ಆನ್‌ಲೈನ್‌ ಕೆಲಸದಿಂದ ಮುಕ್ತಿ ನೀಡಿ: ಪ್ರಾಥಮಿಕ ಶಾಲಾ ಶಿಕ್ಷಕರ ಆಗ್ರಹ

7

ಆನ್‌ಲೈನ್‌ ಕೆಲಸದಿಂದ ಮುಕ್ತಿ ನೀಡಿ: ಪ್ರಾಥಮಿಕ ಶಾಲಾ ಶಿಕ್ಷಕರ ಆಗ್ರಹ

Published:
Updated:

ಬೆಂಗಳೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಕೆಲಸದಿಂದ ಮುಕ್ತಗೊಳಿಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

‘ಶಿಕ್ಷಕರು ಈಗಾಗಲೇ ಹಲವಾರು ಬೋಧಕೇತರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಬಿಸಿಯೂಟ, ಶಾಲಾ ಕಟ್ಟಡಗಳ ಕಾಮಗಾರಿ, ವಿದ್ಯಾರ್ಥಿಗಳ ಮೌಲ್ಯಾಂಕನ ವಿವರಗಳನ್ನು ಇಲಾಖೆಯ ಆನ್‌ಲೈನ್‌ ಟ್ರ್ಯಾಕಿಂಗ್‌ ವ್ಯವಸ್ಥೆಯಲ್ಲಿ ತುಂಬುತ್ತಿದ್ದಾರೆ’ 

‘ಕ್ರೀಡಾಕೂಟ, ಪ್ರತಿಭಾ ಕಾರಂಜಿಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದರ ಜತೆಗೆ ಅಕ್ಟೋಬರ್‌ನಲ್ಲಿ ನಡೆಸಲಾಗುತ್ತಿರುವ ಸಂಕಲನಾತ್ಮಕ ಪರೀಕ್ಷೆಗೆ ಮಾರ್ಗದರ್ಶನ ಮಾಡಬೇಕಿದೆ. ಇದರಿಂದ ಒತ್ತಡ ಹೆಚ್ಚಿದೆ. ಜತೆಗೆ ವಿದ್ಯಾರ್ಥಿವೇತನಕ್ಕಾಗಿ ಮಾಹಿತಿ ಭರ್ತಿ ಮಾಡುವ ಹೆಚ್ಚುವರಿ ಹೊರೆ ಬಿದ್ದಿದೆ. ಸರ್ವರ್‌ಗಳು ಬ್ಯೂಸಿ ಆಗಿರುವುದರಿಂದ ಮಾಹಿತಿಯೂ ತಕ್ಷಣ ಭರ್ತಿ ಆಗುತ್ತಿಲ್ಲ. ಅಧಿಕಾರಿಗಳಿಂದ ನೋಟಿಸ್‌ ಬರುವ ಭಯದಲ್ಲಿ ಶಿಕ್ಷರಿದ್ದಾರೆ. ಆನ್‌ಲೈನ್‌ ಕೆಲಸವನ್ನು ಕಡಿತಗೊಳಿಸಿ’ ಎಂದು ಸಂಘವು ಮುಖ್ಯ ಕಾರ್ಯದರ್ಶಿಗೆ ಮನವಿ ಸಹ ಸಲ್ಲಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !