ಲಾಲ್‌ಬಾಗ್‌: 38 ಸಾವಿರ ಮಂದಿ ಮೆಟ್ರೊ ಬಳಕೆ

7

ಲಾಲ್‌ಬಾಗ್‌: 38 ಸಾವಿರ ಮಂದಿ ಮೆಟ್ರೊ ಬಳಕೆ

Published:
Updated:

ಬೆಂಗಳೂರು: ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಬುಧವಾರ ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದ ಮೂಲಕ 37,536 ಮಂದಿ ಪ್ರಯಾಣಿಸಿದ್ದಾರೆ.

ಟಿಕೆಟ್‌ ಖರೀದಿ ವೇಳೆ ನೂಕುನುಗ್ಗಲು ಉಂಟಾಗಬಾರದು ಎಂಬ ದೃಷ್ಟಿಯಿಂದ ಈ ನಿಲ್ದಾಣದಿಂದ ಬೇರೆ ಕಡೆ ಪ್ರಯಾಣಿಸುವವರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು ಪೇಪರ್‌ ಟಿಕೆಟ್‌ ವ್ಯವಸ್ಥೆ ಮಾಡಿತ್ತು. ಬೇರೆ ನಿಲ್ದಾಣದಿಂದ ಲಾಲ್‌ಬಾಗ್‌ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ₹ 30 ನೀಡಿ ಮರುಪ್ರಯಾಣದ ಟಿಕೆಟ್‌ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಬುಧವಾರ ಒಂದೇ ದಿನ 23,874 ಮಂದಿ ಪೇಪರ್‌ ಟಿಕೆಟ್‌ ಖರೀದಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಸಂಜೆ ವೇಳೆ ಈ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚು ಇದ್ದುದರಿಂದ, ಸಿಬ್ಬಂದಿ ಬಳಕೆ ಸೀಮಿತವಾದ ಪ್ರವೇಶದ್ವಾರಗಳನ್ನೂ ಪ್ರಯಾಣಿಕರಿಗಾಗಿ ತೆರೆಯಲಾಗಿತ್ತು.

ಸ್ವಾತಂತ್ರ್ಯ ದಿನದಂದು 3.95 ಲಕ್ಷ ಮಂದಿ ಮೆಟ್ರೊ ಬಳಸಿದ್ದಾರೆ. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಮಾತ್ರ ಇಷ್ಟು ಮಂದಿ ಮೆಟ್ರೊ ಬಳಸುತ್ತಾರೆ. ವಾರದ ನಡುವಿನ ದಿನಗಳಲ್ಲಿ ಮೆಟ್ರೊದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇರುತ್ತದೆ. 

2 ಟನ್‌ ತ್ಯಾಜ್ಯ: ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದೆ.‌ 

‘ಆಗಸ್ಟ್‌ 4 ರಿಂದ 14ರವರೆಗೆ ನಡೆದ ಪ್ರದರ್ಶನದಲ್ಲಿ ಸುಮಾರು 2 ಟನ್‌ಗಿಂತಲೂ ಹೆಚ್ಚು ತ್ಯಾಜ್ಯ ಸಂಗ್ರಹವಾಗಿದೆ. ಆದರೆ, ಬುಧವಾರ ಒಂದೇ ದಿನ 2 ಟನ್‌ ತ್ಯಾಜ್ಯ ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು. 

‘ಕಸ ವಿಲೇವಾರಿಯ ಕಾರ್ಯವೂ ಭರದಿಂದ ಸಾಗಿದೆ. ಗಾಜಿನ ಅರಮನೆ ಶೀಘ್ರವೇ ಯಥಾಸ್ಥಿತಿಗೆ ಮರಳಲಿದೆ‌’ ಎಂದರು. 

‘ತ್ಯಾಜ್ಯ ವಿಂಗಡನೆ ಮಾಡಿಲ್ಲ. ಆದರೆ, ಪ್ರದರ್ಶನದ ಹೂಗಳ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ಗೊಬ್ಬರ ತಯಾರಿಸುತ್ತೇವೆ. ಅದೇ ಗೊಬ್ಬರವನ್ನು ಉದ್ಯಾನಕ್ಕೆ ಬಳಸಲಾಗುತ್ತದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್‌ ಮಾಹಿತಿ ನೀಡಿದರು. 

ಕೊನೆಯ ದಿನದ ಪ್ರದರ್ಶನಕ್ಕೆ ದಾಖಲೆಯ ಜನಸಾಗರವೇ ಹರಿದು ಬಂದಿತ್ತು. ಕಳೆದ 12 ದಿನಗಳವರೆಗೆ ಸತತವಾಗಿ ನಡೆದ ಪ್ರದರ್ಶನದಲ್ಲಿ ಒಟ್ಟು 1.76 ಲಕ್ಷ ಜನ ಭೇಟಿ ನೀಡಿದ್ದು, ₹ 2.36 ಕೋಟಿ ಶುಲ್ಕ ಸಂಗ್ರಹವಾಗಿದೆ. ಎಡೆಬಿಡದೆ ಮಳೆ ಬೀಳುತ್ತಿದ್ದರೂ ಲೆಕ್ಕಿಸದ ಜನತೆ ಜಾತ್ರೆಯಂತೆ ಪ್ರದರ್ಶನವನ್ನು ಕಣ್ತುಂಬಿಕೊಂಡರು.  

*
ಕಸ ವಿಲೇವಾರಿಯ ಕಾರ್ಯವೂ ಭರದಿಂದ ಸಾಗಿದೆ. ಗಾಜಿನ ಅರಮನೆ ಶೀಘ್ರವೇ ಯಥಾಸ್ಥಿತಿಗೆ ಮರಳಲಿದೆ‌.
–ಚಂದ್ರಶೇಖರ್‌, ತೋಟಗಾರಿಕೆ ಇಲಾಖೆ ನಿರ್ದೇಶಕ

*


ಲಾಲ್‌ಬಾಗ್‌ನಲ್ಲಿ 12 ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನ ಮುಗಿದ ನಂತರ ಗುರುವಾರ ಬಿ.ಸಿ.ಡಬ್ಲ್ಯೂ.ಸಿ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ತ್ಯಾಜ್ಯವನ್ನು ಸಂಗ್ರಹಿಸಿದರು – ಪ್ರಜಾವಾಣಿ ಚಿತ್ರ

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !