‘ದಾಭೋಲ್ಕರ್‌, ಪಾನ್ಸರೆ ಭ್ರಷ್ಟರು’

7
ಹಿಂದೂ ವಕೀಲರ ಸಮಾವೇಶ; ವೀರೇಂದ್ರ ಇಚಲಕರಂಜಿಕರ್‌ ಆರೋಪ

‘ದಾಭೋಲ್ಕರ್‌, ಪಾನ್ಸರೆ ಭ್ರಷ್ಟರು’

Published:
Updated:
Deccan Herald

ಬೆಂಗಳೂರು: ‘ವಿಚಾರವಾದಿಗಳು ಎಂದು ಕರೆಸಿಕೊಳ್ಳುವ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಭ್ರಷ್ಟರು’ ಎಂದು ವಕೀಲ ವೀರೇಂದ್ರ ಇಚಲಕರಂಜಿಕರ್‌ ಆರೋಪಿಸಿದರು.

ನಗರದಲ್ಲಿ ಶ್ರೀರಾಮಸೇನೆ ಆಯೋಜಿಸಿದ್ದ ಹಿಂದೂ ವಕೀಲರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಗೌರಿಲಂಕೇಶ್‌ ಅವರ ಪತ್ರಿಕೆ ನೋಂದಣಿ ಆಗಿರಲಿಲ್ಲ. ಕೇವಲ 2,000 ಪ್ರಸರಣ ಸಂಖ್ಯೆ ಹೊಂದಿತ್ತು. ಆದರೂ, ಅವರು ಹೇಗೆ ಜೀವನ ಮಾಡುತ್ತಿದ್ದರು’ ಎಂದು ಅವರು ಪ್ರಶ್ನಿಸಿದರು.

‘ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ನಂತರ ಕೇವಲ ನಾಲ್ವರು ಎಡಪಂಥೀಯರ ಹತ್ಯೆಯಾಗಿದೆ. ಆದರೆ, ನೂರಾರು ಹಿಂದೂಗಳ ಮಾರಣಹೋಮ ನಡೆದಿದ್ದರೂ ಧ್ವನಿ ಎತ್ತುತ್ತಿಲ್ಲ. ಹಿಂದೂ ಹೋರಾಟಗಾರರಿಗೆ ವಕೀಲರು ಬೆಂಬಲವಾಗಿ ನಿಲ್ಲಬೇಕು. ಉದ್ದೇಶಪೂರ್ವಕವಾಗಿ ಬಂಧಿಸಿ ಹಿಂಸೆ ಮಾಡುವುದು ತಪ್ಪಬೇಕು’ ಎಂದು ಹೇಳಿದರು.

ವಕೀಲ ಅಮೃತೇಶ್‌, ‘ಹಿಂದೂ ಹೋರಾಟಗಾರರು ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿಬಿದ್ದರೆ, ಇವರು ನಮ್ಮ ಸಂಘಟನೆಗೆ ಸೇರಿದವರಲ್ಲ ಎಂದು ನುಣುಚಿಕೊಳ್ಳುವವರು ಹೆಚ್ಚಾಗಿದ್ದಾರೆ. ಇದು ತಪ್ಪು. ನಾವು ಒಕ್ಕೊರಲಿನಿಂದ ಹಿಂದುತ್ವ ಉಳಿಸಿಕೊಳ್ಳಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !