ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KSRTC: ಸೋಮನಾಥಪುರ–ತಲಕಾಡು–ಮಧ್ಯರಂಗ–ಭರಚುಕ್ಕಿ–ಗಗನಚುಕ್ಕಿಗೆ ಪ್ಯಾಕೇಜ್ ಪ್ರವಾಸ

Last Updated 21 ಜುಲೈ 2022, 14:07 IST
ಅಕ್ಷರ ಗಾತ್ರ

ಬೆಂಗಳೂರು: ಸೋಮನಾಥಪುರ–ತಲಕಾಡು–ಮಧ್ಯರಂಗ– ಭರಚುಕ್ಕಿ–ಗಗನಚುಕ್ಕಿಗೆ ಕೆಎಸ್‌ಆರ್‌ಟಿಸಿ ವಾರಾಂತ್ಯದ ಪ್ಯಾಕೇಜ್ ಪ್ರವಾಸ ಆರಂಭಿಸಿದೆ.

ಜುಲೈ 23ರಿಂದ ಈ ಪ್ಯಾಕೇಜ್ ಪ್ರವಾಸ ಆರಂಭವಾಗಲಿದೆ. ‌ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಬೆಳಿಗ್ಗೆ 6.30ಕ್ಕೆ ಹೊರಡುವ ‘ಕರ್ನಾಟಕ ಸಾರಿಗೆ’ ಬಸ್‌, ಮದ್ದೂರು (ಉಪಾಹಾರ) ಮಾರ್ಗದಲ್ಲಿ ಸಾಗಿ, 9 ಗಂಟೆಗೆ ಸೋಮನಾಥಪುರ ತಲುಪಲಿದೆ. ಅಲ್ಲಿಂದ ತಲಕಾಡು ಪಂಚಲಿಂಗ ದರ್ಶನ(ಮಧ್ಯಾಹ್ನದ ಊಟ), ಮಧ್ಯರಂಗ, ರಂಗನಾಥಸ್ವಾಮಿ ದರ್ಶನ, ಭರಚುಕ್ಕಿ, ಗಗನಚುಕ್ಕಿ ವೀಕ್ಷಣೆ ಮುಗಿಸಿ ಸಂಜೆ 6.15ಕ್ಕೆ ಗಗನಚುಕ್ಕಿಯಿಂದ ಹೊರಡಲಿದೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಗಳೂರು ತಲುಪಲಿದೆ.

ಪ್ರವೇಶ ಶುಲ್ಕ, ಊಟ, ಉಪಾಹಾರ ಹೊರತುಪಡಿಸಿ ಪ್ರಯಾಣ ದರ ವಯಸ್ಕರರಿಗೆ ₹400 ಮತ್ತು ಮಕ್ಕಳಿಗೆ( 6ರಿಂದ 12 ವರ್ಷ) ₹250 ನಿಗದಿ ಮಾಡಿದೆ. ನಿಗಮದ ಟಿಕೆಟ್ ಕೌಂಟರ್‌ಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ (http:ksrtc.karnataka.gov.in) ಮುಂಗಡ ಟಿಕೆಟ್ ಪಡೆದು ಆಸನ ಕಾಯ್ದಿರಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT