ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಕಾಶಿ ನೋಡಬಂದ 1.72 ಲಕ್ಷ ಜನ!

ರಜಾ ದಿನದಂದು ಫಲಪುಷ್ಪ ಪ್ರದರ್ಶನಕ್ಕೆ ದಾಖಲೆಯ ವೀಕ್ಷಕರ ಭೇಟಿ
Last Updated 15 ಆಗಸ್ಟ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಗುರುವಾರ ಜನಸಾಗರವೇ ಹರಿದು ಬಂದಿತ್ತು.

1.72 ಲಕ್ಷ ಜನ ಭೇಟಿ ನೀಡಿದ್ದು, ಒಂದೇ ದಿನ ಇಷ್ಟೊಂದು ಮಂದಿ ಭೇಟಿ ನೀಡಿದ್ದು ದಾಖಲೆ. ಸಾರ್ವಜನಿಕರನ್ನು ನಿಯಂತ್ರಿಸುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿತು.

ಮಳೆಯ ವಾತಾವರಣವಿದ್ದರೂಶಾಲೆ–ಕಾಲೇಜು, ಕಚೇರಿಗಳಿಗೆ ರಜೆ ಇದ್ದಿದ್ದರಿಂದ ಬೆಳಿಗ್ಗೆ 9ರಿಂದಲೇ ಸಾರ್ವಜನಿಕರು ಬಂದರು.ಸಂಜೆ ವೇಳೆಗೆ ಎತ್ತ ನೋಡಿದರೂ ಜನವೋ ಜನ. ಬಂಡೆ, ಕೆರೆ ಏರಿ, ಬೋನ್ಸಾಯ್, ತರಕಾರಿ ಉದ್ಯಾನ, ಮಾರಾಟ ಮಳಿಗೆಗಳ ಬಳಿ ಕಿಕ್ಕಿರಿದ ಜನಸಂದಣಿ ಇತ್ತು. ಗಾಜಿನ ಮನೆಯಲ್ಲಿ ಜನದಟ್ಟಣೆ ಉಂಟಾಗಿ, ಸಾಲುಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಟಿಕೆಟ್‌ ಪಡೆಯಲು ಸಹ ಜನತೆ ಸಾಲಿನಲ್ಲಿ ಕೆಲಹೊತ್ತು ನಿಲ್ಲಬೇಕಾಯಿತು. ಇದರಿಂದ ಮಕ್ಕಳು, ವೃದ್ಧರು ಸಮಸ್ಯೆ ಎದುರಿಸಿದರು.ಸಸ್ಯಕಾಶಿಯನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜಾತ್ರೆಯ ವಾತಾವರಣ ಎದ್ದು ಕಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಲಾಲ್‌ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಸೆಲ್ಫಿ ಸಂಭ್ರಮ:ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಪುಷ್ಪಗಳಿಂದ ಮಾಡಲಾಗಿರುವ ಮಂಟಪ ಹಾಗೂ ಮಂಟಪದೊಳಗಿನ ಶ್ವೇತವರ್ಣದ ಒಡೆಯರ್‌ ಅವರಪ್ರತಿಮೆ ಕಣ್ತುಂಬಿಕೊಳ್ಳಲು ಜನತೆ ಮುಗಿಬಿದ್ದರು. ಸ್ನೇಹಿತರು, ಕುಟುಂಬದ ಸದಸ್ಯರು ಹಾಗೂ ಆಪ್ತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇದರಿಂದಾಗಿ ಸಂಜೆಯಾ
ಗುತ್ತಿದ್ದಂತೆಗಾಜಿನ ಮನೆಯಲ್ಲಿ ಜನದಟ್ಟಣೆ ಉಂಟಾಯಿತು. ಕೆಲ ಪುಷ್ಪಗಳಿಗೆ ಹಾನಿಯೂ ಆಯಿತು.ಸಂಜೆ ವಾಪಸಾ
ಗುವ ವೇಳೆ ಲಾಲ್‌ಬಾಗ್ ಮೆಟ್ರೊ ನಿಲ್ದಾಣದಲ್ಲಿ ದಟ್ಟಣೆ ಉಂಟಾಗಿ, ಟಿಕೆಟ್‌ ಪಡೆಯಲು ಜನತೆ ಹರಸಾಹಸಪಟ್ಟರು.

ಆ.18ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು,ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.30ರವರೆಗೆ ಪ್ರದರ್ಶನ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT