ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ನನ್ನ ನಗರ ನನ್ನ ಬಜೆಟ್’ಗೆ ಚಾಲನೆ

ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ ಸಾರ್ವಜನಿಕರ ಸಲಹೆ ಸಂಗ್ರಹ
Last Updated 24 ನವೆಂಬರ್ 2022, 19:52 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ2023-24ನೇ ಸಾಲಿನ ಆಯವ್ಯಯಕ್ಕೆ ಪೂರಕವಾಗಿ ಜನಾಗ್ರಹ ಸಂಸ್ಥೆ ಆರಂಭಿಸಿರುವ ‘ನನ್ನ ನಗರ ನನ್ನ ಬಜೆಟ್‌’ ಅಭಿಯಾನಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಗುರುವಾರ ಚಾಲನೆ ನೀಡಿದರು.

‘ಮುಂದಿನ ಒಂದು ತಿಂಗಳು ಈ ಅಭಿಯಾನ ಎಲ್ಲ 243 ವಾರ್ಡ್‌ಗಳಲ್ಲಿ ಸಂಚರಿಸಲಿದೆ. ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲಿನ ಬಗ್ಗೆ ನಾಗರಿಕರು ಸಲಹೆ ನೀಡಬಹುದು. ಆ ಸಲಹೆ ಹಾಗೂ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಜನಾಗ್ರಹ ನಮಗೆ ಸಲ್ಲಿಸಲಿದೆ. ಬಜೆಟ್‌ ಸಂದರ್ಭದಲ್ಲಿ ಇವುಗಳನ್ನು ಪರಿಗಣಿಸಲಾಗುತ್ತದೆ’ ಎಂದು ಹೇಳಿದರು.

‘ಕಳೆದ ವರ್ಷದ ಆಯವ್ಯಯದಲ್ಲಿ 198 ವಾರ್ಡ್‌ಗಳ ಪೈಕಿ ಪ್ರತಿ ವಾರ್ಡ್‌ಗೆ ತಲಾ ₹1 ಕೋಟಿ ನಿಗದಿಪಡಿಸಲಾಗಿತ್ತು. ಅದನ್ನು ವಾರ್ಡ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ವ್ಯಯಿಸಿದ್ದು, ಅದಕ್ಕಾಗಿ ಈಗಾಗಲೇ ₹70 ಲಕ್ಷ ಬಿಡುಗಡೆ ಮಾಡಲಾಗಿದೆ. ಬಾಕಿ ₹30 ಲಕ್ಷ ರಸ್ತೆಗಳ ಗುಂಡಿ ಮುಚ್ಚಲು ವ್ಯಯಿಸಲಾಗುತ್ತಿದೆ’ ಎಂದರು.

‘ವಾರ್ಡ್‌ಗಳಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕೆಂಬ ಒತ್ತಾಯವಿದೆ. ಅದನ್ನು ಪರಿಶೀಲಿಸಿ ಪ್ರತಿ ವಾರ್ಡ್‌ನಲ್ಲೂ ಆಗಬೇಕಿರುವ ಸ್ಥಳೀಯ ಕಾಮಗಾರಿಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸುವ ಆಲೋಚನೆಯಿದೆ. ಎಲ್ಲವನ್ನೂ ಪರಿಶೀಲಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ನನ್ನ ನಗರ ನನ್ನ ಬಜೆಟ್’ ಅಭಿಯಾನಕ್ಕೆ ನಾಗರಿಕರು http://www.mycitymybudget.in ಮೂಲಕವೂ ಸಲಹೆ ನೀಡಬಹುದಾಗಿದೆ.

ಜನಾಗ್ರಹ ಸಂಸ್ಥೆ ನಾಗರಿಕ ಭಾಗವಹಿಸುವಿಕೆ ಯೋಜನಾ ಮುಖ್ಯಸ್ಥ ಸಂತೋಷ್ ನರಗುಂದ, ಬಿಎಎಫ್, ಬಿ–ಪ್ಯಾಕ್, ವೈಟ್‌ಫೀಲ್ಡ್ ರೈಜರ್ಸ್, ವಾರ್ಡ್ ಸಮಿತಿ ಬಳಗ ಸೇರಿ ಇನ್ನಿತರೆ ಎನ್.ಜಿ.ಒ ಸಂಸ್ಥೆಗಳವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT