ಇಂದಿನಿಂದ ಆಸ್ತಿ ಸಮೀಕ್ಷೆ ಆರಂಭ

7
ಜಯನಗರ 4ನೇ ಬ್ಲಾಕ್‌ನಲ್ಲಿ ಚಾಲನೆ

ಇಂದಿನಿಂದ ಆಸ್ತಿ ಸಮೀಕ್ಷೆ ಆರಂಭ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮೆರಾ ಆಧರಿತ ಆಸ್ತಿ ಸಮೀಕ್ಷೆ ಜುಲೈ 9ರಿಂದ ಜಯನಗರದ 4ನೇ ಬ್ಲಾಕ್‌ನಿಂದ ಆರಂಭವಾಗಲಿದೆ. 1960ರ ಬಳಿಕ ಮೊದಲ ಬಾರಿಗೆ ಕಂದಾಯ ಇಲಾಖೆ ಆಸ್ತಿ ಸಮೀಕ್ಷೆ ಆರಂಭಿಸಿದೆ.

ಸರ್ವೇ ಆಫ್‌ ಇಂಡಿಯಾ ಸಂಸ್ಥೆ ನೆರವಿನೊಂದಿಗೆ ಈ ಕಾರ್ಯ ನಡೆಸಲಾಗುತ್ತಿದೆ. ನಗರ ಆಸ್ತಿ ಮಾಲೀಕತ್ವದ ದಾಖಲೆ ರಚನೆಗೆ ಈ ಸಮೀಕ್ಷೆ ಮೊದಲ ಹೆಜ್ಜೆಯಾಗಲಿದೆ. ಮೊದಲು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲು ಯೋಜಿಸಲಾಗಿತ್ತು. ಆದರೆ, ಈಗ ಡ್ರೋನ್ ಚಿತ್ರಗಳ ಮೂಲಕ ಪ್ರತಿ ಆಸ್ತಿಯ ಹೊರ ಆಯಾಮಗಳನ್ನು ಅಳತೆ ಮಾಡಲಾಗುತ್ತದೆ. ಆಸ್ತಿಗಳ ಭೌತಿಕ ಸಮೀಕ್ಷೆಯನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಮೂಲಕ ಪ್ರತಿ ಅಕ್ಷಾಂಶ–ರೇಖಾಂಶ ಗುರುತಿಸಲಾಗುತ್ತದೆ. ವಾಸ್ತವಾಂಶಗಳನ್ನು 1960ರ ಮೂಲ ನಕ್ಷೆಯೊಂದಿಗೆ ಹೋಲಿಸಿ ಪರಿಶೀಲಿಸಲಾಗುತ್ತದೆ. ಇಷ್ಟಾಗಿಯೂ ಮಾಹಿತಿ ಸಮರ್ಪಕವಾಗದಿದ್ದರೆ ಭೌತಿಕ ಸಮೀಕ್ಷೆ ಕೈಗೊಳ್ಳಲಾಗುತ್ತದೆ ಎಂದು ಸರ್ವೇ ಮತ್ತು ಭೂ ದಾಖಲೆ ವಿಭಾಗದ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.  

‘ಸರ್ವೇ ಆಫ್‌ ಇಂಡಿಯಾ ಪ್ರಾಯೋಗಿಕವಾಗಿ ಈ ಸಮೀಕ್ಷೆ ನಡೆಸುತ್ತಿದೆ. ಹಾಗಾಗಿ ಆ ಸಂಸ್ಥೆ ಯಾವುದೇ ಶುಲ್ಕ ಪಡೆಯುತ್ತಿಲ್ಲ. ಜಯನಗರ 4ನೇ ಬ್ಲಾಕ್‌ ಪ್ರದೇಶದ ಸಮೀಕ್ಷೆಯನ್ನು 2 ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ' ಎಂದು ಅವರು ತಿಳಿಸಿದರು.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !