ಗುರುವಾರ , ನವೆಂಬರ್ 21, 2019
26 °C
ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ

‘ಸರ್ಕಾರಗಳಿಂದ ಕಾರ್ಮಿಕ ಕಾನೂನುಗಳು ಬಲಹೀನ’

Published:
Updated:
Prajavani

ಬೆಂಗಳೂರು: ‘ಕಾರ್ಮಿಕರ ಶಕ್ತಿ ಬಗ್ಗೆ ಆಳುವ ಸರ್ಕಾರಗಳಿಗೆ ಭಯವಿಲ್ಲ. ಇದರ ಪರಿಣಾಮ ಕಾರ್ಮಿಕ ಕಾನೂನುಗಳು ದಿನೇ ದಿನೇ ಬಲಹೀನಗೊಳ್ಳುತ್ತಿವೆ’ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.

‘ಸಂಶೋಧನೆ ಮತ್ತು ಕ್ರಮಕ್ಕಾಗಿ ಕರ್ನಾಟಕ ಕಾರ್ಮಿಕ ಪ್ರತಿನಿಧಿಗಳ ವೇದಿಕೆ’ಯು ಭಾನುವಾರ ಆಯೋಜಿಸಿದ್ದ ‘ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಕಾಯ್ದೆ -2019' ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ಕಾರ್ಮಿಕ ಕಾಯ್ದೆಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿವೆ. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ಕಾಯ್ದೆಯಲ್ಲಿ ಹಲವಾರು ನ್ಯೂನತೆಗಳಿವೆ. ಇದರ ವಿರುದ್ಧ ಹೋರಾಟಕ್ಕೆ ಮುಂದಾಗದೆ ಇದ್ದರೆ, ಭವಿಷ್ಯದಲ್ಲಿ ಕಾರ್ಮಿಕರಿಗೆ ಮಾರಕವಾಗಲಿದೆ’ ಎಂದರು.

ವಕೀಲೆ ರಾಮಪ್ರಿಯಾ, ‘ನೂತನ ಕಾರ್ಮಿಕ ಕಾಯ್ದೆಯಲ್ಲಿ ಕೃಷಿ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿಲ್ಲ. ಕಾರ್ಮಿಕರ ಕೆಲಸದ ವೇಳೆಯನ್ನು ಕೂಡ ಸರಿಯಾಗಿ ವ್ಯಾಖ್ಯಾನ ಮಾಡಿಲ್ಲ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿಲ್ಲ’ ಎಂದರು.

 

ಪ್ರತಿಕ್ರಿಯಿಸಿ (+)