ಗುರುವಾರ , ಮಾರ್ಚ್ 23, 2023
32 °C

ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಿಸಿದ ಮಾರ್ಗಕ್ಕೆ ಭೂಸ್ವಾಧೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಿಸಿದ ಮಾರ್ಗ ತುಮಕೂರು ರಸ್ತೆಯಲ್ಲಿ ಬರುವ ಚಿಕ್ಕಬಿದರಕಲ್ಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೆಚ್ಚುವರಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಿಎಂಆರ್‌ಸಿಎಲ್‌ಗೆ ಸರ್ಕಾರ ಅನುಮತಿ ನೀಡಿದೆ. 

1,855 ಚದರ ಮೀಟರ್ ಭೂಮಿಯನ್ನು ನಿಗಮವು ಸ್ವಾಧೀನ ಮಾಡಿಕೊಳ್ಳಲಿದೆ. ಉದ್ದೇಶಿತ ಚಿಕ್ಕಬಿದರಕಲ್ಲು ನಿಲ್ದಾಣದ ಎರಡೂ ಬದಿಗಳಲ್ಲಿ ಅಂದರೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಶ್ರೀಕಂಠಪುರ, ಅಂಚೆಪಾಳ್ಯ, ಚಿಕ್ಕಬಿದರಕಲ್ಲು ಮತ್ತಿತರ ಗ್ರಾಮಗಳಿವೆ. ಅಲ್ಲಿ ಮೆಟ್ರೊ ನಿಲ್ದಾಣಕ್ಕೆ ತೆರಳಲು ಸಂಪರ್ಕ ರಸ್ತೆ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ ಆಗಿತ್ತು.

ಉತ್ತರದಲ್ಲಿ 1,855 ಚ.ಮೀ. ಜಾಗದಲ್ಲಿ ಬರುವ ಕಿರ್ಲೋಸ್ಕರ್, ಜಿಂದಾಲ್ ಕಂಪೆನಿ ಸೇರಿ ಒಟ್ಟಾರೆ ಆರು ಖಾಸಗಿ ಸ್ಥಿರಾಸ್ತಿ ಸ್ವಾಧೀನಪಡಿಸಿಕೊಳ್ಳಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಉಳಿದಂತೆ ನಿಲ್ದಾಣದ ಇನ್ನೊಂದು ಬದಿ ದಕ್ಷಿಣದಲ್ಲಿ 12 ಮೀ. ಅಗಲ ಮತ್ತು 700 ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಬಿಡಿಎ ಬಳಿ ಇದೆ.

ಶ್ರೀಕಂಠಪುರದಲ್ಲಿ ರಸ್ತೆಯೊಂದರ ಅಭಿವೃದ್ಧಿಗೂ ಬಿಎಂಆರ್‌ಸಿಎಲ್‌ ಒಪ್ಪಿದ್ದು, ಮುಂದೆ ಬೀದಿ ದೀಪ ಸಹಿತ ಸುಸಜ್ಜಿತ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು