ಬೆಂಗಳೂರು: ಸಾಲು ರಜೆಗೆ 300 ವಿಶೇಷ ಬಸ್

ಬೆಂಗಳೂರು: ವಾರಾಂತ್ಯ ರಜೆ ಮತ್ತು ಹಬ್ಬಗಳ ಪ್ರಯುಕ್ತ ಬೆಂಗಳೂರಿನಿಂದ ಹೊರ ಊರಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ 300 ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ ಮಾಡಿದೆ.
ವಿಷು ಮತ್ತು ಈಸ್ಟರ್ ಹಬ್ಬದ ಅಂಗವಾಗಿ ಏ.13ಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಕೇರಳದ ಕಣ್ಣೂರು, ತಿರುವನಂತಪುರ, ಪಾಲಕ್ಕಾಡ್, ತ್ರಿಶೂರು, ಎರ್ನಾಕುಲಂ, ಕೋಯಿಕೋಡ್, ಕಾಸರಗೋಡು, ಕೊಟ್ಟಾಯಂನಿಂದ ವಿಶೇಷ ಬಸ್‌ಗಳು ಏ.17ರಂದು ಬೆಂಗಳೂರಿಗೆ ಕಾರ್ಯಾಚರಣೆ ಮಾಡಲಿವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.