ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನವೋದ್ಯಮ ಆರಂಭಿಸಲು ಅನುದಾನ: ಫೆ. 27ಕ್ಕೆ ಜಿಎಎಫ್‌ಎಕ್ಸ್‌ ಸಮ್ಮೇಳನ

ಸಚಿವ ಪ್ರಿಯಾಂಕ್‌ ಖರ್ಗೆ
Published : 19 ಆಗಸ್ಟ್ 2024, 16:27 IST
Last Updated : 19 ಆಗಸ್ಟ್ 2024, 16:27 IST
ಫಾಲೋ ಮಾಡಿ
Comments

ಬೆಂಗಳೂರು: ಮುಂದಿನ ವರ್ಷದ ಫೆಬ್ರುವರಿ 27ರಿಂದ ಮಾರ್ಚ್‌ 1ರ ವರೆಗೆ ನಡೆಯಲಿರುವ ‘ಅನಿಮೇಷನ್, ವಿಷುಯಲ್‌ ಎಫೆಕ್ಟ್‌ ಗೇಮಿಂಗ್‌ ಮತ್ತು ಕಾಮಿಕ್ಸ್‌’ (ಎವಿಜಿಸಿ) ಸಮ್ಮೇಳನಕ್ಕೆ ಸಂಬಂಧಿಸಿದಂತೆ ‘ಜಿಎಎಫ್‌ಎಕ್ಸ್‌ 2025–ಇಮ್ಯಾಜಿನೇಶನ್ ನೆಕ್ಸ್ಟ್‌’ ಘೋಷವಾಕ್ಯ ಮತ್ತು ಕರಪತ್ರವನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೋಮವಾರ ಬಿಡುಗಡೆ ಮಾಡಿದರು.

‘ಕರ್ನಾಟಕ ಸರ್ಕಾರವು ಅಸೋಸಿಯೇಷನ್‌ ಆಫ್‌ ಬೆಂಗಳೂರು ಅನಿಮೇಷನ್‌ ಇಂಡಸ್ಟ್ರಿ (ಎಬಿಎಐ) ಸಹಯೋಗದಡಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಮಾಡಲು ಇಚ್ಛಿಸುವ ಕನಸುಗಾರರು ಒಟ್ಟು ಸೇರಲಿದ್ದಾರೆ. ಹೊಸ ಚಿಂತನೆ ಮತ್ತು ತಂತ್ರಜ್ಞಾನಕ್ಕೆ ಸಮ್ಮೇಳನ ಪ್ರೋತ್ಸಾಹ ನೀಡಲಿದೆ’ ಎಂದು ಸಚಿವರು ವಿವರಿಸಿದರು.

ಎವಿಜಿಸಿ ಕ್ಷೇತ್ರದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ನವೋದ್ಯಮ, ಸಣ್ಣ ಉದ್ಯಮ ಆರಂಭಿಸುವವರಿಗೆ ಕೆಐಟಿವಿಇಎನ್‌–4 ನಿಧಿ ಮೂಲಕ ರಾಜ್ಯ ಸರ್ಕಾರವು ಪ್ರೋತ್ಸಾಹ ನೀಡಲಿದೆ. ₹50 ಲಕ್ಷದಿಂದ ₹1 ಕೋಟಿವರೆಗೆ ಪ್ರಾಥಮಿಕ ಹೂಡಿಕೆ ಅನುದಾನ, ಬಳಿಕ ಉದ್ಯಮ ಬೆಳೆಸಲು ₹2 ಕೋಟಿವರೆಗೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ತಜ್ಞರನ್ನು ಒಳಗೊಂಡ ಕೌಶಲ ಸಲಹಾ ಮಂಡಳಿಯನ್ನು ಸರ್ಕಾರ ಸ್ಥಾಪಿಸುತ್ತಿದೆ. ಹೊಸ ತಂತ್ರಜ್ಞಾನಗಳ ಕುರಿತು ಈ ಮಂಡಳಿ ಸಲಹೆ ನೀಡಲಿದೆ. ಎವಿಜಿಸಿ–ಎಕ್ಸ್‌ಆರ್‌ ಪಾರ್ಕ್‌ ಮತ್ತು ಗೇಮಿಂಗ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌ (ಸಿಒಇ) ಮೂಲಕ ಗೇಮಿಂಗ್‌ನಲ್ಲಿ ನಾವೀನ್ಯತೆ, ಸಂಶೋಧನೆ, ಅಭಿವೃದ್ಧಿಗೆ ಸಹಾಯ ಮಾಡಲಾಗುವುದು ಎಂದರು.

ಕಿಯೋನಿಕ್ಸ್‌ ಕೊಡುಗೆಗಳ ಬಗ್ಗೆ ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಮಾಹಿತಿ ನೀಡಿದರು. ಸಮ್ಮೇಳನದ ಬಗ್ಗೆ ಎಬಿಎಐ ಅಧ್ಯಕ್ಷ ಬಿರೇನ್‌ ಘೋಷ್‌ ವಿವರಿಸಿದರು.

ಐಟಿ–ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್‌ ಕೌರ್‌, ಮೊಬೈಲ್‌ ಪ್ರೀಮಿಯರ್‌ ಲೀಗ್‌ ಸಹ ಸಂಸ್ಥಾಪಕ ಸಾಯಿ ಶ್ರೀನಿವಾಸ್‌, ಎನ್‌ವಿಡಿಯಾ ವ್ಯವಸ್ಥಾಪಕ ನಿರ್ದೇಶಕ ವಿಶಾಲ್‌ ದೂಪರ್‌, ಇಟಲಿಯ ಕೌನ್ಸಿಲ್‌ ಜನರಲ್‌ ಅಲ್ಫಾನ್ಸೊ ತಾಗ್‌ಲಿಯ ಫೆರ‍್ರಿ, ಆಸ್ಟ್ರೇಲಿಯಾದ ಕೌನ್ಸಿಲ್‌ ಜನರಲ್‌ ಹಿಲರಿ ಮ್ಯಾಕ್‌ಗೀಚಿ, ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT