ಭಾನುವಾರ, ಜನವರಿ 17, 2021
28 °C

ತಿರುಪತಿ ಪ್ಯಾಕೇಜ್ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಿರುಪತಿ ಪ್ಯಾಕೇಜ್ ಪ್ರವಾಸವನ್ನು ಕೆಎಸ್‌ಆರ್‌ಟಿಸಿ ಗುರುವಾರದಿಂದ (ಜ.7) ಮತ್ತೆ ಆರಂಭಿಸಲಿದೆ.

ಐರಾವತ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಪ್ರವಾಸ ಕರೆದೊಯ್ಯಲಾಗುತ್ತದೆ. ಭಾನುವಾರದಿಂದ ಗುರುವಾರದ ತನಕ ವಯಸ್ಕರರಿಗೆ ಪ್ರಯಾಣದರ ₹2,200 ಮತ್ತು ಮಕ್ಕಳಿಗೆ (6ರಿಂದ 12 ವರ್ಷ) ₹1,800 ದರ ನಿಗದಿ ಮಾಡಲಾಗಿದೆ.

ವಾರಾಂತ್ಯದ ದಿನ (ಶುಕ್ರವಾರ ಮತ್ತು ಶನಿವಾರ) ವಯಸ್ಕರಿಗೆ ₹2,600 ಮತ್ತು ಮಕ್ಕಳಿಗೆ ₹2,000 ನಿಗದಿ ಮಾಡಲಾಗಿದೆ.

ಪ್ರತಿದಿನ ರಾತ್ರಿ 8.45ಕ್ಕೆ ಶಾಂತಿನಗರ ನಿಲ್ದಾಣದಿಂದ ಬಸ್ ಹೊರಡಲಿದೆ. ಜಯನಗರ, ನಾಗಸಂದ್ರ, ಎನ್.ಆರ್.ಕಾಲೊನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತಹಳ್ಳಿ, ಐಟಿಐ ಗೇಟ್ ಮತ್ತು ಕೆ.ಆರ್‌.ಪುರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊಸಕೋಟೆ ಮಾರ್ಗದಲ್ಲಿ ಪ್ರಯಾಣ ಮುಂದುವರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.