ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕನ ಮೇಲೆ ಹಲ್ಲೆ: ಧರಣಿ

ಸ್ವಚ್ಛತಾ ಕೆಲಸ ಸಂಪೂರ್ಣ ಬಂದ್‌ ಇಂದಿನಿಂದ
Last Updated 11 ಏಪ್ರಿಲ್ 2018, 10:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೌರ ಕಾರ್ಮಿಕ ಬಸವರಾಜ ದೊಡ್ಡಮನಿ ಅವರ ಮೇಲೆ ಹಲ್ಲೆ ಮಾಡಿದ ಗುತ್ತಿಗೆದಾರರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿ–ಧಾರವಾಡ ಪರಿಶಿಷ್ಟ ಜಾತಿ/ಪಂಗಡದ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೌರ ಕಾರ್ಮಿಕರು ಪಾಲಿಕೆ ಕಚೇರಿ ಆವರಣದಲ್ಲಿ ಮಂಗಳವಾರ ರಾತ್ರಿ ಅಹೋರಾತ್ರಿ ಧರಣಿ ಆರಂಭಿಸಿದರು.

‘56ನೇ ವಾರ್ಡ್‌ನಲ್ಲಿ ಬೆಳಿಗ್ಗೆ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕ ಬಸವರಾಜ ದೊಡ್ಡಮನಿ ಅವರ ಬಳಿ ಬಂದ ಗುತ್ತಿಗೆದಾರ ರಜಪೂತ ರಾಸಲರ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆಲಸ ಮಾಡದಂತೆ ತಾಕೀತು ಮಾಡಿದ್ದಾರೆ. 15 ವರ್ಷಗಳಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವ ಬಸವರಾಜ ಅವರು ಮುಂದೆ ಕಾಯಂ ಆಗಲಿದ್ದಾರೆ. ಇದನ್ನು ಸಹಿಸದೇ ಹಲ್ಲೆ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ತಿಳಿಸಿದರು.

‘ಅವಳಿ ನಗರದಲ್ಲಿ ಗುತ್ತಿಗೆದಾರರ ಉಪಟಳ ಹೆಚ್ಚಾಗಿದೆ. ನಕಲಿ ಪೌರಕಾರ್ಮಿಕರು ಪಾಲಿಕೆಯಲ್ಲಿ ಸೇರಿಕೊಂಡಿದ್ದು, ಅವರನ್ನು ಕೆಲಸದಿಂದ ಹೊರ ಕಳುಹಿಸಬೇಕು. ನಿರ್ಭೀತಿಯಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಗುತ್ತಿಗೆದಾರನನ್ನು ಬಂಧಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಬುಧವಾರದಿಂದ ಸ್ವಚ್ಛತೆಯನ್ನು ಸಂಪೂರ್ಣ ಬಂದ್‌ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ದೂರು ದಾಖಲು: ‘ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದ ಇಂದಿರಾನಗರದ ರಜಪೂತ ರಾಸಲರ ಎಂಬುವವರು ‘ನೀನು ಮುನ್ಸಿಪಾಲಿಟಿ ಕೆಲಸ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ. ನಮಗೆ ಟೆಂಡರ್‌ ಆಗಿದೆ. ನೀನು ಕೆಲಸ ಮಾಡಲು ಯಾರು ಎಂದು ಪ್ರಶ್ನಿಸಿ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಪೌರಕಾರ್ಮಿಕ ಬಸವರಾಜ ದೊಡ್ಡಮನಿ ಘಂಟಿಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT