ಕಪ್ಪು ಪಟ್ಟಿ ಧರಿಸಿ ಅಧ್ಯಾಪಕರ ಪ್ರತಿಭಟನೆ

7

ಕಪ್ಪು ಪಟ್ಟಿ ಧರಿಸಿ ಅಧ್ಯಾಪಕರ ಪ್ರತಿಭಟನೆ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ‘ಉನ್ನತ ಶಿಕ್ಷಣ ಕಾಯ್ದೆ–2018’ನ್ನು ವಿರೋಧಿಸಿ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.

ರಾಜ್ಯದಾದ್ಯಂತ ಇರುವ ಸುಮಾರು ಹತ್ತು ಸಾವಿರ ಅಧ್ಯಾಪಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ತವ್ಯ ನಿರ್ವಹಿಸುತ್ತಲೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಏಳನೇ ವೇತನ ಆಯೋಗ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಕನಿಷ್ಠ ಐದು ವರ್ಷಗಳ ಕಾಲ ಆರ್ಥಿಕ ಸಹಾಯವನ್ನು ನೀಡಬೇಕು. ಅರೆ ಕಾಲಿಕ, ತಾತ್ಕಲಿಕ, ಅತಿಥಿ, ಹಂಗಾಮಿ ಉಪನ್ಯಾಸಕರಿಗೆ ಏಕರೂಪ ವೇತನ ಹಾಗೂ ಸೇವಾ ನಿಯಮಗಳನ್ನು ಜಾರಿಗೊಳಿಸುವುದು. ಆರನೇ ವೇತನ ಆಯೋಗದ ನ್ಯೂನತೆಗಳನ್ನು ಸರಿಪಡಿಸುವುದು ಸೇರಿ ವಿವಿಧ ಪ್ರಮುಖ ಏಳು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ.

‘ಅಧ್ಯಾಪಕ ಸಂಘಟನೆಗಳ ಜೊತೆಗೆ ಚರ್ಚಿಸಿ, ಈ ಎಲ್ಲಾ ಬೇಡಿಕೆಗಳಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕ ಸಂಘಗಳ ಒಕ್ಕೂಟವು ಪ್ರಧಾನಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !