೆ. ವಯಸ್ಕರಿಗೆ ₹2,500 ಮತ್ತು ಮಕ್ಕಳಿಗೆ ₹2,300 ಪ್ರಯಾಣ ದರ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು